SUDDIKSHANA KANNADA NEWS/ DAVANAGERE/ DATE:02-08-2024
ದಾವಣಗೆರೆ: ಭದ್ರಾ ಜಲಾನಯನ ಪ್ರದೇಶದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಮಳೆ ಕುಂಠಿತಗೊಂಡಿದೆ. ಜಲಾಶಯಕ್ಕೆ ಬರುತ್ತಿರುವ ಒಳಹರಿವಿನ ಪ್ರಮಾಣ ಕಡಿಮೆ ಆಗಿದೆ. ಜಲಾಶಯಕ್ಕೆ ಒಳಹರಿವು 38870 ಕ್ಯೂಸೆಕ್ ಇದ್ದರೆ, ಹೊರ ಹರಿವು 56,636 ಕ್ಯೂಸೆಕ್ ಇದೆ. ಜಲಾಶಯದ ಇಂದಿನ ನೀರಿನ ಮಟ್ಟ 182.7 ಅಡಿಗೆ ಕುಸಿತ ಕಂಡಿದೆ.
ಭದ್ರಾ ಜಲಾಶಯದಿಂದ ಭಾರೀ ಪ್ರಮಾಣದಲ್ಲಿ ನೀರು ಹೊರಗಡೆ ಬಿಡಲಾಗುತ್ತಿದೆ. ಡ್ಯಾಂನಿಂದ ಅಪಾರ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡಲಾಗುತ್ತಿದೆ. ಗುರುವಾರಕ್ಕೆ ಹೋಲಿಸಿದರೆ ಸುಮಾರು 9 ಸಾವಿರ ಕ್ಯೂಸೆಕ್ ಹೊರ ಹರಿವು ಕಡಿಮೆ ಆಗಿದೆ. ಜಲಾಶಯಕ್ಕೆ ಬರುತ್ತಿದ್ದ ಒಳಹರಿವಿನಲ್ಲಿಯೂ ಭಾರೀ ಕಡಿಮೆಯಾಗಿದೆ. 18 ಸಾವಿರ ಕ್ಯೂಸೆಕ್ ಕಡಿಮೆಯಾಗಿದೆ. ಈ ಹಿನ್ನೆಲೆಯಲ್ಲಿ ಭದ್ರಾವತಿ ಸೇರಿದಂತೆ ಹಲವೆಡೆ ತಲೆದೋರಿದ್ದ ಪ್ರವಾಹ ಭೀತಿ ಸ್ವಲ್ಪ ಪ್ರಮಾಣದಲ್ಲಿ ಕಡಿಮೆಯಾಗಿದ್ದು, ನೆಮ್ಮದಿ ತಂದಿದೆ.
ಡ್ಯಾಂನ ನೀರಿನ ಮಟ್ಟ 182.7 ಅಡಿ ಆಗಿದ್ದು, ಜಲಾಶಯಕ್ಕೆ ಹೆಚ್ಚಿನ ಒಳಹರಿವು ಇರುವ ಕಾರಣಕ್ಕೆ ಮುಂಜಾಗ್ರತಾ ಕ್ರಮವಾಗಿ ನೀರು ಹೊರಬಿಡುಲಾಗುತ್ತಿದೆ.
ಕಳೆದೊಂದು ವಾರದಿಂದ ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಮಳೆ ಆರ್ಭಟಿಸಿ, ಬೊಬ್ಬಿರಿಯುತ್ತಿದೆ. ಜಲಾಶಯಕ್ಕೆ ಭಾರೀ ಪ್ರಮಾಣದಲ್ಲಿ ನೀರು ಹರಿದು ಬಂದ ಕಾರಣ ಜಲಾಶಯದಿಂದ ಅಪಾರ ಪ್ರಮಾಣದಲ್ಲಿ ನೀರು ಬಿಟ್ಟರೂ, ಒಳಹರಿವು ಹೆಚ್ಚಾದಂತೆಲ್ಲಾ ಹೊರ ಹರಿವು ಹೆಚ್ಚಾಗುತ್ತದೆ.
ಭದ್ರಾ ಎಡದಂಡೆ ಹಾಗೂ ಬಲದಂಡೆ ನಾಲೆಗಳಿಗೆ ಹರಿಸುತ್ತಿದ್ದ ನೀರಿನ ಪ್ರಮಾಣವೂ ಹೆಚ್ಚಾಗಿದೆ. ಭದ್ರಾ ಬಲದಂಡೆ ನಾಲೆಗೆ 2325 ಕ್ಯೂಸೆಕ್ ಹೊರ ಬಿಡಲಾಗುತ್ತಿದ್ದರೆ, ಎಡದಂಡೆ ನಾಲೆಯಲ್ಲಿ 180 ಕ್ಯೂಸೆಕ್ ಹರಿಸಲಾಗುತ್ತಿದೆ.
ಕಳೆದ ವರ್ಷ ಇದೇ ದಿನ ಡ್ಯಾಂನ ನೀರಿನ ಮಟ್ಟ 163.3 ಅಡಿ ಇತ್ತು. ಒಳಹರಿವು 6729 ಕ್ಯೂಸೆಕ್ ಇತ್ತು. ಈ ವರ್ಷ 182.7 ಅಡಿ ಆಗಿದೆ. ಜಲಾಶಯದ ಗರಿಷ್ಠ ಮಟ್ಟ 186 ಅಡಿ ಆದರೂ ಜಲಾಶಯಕ್ಕೆ ಭಾರೀ ಪ್ರಮಾಣದಲ್ಲಿ ಇಂದೂ ನೀರು ಬರುವ ಸಾಧ್ಯತೆ ಇದೆ.
ಚಿಕ್ಕಮಗಳೂರು ಜಿಲ್ಲೆಯ ಬಾಳೇಹೊನ್ನೂರು, ಕಳಸ ಸೇರಿದಂತೆ ಜಲಾನಯನ ಪ್ರದೇಶದಲ್ಲಿ ಮಳೆ ಸುರಿಯುತ್ತಿದೆ. ಹಿನ್ನೀರು ಪ್ರದೇಶದಲ್ಲಿಯೂ ಧಾರಾಕಾರ ಮಳೆಯಾಗುತ್ತಿದೆ. ಒಟ್ಟಿನಲ್ಲಿ ದಾವಣಗೆರೆ, ಶಿವಮೊಗ್ಗ, ಚಿತ್ರದುರ್ಗ ಜಿಲ್ಲೆಗಳ ಜನರ ಜೀವನಾಡಿಯಾದ ಭದ್ರೆ ಉಕ್ಕಿ ಹರಿಯುತ್ತಿರುವುದು ರೈತರು, ಜನರ ಸಂತಸಕ್ಕೆ ಕಾರಣವಾಗಿದೆ.
ಭದ್ರಾ ಡ್ಯಾಂ ನೀರಿನ ಮಟ್ಟ
- ಭದ್ರಾ ಡ್ಯಾಂ ನೀರಿನ ಒಟ್ಟು ಸಂಗ್ರಹ: 186 ಅಡಿ
- ದಿನಾಂಕ:02-08-2024
- ಭದ್ರಾ ಡ್ಯಾಂ ಇಂದಿನ ನೀರಿನ ಮಟ್ಟ: 182.7 ಅಡಿ
- ಕೆಪಾಸಿಟಿ: 67.295 ಟಿಎಂಸಿ
- ಒಳಹರಿವು: 38870 ಕ್ಯೂಸೆಕ್
- ಕ್ರಸ್ಟ್ ಗೇಟ್ ಹೊರಹರಿವು: 52717 ಕ್ಯೂಸೆಕ್
- ಭದ್ರಾ ಎಡದಂಡೆ ನಾಲೆ: 180 ಕ್ಯೂಸೆಕ್
- ಭದ್ರಾ ಬಲದಂಡೆ ನಾಲೆ: 2325 ಕ್ಯೂಸೆಕ್
- ಒಟ್ಟು ಹೊರ ಹರಿವು: 56636ಕ್ಯೂಸೆಕ್
- ಕಳೆದ ವರ್ಷ ಇದೇ ದಿನ ಡ್ಯಾಂ ನೀರಿನ ಮಟ್ಟ: 163.3 ಅಡಿ
- ಕಳೆದ ವರ್ಷ ಇದೇ ದಿನ ಒಳಹರಿವು: 6729 ಕ್ಯೂಸೆಕ್