SUDDIKSHANA KANNADA NEWS/ DAVANAGERE/ DATE:29-07-2024
ದಾವಣಗೆರೆ:ಭದ್ರಾ ಜಲಾನಯನ, ಹಿನ್ನೀರು ಪ್ರದೇಶದಲ್ಲಿ ಮಳೆ ಕಡಿಮೆಯಾಗಿದೆ. ಕಳೆದ ಹದಿನೈದು ದಿನಗಳಿಂದ ಅಬ್ಬರಿಸಿ ಬೊಬ್ಬಿರಿದಿದ್ದ ವರುಣ ನಿಧಾನವಾಗಿ ಶಾಂತವಾಗುತ್ತಿದ್ದಾನೆ. ಭದ್ರಾ ಜಲಾಶಯದ ನೀರಿನ ಮಟ್ಟ 181.11 ಅಡಿ ತಲುಪಿದ್ದು, ಭರ್ತಿಗೆ ಇನ್ನು ಕೇವಲ 4.9 ಅಡಿ ನೀರು ಬರಬೇಕು.
ಜಲಾಶಯದ ಗರಿಷ್ಠ ನೀರಿನ ಮಟ್ಟ 186 ಅಡಿ ಆಗಿದ್ದು, ಭದ್ರಾ ಜಲಾಶಯಕ್ಕೆ 18,381 ಕ್ಯೂಸೆಕ್ ಹರಿದು ಬರುತ್ತಿದೆ. ಹೊರ ಹರಿವು ಜಾಸ್ತಿಯಾಗಿದ್ದು, 962 ಕ್ಯೂಸೆಕ್ ಹೊರ ಹರಿವು ಇದೆ. ಡ್ಯಾಂ ಭರ್ತಿಗೆ ಕ್ಷಣಗಣನೆ ಶುರುವಾಗಿದ್ದರೂ ಜಲಾಶಯಕ್ಕೆ ಬರುತ್ತಿರುವ ಒಳಹರಿವು ಭಾರೀ ಪ್ರಮಾಣದಲ್ಲಿ ಕಡಿಮೆಯಾಗಿದೆ. ಬರೋಬ್ಬರಿ 17 ಸಾವಿರದಷ್ಟು ಕ್ಯೂಸೆಕ್ ನೀರು ಕುಂಠಿತಗೊಂಡಿದೆ.
ಇನ್ನೂ 4.9 ಅಡಿ ನೀರು ಬರಬೇಕಿದ್ದು, ಇನ್ನು ಮೂರು ದಿನ ವರುಣ ಅಬ್ಬರಿಸಿ ಬೊಬ್ಬಿರಿದರೆ ಮಾತ್ರ ಭದ್ರಾ ಜಲಾಶಯವು ಗರಿಷ್ಠ ಮಟ್ಟ ತಲುಪಲಿದೆ. ಭಾನುವಾರ ಜಲಾಶಯಕ್ಕೆ 35,557 ಕ್ಯೂಸೆಕ್ ಒಳಹರಿವಿದ್ದು, ಈ ತಿಂಗಳ ಅಂತ್ಯದೊಳಗೆ ಜಲಾಶಯ ಭರ್ತಿಯಾಗುವ ಸಾಧ್ಯತೆ ಕಾಣಿಸಿತ್ತು. ಮಾತ್ರವಲ್ಲ, ಜಲಾಶಯ ಇನ್ನೆರಡು ದಿನಗಳಲ್ಲಿ ಭರ್ತಿಯಾಗಲಿದೆ ಎಂದು ಅಂದಾಜಿಸಲಾಗಿತ್ತು. ಆದ್ರೆ. ಇಂದು. ನಾಳೆ ಭಾರೀ ಮಳೆಯಾದರೆ ಮಾತ್ರ ಡ್ಯಾಂಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಹರಲಿದೆ. ಈ ವರ್ಷ ಭದ್ರಾ ಡ್ಯಾಂ ಭರ್ತಿಯಾಗುವುದು ಖಚಿತ. ಈ ಮೂಲಕ ಭದ್ರಾ ಅಚ್ಚುಕಟ್ಟುದಾರ ಪ್ರದೇಶದ ರೈತರು ಈ ಬಾರಿ ಎರಡು ಬೆಳೆ ಬೆಳೆಯಲು ನೀರು ಸಿಗಲಿದೆ.
ಜಲಾಶಯದ ಗರಿಷ್ಠ ನೀರಿನ ಮಟ್ಟ 186 ಅಡಿ ಆಗಿದೆ. ಜಲಾಶಯಕ್ಕೆ ಈ ವರ್ಷ ಅತ್ಯಧಿಕ ಒಳಹರಿವು ನೀರು ಹರಿದು ಬಂದಿದ್ದು, ಇದು ದಾಖಲೆ ಪ್ರಮಾಣದ್ದು. ಸದ್ಯಕ್ಕೆ 35500 ಹೆಚ್ಚು ಕ್ಯೂಸೆಕ್ ಹರಿದು ಬಂದಿದೆ, ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಮಳೆ ಕಡಿಮೆಯಾಗಿದೆ. ಜಲಾಶಯ ಭರ್ತಿಯಾಗಲು ಇನ್ನು ಕೇವಲ 4.9 ಅಡಿ ಮಾತ್ರ ಬೇಕು. ಮಳೆ ಜೋರಾದರೆ ಒಳಹರಿವು ಹೆಚ್ಚಾಗಲಿದೆ. ಈ ಕಾರಣಕ್ಕೆ ಜಲಾಶಯಕ್ಕೆ ಒಳಹರಿವು ಮುಂದುವರಿದರೆ ಯಾವುದೇ ಕ್ಷಣದಲ್ಲಾದರೂ ನೀರು ಹೊರ ಬಿಡುವ ಸಾಧ್ಯತೆ ಇದೆ. ಹಾಗಾಗಿ, ಭದ್ರಾ ನದಿ ಹಾಗೂ ನಾಲೆಗಳ ಅಕ್ಕಪಕ್ಕದ ವಾಸಿಗಳಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚನೆ ನೀಡಲಾಗಿದೆ.
ಭದ್ರಾ ನದಿ ಉಕ್ಕಿ ಹರಿಯುತ್ತಿದ್ದು, ಸೇತುವೆಗಳು ಮುಳುಗಿವೆ. ಭದ್ರಾ ಜಲಾಶಯವು ಕಳೆದ ವರ್ಷ ಇದೇ ದಿನ 160.9 ಅಡಿ ನೀರು ಸಂಗ್ರಹ ಇತ್ತು. 180 ಅಡಿ ದಾಟಿ ಗರಿಷ್ಟ ಮಟ್ಟದತ್ತ ಸಾಗುತ್ತಿರುವುದು ದಾವಣಗೆರೆ, ಶಿವಮೊಗ್ಗ, ಚಿತ್ರದುರ್ಗ ಜಿಲ್ಲೆಗಳ ರೈತರು ಹಾಗೂ ಜನರ ಸಂತಸ ಇಮ್ಮಡಿಯಾಗುವಂತೆ ಮಾಡಿದೆ.
ಭದ್ರಾ ಜಲಾನಯನ ಪ್ರದೇಶ ಹಾಗೂ ಹಿನ್ನೀರು ಪ್ರದೇಶದಲ್ಲಿ ಮಳೆ ಸಾಧಾರಣ ಆಗುತ್ತಿದೆ. ಜಲಾಶಯಕ್ಕೆ ಬರುತ್ತಿದ್ದ ಒಳಹರಿವಿನ ಪ್ರಮಾಣ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ. ಆಗಸ್ಚ್ 1ರವರೆಗೆ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆಯು ತಿಳಿಸಿರುವ ಕಾರಣ ಜಲಾಶಯದ ಆದಷ್ಟು ಬೇಗ ಭರ್ತಿಯಾಗಲಿದ್ದು, ನದಿಯಿಂದ ನೀರು ಹೊರ ಬಿಡಲಾಗುತ್ತದೆ.
ಭದ್ರಾ ಡ್ಯಾಂ ನೀರಿನ ಮಟ್ಟ
-
ಭದ್ರಾ ಡ್ಯಾಂ ನೀರಿನ ಒಟ್ಟು ಸಂಗ್ರಹ: 186 ಅಡಿ
-
ದಿನಾಂಕ: 29- 07-2024
-
ಭದ್ರಾ ಡ್ಯಾಂ ಇಂದಿನ ನೀರಿನ ಮಟ್ಟ: 181.11 ಅಡಿ
-
ಕೆಪಾಸಿಟಿ: 66.382 ಟಿಎಂಸಿ
-
ಒಳಹರಿವು: 18,381 ಕ್ಯೂಸೆಕ್
-
ಒಟ್ಟು ಹೊರಹರಿವು: 902 ಕ್ಯೂಸೆಕ್
-
ಕಳೆದ ವರ್ಷ ಇದೇ ದಿನ ಡ್ಯಾಂ ನೀರಿನ ಮಟ್ಟ: 160.9 ಅಡಿ
-
ಕೆಪಾಸಿಟಿ: 43.651 ಟಿಎಂಸಿ
-
ಕಳೆದ ವರ್ಷ ಇದೇ ದಿನ ಒಳಹರಿವು: 13659 ಕ್ಯೂಸೆಕ್