SUDDIKSHANA KANNADA NEWS/ DAVANAGERE/ DATE:27-07-2024
ದಾವಣಗೆರೆ: ಭದ್ರಾ ಜಲಾಶಯದ ಹಿನ್ನೀರು ಪ್ರದೇಶದಲ್ಲಿ ಭಾರೀ ಮಳೆಯಾಗಿದ್ದು, ಡ್ಯಾಂಗೆ ಒಳಹರಿವು ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದೆ. 49,801 ಕ್ಯೂ,ಸೆಕ್ ಒಳಹರಿವಿದ್ದು, ಒಂದೇ ದಿನ 3.7 ಅಡಿ ನೀರು ಹರಿದು ಬಂದಿದೆ.
ಭದ್ರಾ ಜಲಾಶಯದ ಗರಿಷ್ಠ ಮಟ್ಟ 186 ಅಡಿ ಆಗಿದ್ದು, ಜಲಾಶಯ ಭರ್ತಿಗೆ ಇನ್ನು ಕೇವಲ 8 ಅಡಿ ಬಾಕಿ ಇದೆ. 49,801 ಕ್ಯೂಸೆಕ್ ಹರಿದು ಬರುತ್ತಿರುವ ಕಾರಣ ಜಲಾಶಯದ ಮಟ್ಟ ಮತ್ತೆ ಹೆಚ್ಚಳವಾಗಲಿದೆ.ಚಿಕ್ಕಮಗಳೂರು, ಕಳಸ, ಹೊರನಾಡು, ಕುದುರೇಮುಖ, ನರಸಿಂಹರಾಜಪುರ ಸೇರಿದಂತೆ ಪಶ್ಚಿಮಘಟ್ಟದಲ್ಲಿ ವರುಣ ಅಬ್ಬರಿಸಿ ಬೊಬ್ಬಿರಿದಿದ್ದು, ಜಲಾಶಯಕ್ಕೆ ಈ ವರ್ಷ ಅತ್ಯಧಿಕ ಒಳಹರಿವು ಬಂದಿದೆ. ಈ ತಿಂಗಳೊಳಗೆ ಜಲಾಶಯ ಭರ್ತಿ ಆಗುವ ಲಕ್ಷಣ ಗೋಚರಿಸುತ್ತಿದೆ.
ಭದ್ರಾ ಜಲಾಶಯದ ನೀರಿನ ಮಟ್ಟ ಶುಕ್ರವಾರ 174.3 ಅಡಿ ಆಗಿತ್ತು. ಇಂದು ಜಲಾಶಯದ ನೀರಿನ ಮಟ್ಟ 178 ಅಡಿ ಆಗಿದ್ದು, ಭದ್ರಾ ಅಚ್ಚುಕಟ್ಟುದಾರರು, ರೈತರು ಹಾಗೂ ಜನರ ಸಂತಸಕ್ಕೆ ಕಾರಣವಾಗಿದೆ ಜುಲೈ 29ಕ್ಕೆ ಶಿವಮೊಗ್ಗದ ಕಾಡಾದಲ್ಲಿ ಸಿಇಸಿ ಸಭೆ ನಡೆಯಲಿದ್ದು, ಅದಕ್ಕೂ ಮುನ್ವವೇ ಡ್ಯಾಂ ಭರ್ತಿಯಾಗುವ ಲಕ್ಷಣ ಗೋಚರಿಸುತ್ತಿದೆ.
ಧಾರಾಕಾರ ಮಳೆ ಭದ್ರಾ ಜಲಾನಯನ ಪ್ರದೇಶ ಹಾಗೂ ಹಿನ್ನೀರು ಪ್ರದೇಶದಲ್ಲಿ ಆಗುತ್ತಿದೆ. ಜಲಾಶಯಕ್ಕೆ ಬರುತ್ತಿದ್ದ ಒಳಹರಿವಿನ ಪ್ರಮಾಣ ಒಂದೇ ದಿನಕ್ಕೆ 14,500 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ನೀರು ಹರಿದು ಬಂದಿದೆ. ಹಾಗಾಗಿ ಭದ್ರಾ ಡ್ಯಾಂ
ಭರ್ತಿಗೆ ಕ್ಷಣಗಣನೆ ಶುರುವಾಗಿದೆ.
ಶುಕ್ರವಾರ ಭದ್ರಾ ಜಲಾಶಯದ ಇಂದಿನ ನೀರಿನ ಮಟ್ಟ 174.3 ಅಡಿ ಆಗಿದ್ದು, ಜಲಾಶಯಕ್ಕೆ ಒಂದೇ ದಿನ 4.3 ಅಡಿ ನೀರು ಬಂದಿತ್ತು. ಜಲಾಶಯಕ್ಕೆ 35,318 ಕ್ಯೂಸೆಕ್ ಒಳಹರಿವಿದ್ದು, ಶುಕ್ರವಾರಕ್ಕೆ ಹೋಲಿಸಿದರೆ 14500 ಕ್ಯೂಸೆಕ್ ಹೆಚ್ಚು ಹರಿದು
ಬರುತ್ತಿದೆ.
ಭದ್ರಾ ಜಲಾನಯನ ಪ್ರದೇಶದಲ್ಲಿ ಮಳೆ ಸುರಿಯುತ್ತಿದ್ದು,ಒಳಹರಿವಿನ ಪ್ರಮಾಣ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಜಲಾಶಯ ಭರ್ತಿಯಾಗಲು ಇನ್ನು ಕೇವಲ 8 ಅಡಿ ನೀರು ಬರಬೇಕಷ್ಟೇ. ಇದೇ ರೀತಿ ಮುಂದುವರಿದು, ಜಲಾಶಯಕ್ಕೆ
ಒಳಹರಿವು ಹೆಚ್ಚಾದರೆ, ವರುಣ ಅಬ್ಬರಿಸಿ ಬೊಬ್ಬಿರಿದರೆ ಈ ತಿಂಗಳೊಳಗೆ ಭರ್ತಿಯಾಗುವುದು ಖಚಿತ.
ಆಗಸ್ಚ್ 1 ರವರೆಗೆ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆಯು ತಿಳಿಸಿರುವ ಕಾರಣ ಜಲಾಶಯದ ಆದಷ್ಟು ಬೇಗ ಭರ್ತಿಯಾಗಲಿದೆ.
ಭದ್ರಾ ಡ್ಯಾಂ ನೀರಿನ ಮಟ್ಟ
-
ಭದ್ರಾ ಡ್ಯಾಂ ನೀರಿನ ಒಟ್ಟು ಸಂಗ್ರಹ: 186 ಅಡಿ
-
ದಿನಾಂಕ: 27- 07-2024
-
ಭದ್ರಾ ಡ್ಯಾಂ ಇಂದಿನ ನೀರಿನ ಮಟ್ಟ: 178 ಅಡಿ
-
ಕೆಪಾಸಿಟಿ: 61.823 ಟಿಎಂಸಿ
-
ಒಳಹರಿವು: 49801 ಕ್ಯೂಸೆಕ್
-
ಒಟ್ಟು ಹೊರಹರಿವು: 206 ಕ್ಯೂಸೆಕ್
-
ಕಳೆದ ವರ್ಷ ಇದೇ ದಿನ ಡ್ಯಾಂ ನೀರಿನ ಮಟ್ಟ: 158 ಅಡಿ
-
ಕೆಪಾಸಿಟಿ: 41.081 ಟಿಎಂಸಿ
-
ಕಳೆದ ವರ್ಷ ಇದೇ ದಿನ ಒಳಹರಿವು: 28,296 ಕ್ಯೂಸೆಕ್