SUDDIKSHANA KANNADA NEWS/ DAVANAGERE/ DATE:17-07-2024
ದಾವಣಗೆರೆ: ಭದ್ರಾ ಜಲಾನಯನ, ಚಿಕ್ಕಮಗಳೂರು ಜಿಲ್ಲೆಯಾದ್ಯಂತ ವರುಣನ ಆರ್ಭಟ ಮುಂದುವರಿದಿದೆ. ಜಲಾಶಯಕ್ಕೆ ಬರುತ್ತಿರುವ ಒಳಹರಿವು ಭಾರೀ ಪ್ರಮಾಣದಲ್ಲಿ ಹೆಚ್ಚಾಗಿದೆ.3.9 ಅಡಿ ನೀರು ಹೆಚ್ಚಾಗಿದೆ. ಒಂದೇ ದಿನಕ್ಕೆ ಜಲಾಶಯಕ್ಕೆ 3.9 ಅಡಿ ನೀರು ಹೆಚ್ಚು ಹರಿದು ಬಂದಿದೆ.
ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಮಳೆ ಸುರಿಯುತ್ತಿದೆ. ಹಳ್ಳಕೊಳ್ಳಗಳೂ ಸೇರಿದಂತೆ ಎಲ್ಲೆಡೆ ವರುಣನ ರುದ್ರನರ್ತನ ಹೆಚ್ಚಾಗಿದೆ. ಭದ್ರಾ ಹಿನ್ನೀರು ಪ್ರದೇಶದಲ್ಲಿಯೂ ವರುಣಾರ್ಭಟ ಹೆಚ್ಚಾಗಿದ್ದು, ಜಲಾಶಯಕ್ಕೆ 34,544 ಕ್ಯೂಸೆಕ್ ಒಳಹರಿವಿದೆ. ಈ ವರ್ಷದಲ್ಲಿ ಅತ್ಯಧಿಕ ಒಳಹರಿವು ಇದಾಗಿದೆ. ಜಲಾಶಯದ ನೀರಿನ ಮಟ್ಟ 148.6 ಅಡಿ ನೀರಿಗೆ ಹೆಚ್ಚಳವಾಗಿದೆ. ಒಂದೇ ದಿನ ಜಲಾಶಯಕ್ಕೆ 3.9 ಅಡಿ ನೀರು ಹರಿದು ಬಂದಿರುವುದು ರೈತರಿಗೆ ಖುಷಿ ನೀಡಿದೆ. ಡ್ಯಾಂ 150 ಅಡಿ ನೀರು ನಾಳೆಗೆ ಬರುತ್ತದೆ.
ಯಾಕೆಂದರೆ ಈಗಾಗಲೇ 35 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ನೀರು ಹರಿದು ಬರುತ್ತಿರುವುದರಿಂದ 150ರ ಗಡಿ ದಾಟುವುದು ಬಹುತೇಕ ಖಚಿತ. ಇದು ರೈತರ, ಜನರ ಖುಷಿಗೆ ಕಾರಣವಾಗಿದೆ.
ಜಲಾಶಯಕ್ಕೆ ಮಂಗಳವಾರ ಒಂದೇ ದಿನ ಮೂರು ಅಡಿ ನೀರು ಹರಿದು ಬಂದಿರುವುದು ಜಲಾಶಯದ ಅವಲಂಬಿತ ರೈತರು, ಜನರು ಸಂತಸಪಡುವಂತಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ 3 ಅಡಿಗೂ ಹೆಚ್ಚು ನೀರು ಜಲಾಶಯದಲ್ಲಿ ಸಂಗ್ರಹವಾಗಿತ್ತು. ಈಗ ಸುಮಾರು ನಾಲ್ಕು ಅಡಿ ನೀರು ಬಂದಿದೆ. ಜಲಾಶಯದ ನೀರಿನ ಮಟ್ಟ 148.6 ಅಡಿಗೆ ಹಚ್ಚಳವಾಗಿದೆ.
ಒಂದೇ ದಿನಕ್ಕೆ ನಾಲ್ಕು ಅಡಿ ನೀರು ಹೆಚ್ಚು ಬಂದಿರುವುದರಿಂದ ಜಲಾಶಯದ ನೀರಿನ ಮಟ್ಟ 148.6 ಅಡಿ ಏರಿಕೆಯಾಗಿದೆ. ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ಬುಧವಾರವೂ ವರುಣ ಅಬ್ಬರಿಸಿ ಬೊಬ್ಬಿರಿಯುವ ಸಾಧ್ಯತೆ ಇದೆ. ಭದ್ರಾ ಜಲಾಶಯಕ್ಕೆ ಬರುತ್ತಿರುವ ಒಳಹರಿವು ಹೆಚ್ಚಾಗಿದೆ. ಭಾನುವಾರಕ್ಕಿಂತ ಸೋಮವಾರದಿಂದ ಇಂದಿಗೆ ಹೋಲಿಸಿದರೆ 33 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ಹೆಚ್ಚು ಹರಿದು ಬರುತ್ತಿದ್ದು, ಇದು ರೈತರ ಸಂತಸಕ್ಕೆ ಕಾರಣವಾಗಿದೆ.
ಕಳೆದ ವರ್ಷವೂ 141.4 ಅಡಿ ನೀರು ಸಂಗ್ರಹವಿತ್ತು. ಆದ್ರೆ, ಈ ವರ್ಷ 148.6 ಅಡಿ ನೀರು ಸಂಗ್ರಹ ಆಗಿದೆ. ಒಳಹರಿವು ಹೆಚ್ಚಾಗಿರುವ ಕಾರಣ ನೀರಿನ ಮಟ್ಟ ಹೆಚ್ಚಳವಾಗುವ ಸಾಧ್ಯತೆ ಇದೆ. ಆದ್ರೆ, ಈ ವರ್ಷ 34544 ಕ್ಯೂಸೆಕ್ ಒಳಹರಿವಿದ್ದರೆ, 169 ಕ್ಯೂಸೆಕ್ ಹೊರ ಹರಿವು ಇದೆ. ಭದ್ರಾ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದ್ದು, ಗುರುವಾರದ ಹೊತ್ತಿಗೆ ಜಲಾಶಯದ ನೀರಿನ ಮಟ್ಟ 150 ಗಡಿ ದಾಟಲಿದೆ.
ಜಲಾಶಯದ ನೀರಿನ ಗರಿಷ್ಠ ಮಟ್ಟ 186 ಅಡಿ. ಭರ್ತಿಯಾಗಲು ಇನ್ನು 39.4 ಅಡಿ ನೀರು ಬೇಕು. ಮಳೆ ಇದೇ ರೀತಿ ಮುಂದುವರಿದರೆ ಈ ವರ್ಷ ಡ್ಯಾಂ ಭರ್ತಿಯಾಗಲಿದೆ.
ಭದ್ರಾ ಡ್ಯಾಂ ನೀರಿನ ಮಟ್ಟ
-
ಭದ್ರಾ ಡ್ಯಾಂ ನೀರಿನ ಒಟ್ಟು ಸಂಗ್ರಹ: 186 ಅಡಿ
-
ದಿನಾಂಕ: 17- 07-2024
-
ಭದ್ರಾ ಡ್ಯಾಂ ಇಂದಿನ ನೀರಿನ ಮಟ್ಟ: 148.6 ಅಡಿ
-
ಕೆಪಾಸಿಟಿ: 33.112 ಟಿಎಂಸಿ
-
ಒಳಹರಿವು: 34544 ಕ್ಯೂಸೆಕ್
-
ಒಟ್ಟು ಹೊರಹರಿವು: 169 ಕ್ಯೂಸೆಕ್
-
ಕಳೆದ ವರ್ಷ ಇದೇ ದಿನ: 141.4 ಅಡಿ
-
ಕೆಪಾಸಿಟಿ: 27.810 ಟಿಎಂಸಿ