SUDDIKSHANA KANNADA NEWS/ DAVANAGERE/ DATE:06-07-2024
ದಾವಣಗೆರೆ: ಮಹಾನಗರ ಪಾಲಿಕೆ ವತಿಯಿಂದ ತುರ್ತು ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಜುಲೈ 6 ರಂದು ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಎಫ್-10 ಸಿ.ಜಿ.ಹೆಚ್ ಫೀಡರ್ ವ್ಯಾಪ್ತಿಯ ವಿನೋಬನಗರ 2 ನೇ ಮೇನ್, ಹಳೆ ರೆಡ್ಡಿ ಬಿಲ್ಡಿಂಗ್, ಚರ್ಚ್ ರೆಸಿಡೆನ್ಸಿ, ಜಯದೇವ ಶಾಲೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳು, ಎಫ್-9 ಪಿ.ಜೆ. ಫೀಡರ್ ವ್ಯಾಪ್ತಿಯ ಮೋತಿ ವೀರಪ್ಪ ಕಾಲೇಜ್ ಹಿಂಭಾಗ, ಸರ್ಎಂ.ವಿಶ್ವೇಶ್ವರಯ್ಯ ಪಾರ್ಕ್, ಬ್ಲಡ್ ಬ್ಯಾಂಕ್ ಮತ್ತು ಸುತ್ತಮುತ್ತಲಿನ ಪ್ರದೇಶಗಳು, ಎಫ್-18 ದುರ್ಗಾಂಬಿಕಾ ಫೀಡರ್ ವ್ಯಾಪ್ತಿಯ ಎಂ.ಬಿ ಕೇರಿ, ಹೋಂಡ ಸರ್ಕಲ್, ಕಾಯಿಪೇಟೆ, ಜಾಲಿನಗರ, ಟೀಚರ್ಸ್ ಕಾಲೋನಿ, ಶಿವಾಜಿ ನಗರ, ಶಿವಾಜಿ ಸರ್ಕಲ್, ಚೆಲುವಾದಿ ಕೇರಿ, ಇಡಬ್ಲ್ಯೂಎಸ್, ಹಳೇಪೇಟೆ, ಬಾರ್ಲೈನ್ ರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಸಾರ್ವಜನಿಕರು ಸಹಕರಿಸುವಂತೆ ಎಂದು ಬೆಸ್ಕಾಂ ಇಲಾಖೆಯ ಅಧಿಕಾರಿಗಳು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.