SUDDIKSHANA KANNADA NEWS/ DAVANAGERE/ DATE:01-07-2024
ದಾವಣಗೆರೆ:ಚಿಕ್ಕಮಗಳೂರು ಜಿಲ್ಲೆಯಾದ್ಯಂತ ತುಸು ಮಳೆ ಹೆಚ್ಚಾಗಿದ್ದು, ಭದ್ರಾ ಜಲಾಶಯಕ್ಕೆ ಬರುತ್ತಿರುವ ಒಳಹರಿವಿನ ಪ್ರಮಾಣ ತುಸು ಏರಿಕೆಯಾಗಿದೆ. ಜಲಾಶಯಕ್ಕೆ ಬರುತ್ತಿರುವ ಒಳಹರಿವಿನ ಪ್ರಮಾಣ 4665 ಕ್ಯೂಸೆಕ್ ಗೆ ಏರಿಕೆಯಾಗಿದೆ.
ಭಾನುವಾರಕ್ಕೆ ಹೋಲಿಸಿದರೆ ಒಂದು ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ಒಳಹರಿವು ಜಾಸ್ತಿಯಾಗಿದೆ. ಜಲಾಶಯದ ನೀರಿನ ಮಟ್ಟ 124.7 ಅಡಿ ಏರಿಕೆಯಾಗಿದೆ. ಒಂದೇ ದಿನದಲ್ಲಿ ಒಂದು ಅಡಿ ನೀರಿಗೂ ಹೆಚ್ಚು ಹರಿದು ಬಂದಿದೆ.
ಕಳೆದ ವರ್ಷ ಜಲಾಶಯದ ನೀರಿನ ಮಟ್ಟ 136.11 ಅಡಿ ನೀರಿತ್ತು. ಇಂದು ಜಲಾಶಯದ ನೀರಿನ ಮಟ್ಟ 124.7 ಅಡಿಗೆ ಏರಿಕೆಯಾಗಿದೆ. ಭದ್ರಾ ಜಲಾನಯನ ಪ್ರದೇಶದಲ್ಲಿ ಮಳೆ ಕಡಿಮೆಯಾಗಿದ್ದು, ಡ್ಯಾಂಗೆ ಬರುತ್ತಿರುವ ಒಳಹರಿವಿನ ಪ್ರಮಾಣ ಕಡಿಮೆ ಆಗಿದೆ. ಭದ್ರಾ ಡ್ಯಾಂ ನೀರಿನ ಮಟ್ಟ ಹೆಚ್ಚಾಗುತ್ತೆ ಎಂದುಕೊಂಡರೂ ಆಗಿಲ್ಲ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ 12 ಅಡಿ ನೀರು ಕಡಿಮೆ ಇದೆ. ಆದ್ರೆ, ಸ್ವಲ್ಪ ಪ್ರಮಾಣದಲ್ಲಿ ಏರಿಕೆಯಾಗಿದೆ. ಮಳೆ ಮುಂದುವರಿದರೆ ಜಲಾಶಯಕ್ಕೆ ಬರುತ್ತಿರುವ ಒಳಹರಿವಿನ ಪ್ರಮಾಣ ಹೆಚ್ಚಾಗಲಿದೆ. ಕಡಿಮೆಯಾದರೆ ಮತ್ತಷ್ಟು ಕುಸಿತ ಕಾಣಲಿದೆ. ಭದ್ರಾ ಡ್ಯಾಂ ತುಂಬಲು ಇನ್ನೂ 63 ಅಡಿ ನೀರು ಬರಬೇಕಿದೆ.
ಶನಿವಾರ ಮಳೆ ಕಡಿಮೆಯಾಗಿದೆ. ಭದ್ರಾ ಜಲಾನಯನ ಪ್ರದೇಶದಲ್ಲಿ ಕುಂಠಿತಗೊಂಡಿರುವ ಮಳೆಯಿಂದಾಗಿ ಜಲಾಶಯಕ್ಕೆ ಬರುತ್ತಿದ್ದ ಒಳಹರಿವಿನ ಪ್ರಮಾಣ ಭಾರೀ ಕಡಿಮೆಯಾಗಿತ್ತು. ಶುಕ್ರವಾರ 8650 ಕ್ಯೂಸೆಕ್ ಒಳಹರಿವಿತ್ತು. ಆದ್ರೆ, ಇಂದು ಸ್ವಲ್ಪ ಪ್ರಮಾಣದಲ್ಲಿ ಕಡಿಮೆಯಾಗಿದ್ದು, ಒಳಹರಿವು 3183 ಕ್ಯೂಸೆಕ್ ಕುಸಿದಿದೆ. ಶನಿವಾರ 6376 ಕ್ಯೂಸೆಕ್ ಒಳಹರಿವಿತ್ತು. ಜಲಾಶಯದ ನೀರಿನ ಮಟ್ಟ 123.10 ಅಡಿ ಆಗಿತ್ತು.
ಭದ್ರಾ ಜಲಾನಯನ ಪ್ರದೇಶದಲ್ಲಿ ಕಳೆದ ನಾಲ್ಕು ದಿನಗಳಿಂದ ಉತ್ತಮ ಮಳೆಯಾಗಿತ್ತು. ನಿನ್ನೆಗೆ ಹೋಲಿಸಿದರೆ ಇಂದು ಮಳೆ ಕಡಿಮೆ ಆಗಿದೆ. ಗುರುವಾರ ನಾಲ್ಕು ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ನೀರು ಹರಿದು ಬಂದಿತ್ತು. ಶುಕ್ರವಾರ ಎಂಟು ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ಒಳಹರಿವಿತ್ತು. ಆದ್ರೆ, ನಿನ್ನೆ ಆರು ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ಗೆ ಇಳಿದಿದೆ. ಇಂದು 3183ಕ್ಕೆ ಕುಸಿದಿದೆ,
ಚಿಕ್ಕಮಗಳೂರು, ಶಿವಮೊಗ್ಗ ಸೇರಿದಂತೆ ಹಲವೆಡೆ ಭಾರೀ ಮಳೆಯಾಗುತಿತ್ತು. ಸ್ವಲ್ಪ ಮಟ್ಟಿಗೆ ಮಳೆ ಕಡಿಮೆಯಾಗಿದೆ. ಇನ್ನು ಭದ್ರಾ ಡ್ಯಾಂಗೆ ಬರುತ್ತಿರುವ ಒಳಹರಿವಿನ ಪ್ರಮಾಣ ಹೆಚ್ಚಾಗಿದೆ. 2276 ಕ್ಯೂಸೆಕ್ ಒಳಹರಿವು ಬುಧವಾರ ಇತ್ತು. ಗುರುವಾರದ ಬೆಳಿಗ್ಗೆಯೊತ್ತಿಗೆ 4082 ಕ್ಯೂಸೆಕ್ ಗೆ ಏರಿದೆ. ಆದ್ರೆ, ಇಂದು ಒಳ ಹರಿವು 8655 ಕ್ಯೂಸೆಕ್ ಹರಿದು ಬಂದಿದೆ. ಮಳೆ ಕುಂಠಿತವಾಗಿರುವುದರಿಂದ ಹೆಚ್ಚು ಜಲಾಶಯಕ್ಕೆ ನೀರು ಹರಿದು ಬರುತ್ತಿಲ್ಲ.
ಭದ್ರಾ ಜಲಾಶಯದ ನೀರಿನ ಮಟ್ಟ ಕಳೆದ ವರ್ಷಕ್ಕೆ ಹೋಲಿಸಿದರೆ ಕಡಿಮೆಯಾಗಿದೆ. ಬರೋಬ್ಬರಿ 13 ಅಡಿ ನೀರು ಕಡಿಮೆ ಸಂಗ್ರಹ ಇದ್ದು. ಇದು ಭದ್ರಾ ಅಚ್ಚುಕಟ್ಟುಪ್ರದೇಶ, ಶಿವಮೊಗ್ಗ ಹಾಗೂ ಚಿತ್ರದುರ್ಗದ ರೈತರು ಹಾಗೂ ಜನರಿಗೆ ಆತಂಕ ತಂದೊಡ್ಡಿತ್ತು. ಈಗ ಮಳೆಯಾಗುತ್ತಿರುವ ಕಾರಣ ರೈತರಲ್ಲಿ ಸ್ವಲ್ಪ ಮಟ್ಟಿಗೆ ನಿಟ್ಟುಸಿರುಬಿಡುವಂತಾಗಿದೆ. ಮಳೆ ಬಾರದೇ ಇದ್ದರೆ ಜಲಾಶಯದಲ್ಲಿ ಗರಿಷ್ಠ ನೀರಿನ ಮಟ್ಟ ಮುಟ್ಟುವುದು ಕಷ್ಟ ಎಂದು ಹೇಳಲಾಗುತ್ತಿದೆ. ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ ಈ ತಿಂಗಳ ಕೊನೆಯ ವಾರ ಭಾರೀ ಮಳೆಯಾಗಲಿದ್ದು, ಜಲಾಶಯದ ನೀರಿನ ಮಟ್ಟ ಹೆಚ್ಚಳವಾಗುವ ಸಾಧ್ಯತೆ ಇದೆ. ಇದೇ ರೀತಿಯಲ್ಲಿ ಮಳೆ ಮುಂದುವರಿದರೆ ಜಲಾಶಯದ ನೀರಿನ ಮಟ್ಟ ಹೆಚ್ಚಳವಾಗಲಿದೆ.
ಭದ್ರಾ ಡ್ಯಾಂ ನೀರಿನ ಮಟ್ಟ
-
ಭದ್ರಾ ಡ್ಯಾಂ ನೀರಿನ ಒಟ್ಟು ಸಂಗ್ರಹ: 186 ಅಡಿ
-
ದಿನಾಂಕ: -01-07-2024
-
ಭದ್ರಾ ಡ್ಯಾಂ ಇಂದಿನ ನೀರಿನ ಮಟ್ಟ: 124.7 ಅಡಿ
-
ಕೆಪಾಸಿಟಿ: 24.848 ಟಿಎಂಸಿ
-
ಒಳಹರಿವು: 4665 ಕ್ಯೂಸೆಕ್
-
ಒಟ್ಟು ಹೊರಹರಿವು: 300 ಕ್ಯೂಸೆಕ್
-
ಕಳೆದ ವರ್ಷ ಇದೇ ದಿನ: 136.11 ಅಡಿ
-
ಎಂಎಸ್ ಎಲ್ ಛ 2096.58 FT