ಮೊಟ್ಟೆಯಲ್ಲಿ ಪ್ರೋಟೀನ್ ಮತ್ತು ಪೌಷ್ಟಿಕಾಂಶಗಳು ಹೇರಳವಾಗಿದ್ದು ಚರ್ಮದ ಸವೆತ ಮತ್ತು ಶುಷ್ಕತೆಯನ್ನು ತಡೆಗಟ್ಟುವಲ್ಲಿ ಸಹಾಯ ಮಾಡುತ್ತದೆ ಅಲ್ಲದೆ ಚರ್ಮವನ್ನು ಆಳದಿಂದಲೂ ತೇವಾಂಶವನ್ನು ಕಾಪಾಡಿಕೊಳ್ಳಲು ಸಹಾಯಕವಾಗಬಹುದು.
ಚರ್ಮದ ಹೊರಭಾಗದ ಸ್ವಾಸ್ಥ್ಯವನ್ನು ಇನ್ನಷ್ಟು ಹೆಚ್ಚಿಸಲು ಮತ್ತು ಹೆಚ್ಚಿನ ಪೋಷಕಾಂಶಗಳನ್ನು ನೀಡಬೇಕಾದಲ್ಲಿ ಮೊಸರನ್ನೂ ಇದರೊಂದಿಗೆ ಬೆರೆಸಬಹುದುಆಗಿದೆ. ಹೀಗೆ ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳಲು ಮೊಟ್ಟೆಯನ್ನು ಇನ್ನಿತರ ಹಲವಾರು ಆರೋಗ್ಯದಾಯಕ ಪೋಷಕಾಂಶಗಳ ಜೊತೆಗೆ ಸೇರಿಸಿ ಬಳಸಿದಲ್ಲಿ ತ್ವಚೆಗೆ ಮತ್ತಷ್ಟು ಹೊಳಪನ್ನು ನೀಡುವಲ್ಲಿ ಹೆಚ್ಚಿನ ಕಾಳಜಿ ವಹಿಸುವಲ್ಲಿ ಸಹಾಯಕಾರಿಯಾಗಬಹುದು. ಹಾಗೆಯೇ ಮೊಟ್ಟೆಯಲ್ಲಿ ಒಮೆಗಾ-3 ಕೊಬ್ಬಿನಾಮ್ಲಗಳು ಸಮೃದ್ದವಾಗಿವೆ. ಹಾಗೂ ಪಪ್ಪಾಯಿಯು ವಿಟಮಿನ್ ‘ಸಿ’ ಯನ್ನು ಹೊಂದಿರುತ್ತದೆ. ಈ ಎರಡನ್ನೂ ಏಕಕಾಲದಲ್ಲಿ ತಿನ್ನುವುದರಿಂದ ಅಜೀರ್ಣ, ವಾಕರಿಕೆ ಮತ್ತು ಮಲಬದ್ಧತೆಯಂತಹ ಅಡ್ಡ ಪರಿಣಾಮಗಳಾಗಬಹುದು ಆದ್ದರಿಂದ ಎಚ್ಚರಿಕೆವಹಿಸಬೇಕಾಗುತ್ತದೆ.
ಮುಖದ ಚರ್ಮವನ್ನು ಹಾಗೂ ರಂಧ್ರಗಳನ್ನು ಬಿಗಿಗೊಳಿಸಲು ಮೊಟ್ಟೆಯ ಬಿಳಿ ಭಾಗದ ಮಾಸ್ಕ್ ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಇದಕ್ಕಾಗಿ ಮೊದಲಿಗೆ ಮೊಟ್ಟೆಯ ಬಿಳಿಭಾಗವನ್ನು ಹಳದಿ ಬಣ್ಣದ ಭಾಗದಿಂದ ಬೇರ್ಪಡಿಸಿಬೇಕು . ನಂತರ ಈ ಬಿಳಿಭಾಗವನ್ನು ನೇರವಾಗಿ ಮುಖಕ್ಕೆ ಹಚ್ಚಬಹುದು. ಹಚ್ಚಿದ ನಂತರ ಸುಮಾರು 15 ನಿಮಿಷಗಳ ಕಾಲ ಹಾಗೆ ಒಣಗಲು ಬಿಟ್ಟು ನಂತರ ಬೆಚ್ಚಗಿನ ನೀರಿನಿಂದ ತೊಳೆಯಬೇಕು. ಹೀಗೆ ಮಾಡುವುದರಿಂದ ಮೊಟ್ಟೆಯಲ್ಲಿರುವ ಬಿಳಿಭಾಗವು ಮುಖದಲ್ಲಿನ ರಂಧ್ರಗಳನ್ನು ಬಿಗಿಗೊಳುಸುತ್ತದೆ .ಮುಖದಲ್ಲಿನ ಹೆಚ್ಚುವರಿ ಜಿಡ್ಡಿನಾಂಶವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರಿಂದ ಚರ್ಮವು ಮೃದುವಾಗುತ್ತದೆ ಹಾಗೂ ಚರ್ಮದಲ್ಲಿ ಹೊಳಪು ಬರುತ್ತದೆ. ಮೊಟ್ಟೆಯ ಬಿಳಿಭಾಗವನ್ನು ಹಚ್ಚುವುದರಿಂದ ಇದು ಚರ್ಮದ ಹೊರಭಾಗಕ್ಕೆ ರಕ್ಷಣಾ ಗೋಡೆಯಂತೆ ಕಾರ್ಯ ನಿರ್ವಹಿಸುತ್ತದೆ. ಹಾಗೂ ದದ್ದುಗಳು , ಮತ್ತು ಸೂರ್ಯನ ಕಿರಣಗಳಿಂದ ಆಗುವಂತಹ ಹಾನಿಯನ್ನು ತಡೆಗಟ್ಟುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಮೊಟ್ಟೆಯ ಬಿಳಿ ಭಾಗದಲ್ಲಿ ಸ್ಥಿತಿ ಸ್ಥಾಪಕತ್ವವನ್ನು ಹೆಚ್ಚಿಸುವ ಕಿಣ್ವಗಳಿರುವುದರಿಂದ ಸನ್ ಬರ್ನ್ ಗೆ ಅತ್ಯಂತ ಉಪಯೋಗಕಾರಿಯಾಗಿ ಕೆಲಸ ಮಾಡುತ್ತದೆ. ಕಪ್ಪುಕಲೆಗಳು, ಮೊಡವೆಗಳು ಇತ್ಯಾದಿಗಳನ್ನು ಕಡಿಮೆ ಮಾಡುತ್ತದೆ ಮತ್ತು ಚರ್ಮದ ಬಣ್ಣದಲ್ಲಿ ಹೊಳಪನ್ನು ತರುತ್ತದೆ.