SUDDIKSHANA KANNADA NEWS/ DAVANAGERE/ DATE:14-06-2024
ದಾವಣಗೆರೆ: ಎಸ್.ಎಸ್.ಎಲ್.ಸಿ ಪರೀಕ್ಷೆ-2 ಜಿಲ್ಲೆಯ 20 ಕೇಂದ್ರಗಳಲ್ಲಿ ಜೂನ್ 14 ರಿಂದ 22 ರವರೆಗೆ ನಡೆಯಲಿದ್ದು ಸುಗಮ ಪರೀಕ್ಷೆಗಾಗಿ 144 ಅನ್ವಯ ಪರೀಕ್ಷಾ ಕೇಂದ್ರಗಳ ಸುತ್ತಮುತ್ತ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾ ದಂಡಾಧಿಕಾರಿ ಡಾ; ವೆಂಕಟೇಶ್ ಎಂ.ವಿ ಆದೇಶಿಸಿದ್ದಾರೆ.
ಜೂನ್ 14 ರಿಂದ 22 ರವರೆಗೆ ಜಿಲ್ಲೆಯ ಚನ್ನಗಿರಿ-5, ದಾವಣಗೆರೆ ಉತ್ತರ-3, ದಕ್ಷಿಣ 3, ಹರಿಹರ-4,ಹೊನ್ನಾಳಿ-2, ಜಗಳೂರು-3 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಕೇಂದ್ರಗಳ ಸುತ್ತಮುತ್ತ ಜೆರಾಕ್ಸ್ ಅಂಗಡಿ, ಇಂಟರ್ ನೆಟ್ ಸೆಂಟರ್ ಗಳನ್ನು ಪರೀಕ್ಷಾ ದಿನದಂದು ಮುಚ್ಚಲು ಆದೇಶಿಸಲಾಗಿದೆ.