SUDDIKSHANA KANNADA NEWS/ DAVANAGERE/ DATE:05-06-2024
ದಾವಣಗೆರೆ: ದಾವಣಗೆರೆ ಉದ್ಯಾನವನ ಅಭಿವೃದ್ಧಿ ಸಮಿತಿಯಿಂದ ಸರಸ್ವತಿ ಬಡಾವಣೆಯ ಪಂಚಮುಖಿ ಉದ್ಯಾನವನದಲ್ಲಿ ಹತ್ತು ಗಿಡಗಳನ್ನು ನೆಡುವ ಮೂಲಕ ಪರಿಸರ ದಿನಾಚರಣೆ ಮಾಡಲಾಯಿತು.
ಸಮಿತಿಯ ಅಧ್ಯಕ್ಷ ಕೆ ಜಿ ಯಲ್ಲಪ್ಪನವರು ಮಾತನಾಡಿ, ಇವತ್ತು ಇಡೀ ಪ್ರಪಂಚ ನೀರಿನ ಕೊರತೆಯನ್ನು ಎದುರಿಸುತ್ತಿದೆ. ಋತುಗಳಿಗೆ ಅನುಗುಣವಾಗಿ ಕಾಲ ಕಾಲಕ್ಕೆ ಮಳೆಯಾಗದೆ ಜಗತ್ತಿನಾದ್ಯಂತ ಅತಿವೃಷ್ಠಿ ಅನಾವೃಷ್ಠಿ ಉಂಟಾಗುತ್ತಿದೆ. ಮನುಷ್ಯನ ದುರಾಸೆಯಿಂದ ಬೇಕಾಬಿಟ್ಟಿ ಮರಗಳನ್ನು ಕಡಿಯುತ್ತಿರುವುದರಿಂದ ಮಳೆಯ ಕೊರತೆ ಉಂಟಾಗಿದೆ. ಆದ್ದರಿಂದ ಎಲ್ಲರೂ ಸಾಧ್ಯವಾದಷ್ಟು ಗಿಡಗಳನ್ನು ನೆಡಬೇಕೆಂದು ಕರೆ ನೀಡಿದರು.
33 ವಾರ್ಡಿನ ನಗರಪಾಲಿಕೆ ಸದಸ್ಯರಾದ ಕೆ ಎಂ ವೀರೇಶ್ ಅವರು ಮಾತನಾಡಿ, ನಾನು ಚಿಕ್ಕಂದಿನಿಂದಲೂ ಪರಿಸರ ಪ್ರೇಮಿ ನನಗೆ ಅವಕಾಶ ಸಿಕ್ಕಾಗಲೆಲ್ಲ ಗಿಡಗಳನ್ನು ನೆಡುತ್ತಿದ್ದೆ ಹಾಗೆ ನನ್ನ ವಾರ್ಡಿನಲ್ಲು ಸಹ ಸಾಧ್ಯವಾದಷ್ಟುಉದ್ಯಾನವನಗಳಲ್ಲಿ ಗಿಡಗಳನ್ನು ನೆಡುತ್ತಿದ್ದೇನೆ ಎಂದು ಹೇಳಿದರು.
ಎಂ. ಸೋಮಶೇಖರಪ್ಪ ಜಿ ಚೌಡಪ್ಪ ರವಿಕುಮಾರ್ ಡಾ ಮಂಜುನಾಥ್ ವಿಶ್ವನಾಥ ಕುಲಕರ್ಣಿ ಎಸ್. ಶ್ಯಾಮ್ ಚಂದ್ರಣ್ಣ ಕೃಷ್ಣಮೂರ್ತಿ ಪರಮೇಶ್ವರಪ್ಪ ಅಂಜನಪ್ಪ ನಾಗೇಶ್ ಮಾರುತಿ ಶೇಖರಪ್ಪ ಹಾಗು ಮಹಿಳಾ ಘಟಕದ ಅದ್ಯಕ್ಷರಾದ ಮಂಜುಳಾ ವಂದನಾ ನಾಗರತ್ನ ವಿಜಯ ಉಷಾ ಗೌರಮ್ಮ ಸವಿತಾ ಚೈತ್ರಾ ಇದ್ದರು.