SUDDIKSHANA KANNADA NEWS/ DAVANAGERE/ DATE:04-06-2024
ದಾವಣಗೆರೆ: ಲೋಕಸಭೆ ಚುನಾವಣೆ ಮತದಾನಕ್ಕೆ ಮುನ್ನ ಕಾಂಗ್ರೆಸ್ ಪಕ್ಷ ಈ ಬಾರಿ ಗೆಲ್ಲುತ್ತದೆ ಎಂದು ಹೇಳಿದ್ದೆ. ಕಾಂಗ್ರೆಸ್ ಸೋತರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿದ್ದೆ. ಆದ್ರೆ, ಗೆದ್ದಿರುವ ಕಾರಣ ನಾನು ರಾಜೀನಾಮೆ ನೀಡುವುದಿಲ್ಲ ಎಂದು ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ್ ಹೇಳಿದರು.
ಮಾಧ್ಯಮವದರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿನ ಬಿಜೆಪಿಯ ಒಬ್ಬ ಶಾಸಕರು ನನಗೆ ಸವಾಲು ಹಾಕಿದ್ದರು. ಈಗ ಆ ಶಾಸಕರು ರಾಜೀನಾಮೆ ನೀಡುತ್ತಾರಾ ಎಂದು ಹರಿಹರ ಶಾಸಕ ಬಿ. ಪಿ. ಹರೀಶ್ ಗೆ ಟಾಂಗ್
ನೀಡಿದರು.
ಈ ಗೆಲುವು ಸಮಸ್ತ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ಸಲ್ಲುತ್ತದೆ. ಏಳು ಶಾಸಕರು ಹಗಲು ರಾತ್ರಿ ಶ್ರಮ ಪಟ್ಟು ಗೆಲುವು ತಂದುಕೊಟ್ಟಿದ್ದಾರೆ. ಕಾರ್ಯಕರ್ತರಿಗೆ ಹೃದಯಪೂರ್ವಕ ಅಭಿನಂದನೆ ಸಲ್ಲಿಸುತ್ತೇನೆ ಎಂದು
ಹೇಳಿದರು.
ನಾನು ಮೊದಲೇ ಹೇಳಿದಂತೆ ಈ ಬಾರಿ ಕಾಂಗ್ರೆಸ್ ಗೆಲ್ಲಿಸಿ ಅಭ್ಯರ್ಥಿ ಲೋಕಸಭೆಗೆ ಕಳುಹಿಸುತ್ತಿದ್ದೇವೆ. ಗ್ರೆಸ್ ಅಭಿವೃದ್ಧಿ, ಗ್ಯಾರಂಟಿಗಳು ಗೆಲುವು ತಂದುಕೊಟ್ಟಿವೆ ಎಂದು ವಿಶ್ಲೇಷಿಸಿದರು.