SUDDIKSHANA KANNADA NEWS/ DAVANAGERE/ DATE:04-06-2024
ಬೆಂಗಳೂರು: ಹಾಸನ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಜೆಡಿಎಸ್ – ಬಿಜೆಪಿ ಮೈತ್ರಿಕೂಟದ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಹೀನಾಯವಾಗಿ ಸೋಲು ಕಂಡಿದ್ದಾರೆ. ಕಾಂಗ್ರೆಸ್ ನ ಶ್ರೇಯಸ್ ಪಟೇಲ್ ಭರ್ಜರಿ ಜಯ ದಾಖಲಿಸಿದ್ದಾರೆ.
ರಾಸಲೀಲೆ ಪ್ರಕರಣ ಸಂಬಂಧ ಎಸ್ ಐ ಟಿ ವಶದಲ್ಲಿರುವ ಪ್ರಜ್ವಲ್ ರೇವಣ್ಣರಿಗೆ ಭಾರೀ ಮುಖಭಂಗವಾಗಿದೆ. ಆರಂಭದಲ್ಲಿ ಶ್ರೇಯಸ್ ಪಟೇಲ್ ಹಾಗೂ ಪ್ರಜ್ವಲ್ ರೇವಣ್ಣರ ನಡುವೆ ಹಾವು ಏಣಿನ ಆಟ ಶುರುವಾಗಿತ್ತು. ಆದ್ರೆ, ಆ ಬಳಿಕ ಮತ ಎಣಿಕೆಯಲ್ಲಿ ಶ್ರೇಯಸ್ ಪಟೇಲ್ ಗೆಲುವಿನ ದಿಗ್ವಿಜಯ ಸಾಧಿಸಿದ್ದಾರೆ.
25 ವರ್ಷಗಳ ಜೆಡಿಎಸ್ ಭದ್ರಕೋಟೆ ಛಿದ್ರವಾಗಿದೆ. ಈ ಮೂಲಕ ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡ, ಮಾಜಿ ಸಿಎಂ ಹೆಚ್. ಡಿ. ಕುಮಾರಸ್ವಾಮಿ, ಮಾಜಿ ಸಚಿವ ಹೆಚ್. ಡಿ.ರೇವಣ್ಣರಿಗೆ ಭಾರೀ ಮುಖಭಂಗವಾಗಿದೆ. ಮಂಡ್ಯದಲ್ಲಿ ಹೆಚ್. ಡಿ. ಕುಮಾರಸ್ವಾಮಿ ಗೆದ್ದರೆ, ಉತ್ತರ ಕನ್ನಡದಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿ ಗೆದ್ದು ಬೀಗಿದ್ದಾರೆ. ಚಿತ್ರದುರ್ಗದಲ್ಲಿ ಎನ್. ಚಂದ್ರಪ್ಪ ಸೋಲು ಕಂಡರೆ, ಬಿಜೆಪಿಯ ಗೋವಿಂದ ಕಾರಜೋಳ ಗೆಲುವಿನ ನಗೆ ಬೀರಿದ್ದಾರೆ.
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಸೋಲು ಕಂಡರೆ, ಡಾ. ಸುಧಾಕರ್ ಗೆಲುವಿನ ನಗೆ ಬೀರುವ ಮೂಲಕ ಕಾಂಗ್ರೆಸ್ ಗೆ ಆಘಾತ ನೀಡಿದ್ದಾರೆ. ಬೆಳಗಾವಿಯಲ್ಲಿ ಜಗದೀಶ್ ಶೆಟ್ಟರ್ ಜಯಭೇರಿ ಬಾರಿಸಿದ್ದರೆ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಗೆ ಭಾರೀ ಮುಖಭಂಗವಾಗಿದೆ. ಮೃಣಾಲ್ ಸೋಲು ಕಾಣುವ ಮೂಲಕ ಜಗದೀಶ್ ಶೆಟ್ಟರ್ ಗೆದ್ದು ನಗೆ ಬೀರಿದ್ದಾರೆ.