ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ತಗಡಿನ ಶೀಟು ತಂದಿದ್ದೀರಾ? ಮನೆ, ರಸ್ತೆಯಲ್ಲಿ ಹಾಕಿ ಸುಮ್ಮನಾಗಿಬಿಟ್ಟರೆ ಮುಗೀತು… ಕದ್ದ ಕಳ್ಳರು ಸಿಕ್ಕಿ ಬಿದ್ದಿದ್ದು ಹೇಗೆ…?

On: May 26, 2023 11:56 AM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:26-05-2023

 

ದಾವಣಗೆರೆ (DAVANAGERE): ಚನ್ನಗಿರಿ (CHANNAGIRI) ತಾಲೂಕಿನ ಕೊರಟಿಕೆರೆ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಸಂಬಂಧಿಸಿದ ಶೆಟ್ಟಿಹಳ್ಳಿ ಗ್ರಾಮದ ಗೋಮಾಳ ಜಾಗದಲ್ಲಿ ಘನ ತ್ಯಾಜ ವಿಲೇವಾರಿ ಘಟಕ್ಕೆ ಹಾಕಲಾಗಿದ್ದ ಮೇಲ್ಚಾವಣಿ ತಗಡಿನ ಶೀಟು ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಪಾಂಡೋಮಟ್ಟಿ ಗ್ರಾಮದ ಪ್ರಜ್ವಲ್ (22), ಕೃಷ್ಣಮೂರ್ತಿ (23) ಬಂಧಿತ ಆರೋಪಿಗಳು. ಬಂಧಿತರಿಂದ ಒಟ್ಟು 80 ತಗಡು ಶೀಟ್ ಗಳು, ಒಂದು ಯು.ಪಿ.ಎಸ್. ಬ್ಯಾಟರಿ ವಶಕ್ಕೆ ಪಡೆಯಲಾಗಿದೆ. 80 ತಗಡು ಶೀಟಿನ ಬೆಲೆ 2 ಲಕ್ಷ ರೂಪಾಯಿ, ಹಾಗೂ ಬ್ಯಾಟರಿ ಬೆಲೆ 21,500 ಹಾಗೂ, ಕೃತ್ಯಕ್ಕೆ ಬಳಸಿದ ಬೊಲೆರೋ ಪಿಕ್‌ಅಪ್ ವಾಹನ ವಶಪಡಿಸಿಕೊಳ್ಳಲಾಗಿದೆ.

ಕೊರಟೆಗೆರೆ (KORATEGERE) ಗ್ರಾಮ ಪಂಚಾಯಿತಿ ಪಿಡಿಒ (PDO) ಡಿ.ಬಿ. ನಾಗರಾಜ್ ಈ ಸಂಬಂಧ ಚನ್ನಗಿರಿ ಪೊಲೀಸ್ (POLCE( ಠಾಣೆಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು ಕಾರ್ಯಾಚರಣೆ (OPERATION) ಶುರು ಮಾಡಿದರು. ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಾಮಗೊಂಡ ಬಿ. ಬಸರಿಗಿ, ಚನ್ನಗಿರಿ ಪೊಲೀಸ್ ವಿಭಾಗದ ಪೊಲೀಸ್ ಉಪಾಧೀಕ್ಷಕ ಡಾ. ಕೆ. ಎಂ. ಸಂತೋಷ್ ರವರ ಮಾರ್ಗದರ್ಶನದಲ್ಲಿ, ಚನ್ನಗಿರಿ ಪೊಲೀಸ್ ಠಾಣೆಯ ನಿರೀಕ್ಷಕ ಪಿ. ಬಿ. ಮಧು ನೇತೃತ್ವದಲ್ಲಿ ಪಿ.ಎಸ್.ಐ ಚಂದ್ರಶೇಖರ್, ಎಸ್ಐ ಶಶಿಧರ ಹೆಚ್.ಎನ್. ಸಿಬ್ಬಂದಿಯವರನ್ನೊಳಗೊಡ ತಂಡವು ಚನ್ನಗಿರಿ ನಗರದ ತಾವರೆಕೆರೆ ಕ್ರಾಸ್ ಬೀರೂರು ಕಡೆಯಿಂದ ಕೆಎ 17-ಎಎ-2069 ಬುಲೇರೋ ಪಿಕಪ್ ವಾಹನದಲ್ಲಿ ತಗಡು ಶೀಟುಗಳನ್ನು ತುಂಬಿಕೊಂಡು ಬರುತ್ತಿದ್ದ ವಾಹನ ತಡೆದು ತಪಾಸಣೆ ಮಾಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ವಿವಿಧೆಡೆ ಬೈಕ್ ಕಳ್ಳತನ: ಮೂವರ ಬಂಧನ:

ವಿವಿಧೆಡೆ ಬೈಕ್ ಕಳ್ಳತನ ಮಾಡಿದ್ದ ಇಬ್ಬರು ಕಾನೂನು ಸಂಘರ್ಷಕ್ಕೆ ಒಳಪಟ್ಟ ಬಾಲಕರು ಸೇರಿದಂತೆ ಮೂವರನ್ನು ಕೆಟಿಜೆ ನಗರ ಪೊಲೀಸರು ಬಂಧಿಸಿದ್ದಾರೆ.

 

ಸರಸ್ವತಿ ನಗರದ ಕೆ. ಎಲ್. ರಾಕೇಶ್ (19) ಹಾಗೂ ಕಾನೂನು ಸಂಘರ್ಷಕ್ಕೊಳಪಟ್ಟ ಇಬ್ಬರನ್ನು ದಸ್ತಗಿರಿ ಮಾಡಲಾಗಿದ್ದು, ಮೂರು ಲಕ್ಷ ರೂಪಾಯಿ ಮೌಲ್ಯದ 7 ಬೈಕ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಸುನಿಲ್ ಕುಮಾರ್ ಎಂಬುವವರು ಕೆ ಎಂ – 05 ಇಇ 1608 ನಂಬರ್ ನ ಯಮಹಾ ಆರ್‌ಎಕ್ಸ್ ಬೈಕನ್ನು ಜಯನಗರ ಗೋಲ್ಡನ್ ಸ್ಟಾರ್ ಜಿಮ್ ಮುಂಬಾಗ ನಿಲ್ಲಿಸಿದ್ದರು. ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ ಎಂದು ದೂರು ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳ ಪತ್ತೆ ತಂಡ ರಚಿಸಿದರು.

ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಾಮಗೊಂಡ ಬಿ. ಬಸರಗಿ, ಡಿಸಿಐಬಿ ಘಟಕದ ಪೊಲೀಸ್ ಉಪಾಧೀಕ್ಷಕ ರೋಷನ್ ಜಮೀರ್ ಮಾರ್ಗದರ್ಶನದಲ್ಲಿ ಕೆಟಿಜೆ ನಗರ ಪೊಲೀಸ್ ನೀರೀಕ್ಷಕ ಶಶಿಧರ ಯು.ಜೆ ರವರು ಕೆಟಿಜೆ ನಗರ ಪಿಎಸ್‌ಐ ಎನ್.ಆರ್ ಕಾಟೆ ಹಾಗು ಸಿಬ್ಬಂದಿಗಳನ್ನೊಳಗೊಂಡ ತಂಡ ರಚಿಸಿ ಹಳೆ ಪಿ.ಬಿ ರಸ್ತೆ, ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಬಳಿ ಆರೋಪಿಗಳನ್ನು ಬಂಧಿಸಿದ್ದಾರೆ. ವಿಚಾರಣೆಗೊಳಪಡಿಸಿದಾಗ ಜಿಲ್ಲೆಯ ಬೇರೆ ಬೇರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿಯೂ ಬೈಕ್ ಕಳ್ಳತನದ ಪ್ರಕರಣಗಳು ಪತ್ತೆಯಾಗಿವೆ.

ಆರೋಪಿತರಿಂದ ಕೆ.ಟಿಜೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ೧ ಬೈಕ್, ವಿದ್ಯಾನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ೧ ಬೈಕ್, ಮಲೆಬೆನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 1 ಬೈಕ್, ಹದಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 1 ಬೈಕ್, ಚನ್ನಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 3 ಬೈಕ್ ಕಳ್ಳತನ ಪ್ರಕರಣಗಳಲ್ಲಿ ಕಳ್ಳತನ ಮಾಡಿದ್ದ ಒಟ್ಟು 3 ಲಕ್ಷ ರೂ ಬೆಲೆಯ 7 ಬೈಕುಗಳನ್ನು ವಶ ಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ಪತ್ತೆ ಹಚ್ಚಿದ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಎಸ್ಪಿ ಡಾ. ಕೆ. ಅರುಣ್ ಅವರು ಶ್ಲಾಘಿಸಿದ್ದಾರೆ.

ರಾಪಿಡ್ ಆ್ಯಕ್ಷನ್ ಫೋರ್ಸ್ ಪಥಸಂಚಲನ

ದಾವಣಗೆರೆಯಲ್ಲಿ ಕೇಂದ್ರೀಯ ಸಶಸ್ತ್ರ ತುಕಡಿ ರಾಪಿಡ್ ಆ್ಯಕ್ಷನ್ ಫೋರ್ಸ್ ನಗರದ ಪೊಲೀಸ್ ಠಾಣೆಗಳಿಗೆ ಭೇಟಿ ನೀಡಿ, ಠಾಣಾ ವ್ಯಾಪ್ತಿಯಲ್ಲಿ ಅಧ್ಯಯನ ಮಾಡಿದೆ. ಬಳಿಕ ನಗರದ ಪ್ರಮುಖ ರಸ್ತೆಗಳಲ್ಲಿ ಪಥ ಸಂಚಲನ ನಡೆಸಿತು.

 

ಅಕ್ತರ್ ರಾಜಾ ವೃತ್ತದಿಂದ ಬಾಷಾ ನಗರ, ಅಜಾದ್ ನಗರ, ಹಳೆ ಬೇತೂರ್ ರಸ್ತೆ, ದುಗ್ಗಮ್ಮ ದೇವಸ್ಥಾನ, ಹೊಂಡದ ವೃತ್ತದವರೆಗೆ ಪಥ ಸಂಚಲನ ನಡೆಸಲಾಯಿತು. ಪಥ ಸಂಚಲನದಲ್ಲಿ 97 ರಾಪಿಡ್ ಆ್ಯಕ್ಷನ್ ಫೋರ್ಸ್ ನ ಸೆಕೆಂಡ್ ಕಮಾಂಡೆಂಟ್ ನಾಗರಾಜಮ್, ಅಜಾದ್ ನಗರ ಪೊಲೀಸ್ ನಿರೀಕ್ಷಕ ಇಮ್ರಾನ್ ಬೇಗ್, ಪಿ ಎಸ್ ಐ ಕಾಂತರಾಜ್, ಶಿವಕುಮಾರ್, ಜಯಪ್ರಕಾಶ್ ಸೇರಿದಂತೆ ಪೊಲೀಸ್ ಸಿಬ್ಬಂದಿ ಪಾಲ್ಗೊಂಡಿದ್ದರು

 

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment