SUDDIKSHANA KANNADA NEWS/ DAVANAGERE/ DATE:28-02-2024
ದಾವಣಗೆರೆ: ವಿವಿಧತೆಯಲ್ಲಿ ಏಕತೆ ಭಾರತ ದೇಶದ ಐಕ್ಯತೆ ಎಂಬಂತೆ. ಹಿಂದೂ ರಾಷ್ಟ್ರದಲ್ಲಿ ಹುಟ್ಟಿದವರು ಭಾರತೀಯರು. ಈ ಮಣ್ಣಿನ ಅನ್ನ ತಿಂದು ಬೇರೆ ದೇಶಕ್ಕೆ ಜೈ ಕಾರ ಹಾಕುವರು ಯಾರೇ ಆಗಲಿ ಅವರು ದೇಶದ್ರೋಹಿಗಳು ಎಂದು ಶೋಷಿತರ ವರ್ಗಗಳ ಮುಖಂಡ ಬಾಡದ ಆನಂದರಾಜು ತಿಳಿಸಿದರು.
ರಾಜ್ಯಸಭಾ ಸದಸ್ಯ ನಾಸಿರ್ ಹುಸೇನ್ ಬೆಂಬಲಿಗರು ಶಕ್ತಿ ಕೇಂದ್ರದಲ್ಲೇ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿದರೆ ಅರ್ಥ ಏನು ಇಂಥ ನೀಚ ದೇಶ ದ್ರೋಹಿಗಳಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಆಗ್ರಹಿಸಿದರು. ಇನ್ನೂ ನೂತನ ರಾಜ್ಯಸಭಾ ಸದಸ್ಯ ನಾಸಿರ್ ಹುಸೇನ್ ವಿರುದ್ಧವೂ ಕ್ರಮ ಕೈಗೊಳ್ಳಬೇಕು, ಈ ದೇಶದ ಜನರ ಕ್ಷಮೆ ಕೇಳಬೇಕೆಂದು ಒತ್ತಾಯಿಸಿದರು.
ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿದರು ಈ ಬಗ್ಗೆ ಯಾವ ಮುಸ್ಲಿಂರು ಸಹ ಖಂಡಿಸದೇ ಇರುವುದು ದುರಂತ ಸಂಗತಿ, ಭಾರತದ ಮುಸ್ಲಿಂರು ನಿಜವಾದ ಭಾರತೀಯರಾಗಿದ್ದರೆ ಈ ಬಗ್ಗೆ ಮಾತನಾಡಬೇಕಿತ್ತು, ಇದನ್ನ ಖಂಡಿಸಬೇಕಿತ್ತು ಎಂದು ಬಾಡದ ಆನಂದರಾಜು ಆಗ್ರಹಿಸಿದರು. ಇದೇ ವೇಳೆ ಮಾಧ್ಯಮದವರ ಬಗ್ಗೆ ನಾಸಿರ್ ಹುಸೇನ್ ಅಗೌರವದಿಂದ ನಡೆದುಕೊಂಡಿದ್ದು ಸರಿಯಲ್ಲ, ಮಾಧ್ಯಮ ಮಿತ್ರರಿಗೂ ಕ್ಷಮೆ ಕೇಳಬೇಕೆಂದು ಬಾಡದ ಆನಂದರಾಜು ನಾಸಿರ್ ಹುಸೇನ್ ಗೆ ಒತ್ತಾಯ ಮಾಡಿದರು.