SUDDIKSHANA KANNADA NEWS/ DAVANAGERE/ DATE:03-12-2024
ದಾವಣಗೆರೆ: ಜಿಎಂಎಸ್ ಅಕಾಡೆಮಿ ಪ್ರಥಮ ದರ್ಜೆ ಕಾಲೇಜಿನ ಮತ್ತು ಜಿಎಂಐಟಿ ಕಾಲೇಜಿನ ಅಂತಿಮ ವರ್ಷದ ಒಟ್ಟು 51 ವಿದ್ಯಾರ್ಥಿಗಳು ವಿವಿಧ ಕಂಪನಿಯಲ್ಲಿ ಬಿಸಿನೆಸ್ ಡೆವಲಪ್ಮೆಂಟ್ ಅಸೋಸಿಯೇಟ್ ಗಳಾಗಿ ಆಯ್ಕೆಯಾಗುವ ಮೂಲಕ ಉದ್ಯೋಗದ ಅವಕಾಶಕ್ಕೆ ಅರ್ಹತೆ ಪಡೆದಿದ್ದಾರೆ.
2025ನೇ ವರ್ಷದ ಬ್ಯಾಚ್ ನ ಎಂಬಿಎ ಅಂತಿಮ ವರ್ಷದ 26 ಮಂದಿ ವಿದ್ಯಾರ್ಥಿಗಳು 4ರಿಂದ 6 ಲಕ್ಷ ರೂ. ವೇತನದ ಪ್ಯಾಕೇಜ್ ನಡಿ ಅಕಾಡೆಮಿರ್ ಎಜುಟೆಕ್ ಸಂಸ್ಥೆಯಲ್ಲಿ ಬಿಸಿನೆಸ್ ಡೆವಲಪ್ಮೆಂಟ್ ಅಸೋಸಿಯೇಟ್ ಗಳಾಗಿ ಆಯ್ಕೆಯಾಗಿದ್ದಾರೆ.
ಅಲ್ಲದೇ 2025ನೇ ವರ್ಷದ ಬ್ಯಾಚ್ ನ ಎಬಿಎ ಮತ್ತು ಬಿಕಾಂನ 25 ಮಂದಿ ವಿದ್ಯಾರ್ಥಿಗಳು ವರ್ಷಕ್ಕೆ 4ರಿಂದ 6 ಲಕ್ಷ ರೂ. ಗಳ ವೇತನದ ಪ್ಯಾಕೇಜ್ ನಡಿ ಟೀಚ್ ನೂಕ್ ಸಂಸ್ಥೆಯಲ್ಲಿ ಬಿಸಿನೆಸ್ ಡೆವಲಪ್ಮೆಂಟ್ ಅಸೋಸಿಯೇಟ್ ಗಳಾಗಿ ಆಯ್ಕೆಯಾಗಿದ್ದಾರೆ ಎಂದು ಜಿಎಂ ವಿಶ್ವವಿದ್ಯಾಲಯದ ತರಬೇತಿ ಮತ್ತು ಉದ್ಯೋಗ ವಿಭಾಗದ ನಿರ್ದೇಶಕರಾದ ಪ್ರೊ. ಟಿ.ಆರ್. ತೇಜಸ್ವಿ ಕಟ್ಟಿಮನಿ ಅವರು ತಿಳಿಸಿದ್ದಾರೆ.
ಆಯ್ಕೆಯಾಗಿರುವ ಎಲ್ಲ ವಿದ್ಯಾರ್ಥಿಗಳಿಗೆ ಜಿಎಂ ವಿಶ್ವವಿದ್ಯಾಲಯದ ಅಧ್ಯಕ್ಷರಾದ ಜಿ.ಎಂ. ಲಿಂಗರಾಜು, ಆಡಳಿತಾಧಿಕಾರಿಗಳಾದ ವೈ.ಯು. ಸುಭಾಷ್ ಚಂದ್ರ, ಜಿಎಂಐಟಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಂ.ಬಿ. ಸಂಜಯ್ ಪಾಂಡೆ ಅವರುಗಳು ಅಭಿನಂದನೆ ಸಲ್ಲಿಸಿದ್ದಾರೆ.
ಫ್ಯಾಕಲ್ಟಿ ಆಫ್ ಕಂಪ್ಯೂಟಿಂಗ್ ಅಂಡ್ ಐಟಿ ವಿಭಾಗದ ಡೀನ್ ಡಾ. ಶ್ವೇತ ಮರೀಗೌಡರ್, ಜಿಎಂ ವಿಶ್ವವಿದ್ಯಾಲಯದ ತರಬೇತಿ ಮತ್ತು ಉದ್ಯೋಗ ವಿಭಾಗದ ನಿರ್ದೇಶಕರಾದ ಪ್ರೊ. ಟಿ.ಆರ್. ತೇಜಸ್ವಿ ಕಟ್ಟಿಮನಿ, ಎಂಬಿಎ ವಿಭಾಗದ ಮುಖ್ಯಸ್ಥರಾದ ಡಾ. ಪಿ.ಎಸ್. ಬಸವರಾಜು, ಜಿಎಂ ವಿಶ್ವವಿದ್ಯಾಲಯದ ಎಂಬಿಎ ವಿಭಾಗದ ನಿರ್ದೇಶಕರಾದ ಎಸ್. ಶಿವಕುಮಾರ್, ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಐ. ವಿನಯ್, ಜಿಎಂ ವಿಶ್ವವಿದ್ಯಾಲಯದ ಪ್ಲೇಸ್ಮೆಂಟ್ ಕೋ ಆರ್ಡಿನೇಟರ್ ಗಳಾದ ಅವಿನಾಶ್ ಅಶ್ವಿಕ್, ಆಕಾಶ್ ಗೌಡ, ಎಂ.ಸಿ. ಸುನೀಲ್ ಕುಮಾರ್, ಜಿಎಂಎಸ್ ಕಾಲೇಜಿನ ಪ್ಲೇಸ್ಮೆಂಟ್ ಕೋ ಆರ್ಡಿನೇಟರ್ ಪ್ರಮೋದ್ ಸೇರಿದಂತೆ ಇತರರು ವಿದ್ಯಾರ್ಥಿಗಳ ಅಭಿನಂದಿಸುವ ಜೊತೆಗೆ ಗ್ರೂಪ್ ಫೋಟೋದೊಂದಿಗೆ ಸಂಭ್ರಮ ಹಂಚಿಕೊಂಡರು.