SUDDIKSHANA KANNADA NEWS/ DAVANAGERE/ DATE:12-11-2024
ದಾವಣಗೆರೆ: ದಾವಣಗೆರೆ ಜಿಲ್ಲೆಯಲ್ಲಿನ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ತೆರಿಗೆ ಸಂಗ್ರಹಿಸಲು ಸೋಮವಾರ ಹಮ್ಮಿಕೊಳ್ಳಲಾಗಿದ್ದ. ವಿಶೇಷ ಕಾರ್ಯಾಚರಣೆಯಲ್ಲಿ 1.ಕೋಟಿ 65 ಲಕ್ಷ ತೆರಿಗೆ ಸಂಗ್ರಹಿಸಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ ಇಟ್ನಾಳ್ ತಿಳಿಸಿದ್ದಾರೆ.
ಜಿಲ್ಲೆಯಲ್ಲಿನ ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ತೆರಿಗೆ ಸಂಗ್ರಹಕ್ಕೆ ವಿಶೇಷ ಆಂದೋಲನ ಕೈಗೊಳ್ಳಲಾಗಿತ್ತು. ಈ ವೇಳೆ ಜಿಲ್ಲೆಯಲ್ಲಿನ ಎಲ್ಲಾ ಗ್ರಾಮ ಪಂಚಾಯಿತಿಯಲ್ಲಿನ ತೆರಿಗೆಯನ್ನು ಸಂಗ್ರಹಿಸಲಾಗಿದೆ.
ಸಂಗ್ರಹಿಸಿದ ತೆರಿಗೆ ತಾಲ್ಲೂಕುವಾರು ವಿವರ : ಚನ್ನಗಿರಿ ತಾಲ್ಲೂಕು ರೂ.5103993 , ದಾವಣಗೆರೆ ತಾಲ್ಲೂಕು ರೂ.4889965, ಹರಿಹರ ತಾಲ್ಲೂಕು ರೂ.22877792, ಹೊನ್ನಾಳ್ಳಿ ತಾಲ್ಲೂಕು ರೂ.784834, ಜಗಳೂರು ತಾಲ್ಲೂಕು ರೂ.1522251.28, ನ್ಯಾಮತಿ ರೂ.1962032 ಒಟ್ಟು ರೂ.1,65,50,871ಗಳ ತೆರಿಗೆ ಸಂಗ್ರಹಿಸಲಾಗಿದೆ.