ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಶುಲ್ಕ ಹೆಚ್ಚಿಸಿದ ಝೊಮ್ಯಾಟೊ: ಪ್ರತಿ ಆರ್ಡರ್‌ಗೆ 6 ರೂ. ಹೆಚ್ಚಳ

On: July 15, 2024 6:05 PM
Follow Us:
---Advertisement---

ನವದೆಹಲಿ: ಆಹಾರ ಡೆಲಿವರಿ ಸಂಸ್ಥೆ ಝೊಮ್ಯಾಟೊ ಪ್ರಮುಖ ನಗರಗಳಲ್ಲಿ ಶುಲ್ಕ ಹೆಚ್ಚಿಸಿದೆ. ದೆಹಲಿ, ಮುಂಬೈ, ಬೆಂಗಳೂರು ನಗರಗಳಲ್ಲಿ ಶುಲ್ಕವನ್ನು ಪ್ರತಿ ಆರ್ಡರ್‌ಗೆ 5-6 ರೂಪಾಯಿಗಳಷ್ಟು ಏರಿಕೆ ಮಾಡಿದೆ.

ಝೊಮ್ಯಾಟೋ ಗೆ ಪ್ರತಿಸ್ಪರ್ಧಿಯಾಗಿರುವ ಸ್ವಿಗ್ಗಿ ಸಹ ಹಲವು ನಗರಗಳಲ್ಲಿ ಶುಲ್ಕವನ್ನು ಹೆಚ್ಚಳ ಮಾಡಿತ್ತು. ಆದರೆ ದೆಹಲಿ, ಮುಂಬೈ, ಬೆಂಗಳೂರು ನಗರಗಳಲ್ಲಿ ಪ್ರತಿ ಆರ್ಡರ್‌ಗೆ 5 ರೂಪಾಯಿಗಳ ಶುಲ್ಕಕ್ಕೆ ಮತ್ತೆ ಬದಲಾವಣೆ ಮಾಡಿದೆ.

ಶುಲ್ಕ ಏರಿಕೆಗೆ ಕಾರಣಗಳನ್ನು ಖಚಿತಪಡಿಸಿಕೊಳ್ಳಲು ಸಂಪರ್ಕಿಸಿದಾಗ, Zomato ಮತ್ತು Swiggy ಎರಡೂ ಸಂಸ್ಥೆಗಳು ಪ್ರತಿಕ್ರಿಯೆ ನೀಡಲು ನಿರಾಕರಿಸಿವೆ. ಎರಡೂ ಕಂಪನಿಗಳು ಕಳೆದ ವರ್ಷ ಪ್ಲಾಟ್‌ಫಾರ್ಮ್ ಶುಲ್ಕವನ್ನು ಪರಿಚಯಿಸಿದ್ದವು, ಆರಂಭದಲ್ಲಿ ಪ್ರತಿ ಆರ್ಡರ್‌ಗೆ 2 ರೂ‌. ಇದ್ದ ಈ ಶುಲ್ಕವನ್ನು ಕ್ರಮೇಣ ಹೆಚ್ಚಿಸಲಾಗಿದೆ. ಪ್ಲಾಟ್‌ಫಾರ್ಮ್ ಶುಲ್ಕವನ್ನು ಆಹಾರ- ವಿತರಣಾ ಪ್ಲಾಟ್‌ಫಾರ್ಮ್‌ಗಳು ತಮ್ಮ ಲಾಭದಾಯಕತೆಯನ್ನು ಹೆಚ್ಚಿಸಲು ಪ್ರಯತ್ನಿಸುತ್ತಿರುವ ವಿಧಾನಗಳಲ್ಲಿ ಒಂದಾಗಿದೆ.

Join WhatsApp

Join Now

Join Telegram

Join Now

Leave a Comment