Home ದಾವಣಗೆರೆ ವಕ್ಫ್ ಮಂಡಳಿ ಶಾಲೆಯಲ್ಲಿ ಹೆಣ್ಣುಮಕ್ಕಳ ಡ್ಯಾನ್ಸ್, ಇಸ್ಲಾಮಿಕ್ ಮೌಲ್ಯಗಳ ಕಡೆಗಣನೆ: “ದಂಗಲ್” ನಟಿ ಝೈರಾ ವಾಸಿಮ್ ದಂಗಲ್!
ದಾವಣಗೆರೆಕ್ರೈಂ ನ್ಯೂಸ್ಬೆಂಗಳೂರುಸಿನಿಮಾ

ವಕ್ಫ್ ಮಂಡಳಿ ಶಾಲೆಯಲ್ಲಿ ಹೆಣ್ಣುಮಕ್ಕಳ ಡ್ಯಾನ್ಸ್, ಇಸ್ಲಾಮಿಕ್ ಮೌಲ್ಯಗಳ ಕಡೆಗಣನೆ: “ದಂಗಲ್” ನಟಿ ಝೈರಾ ವಾಸಿಮ್ ದಂಗಲ್!

Share
ವಕ್ಫ್
Share

ಶ್ರೀನಗರ: ‘ದಂಗಲ್’ ಹಾಗೂ ‘ಸೀಕ್ರೆಟ್ ಸೂಪರ್‌ಸ್ಟಾರ್’ ಖ್ಯಾತಿಯ ಮಾಜಿ ಬಾಲಿವುಡ್ ನಟಿ ಝೈರಾ ವಾಸಿಮ್, ಜಮ್ಮು ಮತ್ತು ಕಾಶ್ಮೀರದ ವಕ್ಫ್ ಮಂಡಳಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ವಕ್ಫ್ ಮಂಡಳಿ ನಡೆಸುತ್ತಿರುವ ಶಾಲೆಯೊಂದರಲ್ಲಿ ಹೆಣ್ಣುಮಕ್ಕಳು ನೃತ್ಯ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಬೆನ್ನಲ್ಲೇ ಈ ಚರ್ಚೆ ಆರಂಭವಾಗಿದೆ.

ಝೈರಾ ವಾಸಿಮ್ ಪ್ರಶ್ನೆಗಳೇನು?

ಇಸ್ಲಾಮಿಕ್ ಮೌಲ್ಯಗಳ ಕಡೆಗಣನೆ: ವಕ್ಫ್ ಮಂಡಳಿಯು ಮುಸ್ಲಿಂ ಸಮುದಾಯದ ಸೇವೆ ಮತ್ತು ಇಸ್ಲಾಮಿಕ್ ಮೌಲ್ಯಗಳನ್ನು ಎತ್ತಿಹಿಡಿಯುವ ಧಾರ್ಮಿಕ ಸಂಸ್ಥೆಯಾಗಿದೆ. ಅಂತಹ ಸಂಸ್ಥೆಯು ಇಂತಹ ಪ್ರದರ್ಶನಗಳನ್ನು ಬೆಂಬಲಿಸುವುದು ಎಷ್ಟು ಸರಿ ಎಂದು ಅವರು ‘X’ (ಟ್ವಿಟರ್) ಖಾತೆಯಲ್ಲಿ ಪ್ರಶ್ನಿಸಿದ್ದಾರೆ.

ಮಕ್ಕಳನ್ನು ಬಳಸಿಕೊಳ್ಳುವ ರೀತಿ: ಸಾರ್ವಜನಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಹೆಣ್ಣುಮಕ್ಕಳನ್ನು ಕೇವಲ ಬೇಡದ ಹಾಡುಗಳಿಗೆ ನೃತ್ಯ ಮಾಡಿಸುವುದೇ ಪ್ರಮುಖ ಆದ್ಯತೆಯಾಗಬಾರದು. ಬದಲಿಗೆ ಅವರಲ್ಲಿ ಚಿಂತನೆ, ಕಲಿಕೆ, ಸೃಜನಶೀಲತೆ ಮತ್ತು ಸಂವಾದ ಬೆಳೆಸುವಂತಹ ಅವಕಾಶಗಳನ್ನು ನೀಡಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

ಸಂಸ್ಥೆಗಳ ಜವಾಬ್ದಾರಿ: ತಾವು ಮಕ್ಕಳನ್ನು ಆರೋಪಿಗಳನ್ನಾಗಿ ಮಾಡುತ್ತಿಲ್ಲ; ಶಾಲೆಗಳು ಮತ್ತು ಸಂಸ್ಥೆಗಳು ಏನು ನೀಡುತ್ತವೆಯೋ ಅದನ್ನು ಮಕ್ಕಳು ಅನುಸರಿಸುತ್ತಾರೆ. ಆದರೆ ಧಾರ್ಮಿಕ ಮತ್ತು ಶೈಕ್ಷಣಿಕ ಸಂಸ್ಥೆಗಳು ಸಾಂಸ್ಕೃತಿಕ ಹಾಗೂ ಬೌದ್ಧಿಕ ಪರಂಪರೆಯನ್ನು ಎತ್ತಿಹಿಡಿಯುವ ಜವಾಬ್ದಾರಿ ಹೊಂದಿರಬೇಕು ಎಂದು ಹೇಳಿದ್ದಾರೆ.

2019 ರಲ್ಲಿ ಧಾರ್ಮಿಕ ನಂಬಿಕೆಗಳ ಕಾರಣ ನೀಡಿ ನಟನೆಯಿಂದ ದೂರವುಳಿದಿದ್ದ ಝೈರಾ ವಾಸಿಮ್ ಅವರ ಈ ಹೇಳಿಕೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

Share

Leave a comment

Leave a Reply

Your email address will not be published. Required fields are marked *