Home ದಾವಣಗೆರೆ ಐರಿಶ್ ವಿಸ್ಕಿ ಮೇಲಿನ 10% ಸುಂಕ ರದ್ದುಗೊಳಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರ್ಧಾರ
ದಾವಣಗೆರೆನವದೆಹಲಿಬೆಂಗಳೂರುವಾಣಿಜ್ಯ

ಐರಿಶ್ ವಿಸ್ಕಿ ಮೇಲಿನ 10% ಸುಂಕ ರದ್ದುಗೊಳಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರ್ಧಾರ

Share
ಅಮೆರಿಕ
Share

ಡಬ್ಲಿನ್ (ಐರ್ಲೆಂಡ್): ಯುರೋಪಿಯನ್ ಯೂನಿಯನ್ ದೇಶಗಳಿಂದ ಆಮದಾಗುವ ಮದ್ಯದ ಉತ್ಪನ್ನಗಳ ಮೇಲೆ ವಿಧಿಸಲಾಗಿದ್ದ ಸುಂಕದ ಪೈಕಿ, ಐರಿಶ್ ವಿಸ್ಕಿ ಮೇಲಿನ ಶೇಕಡಾ 10 ರಷ್ಟು ಸುಂಕವನ್ನು ಅಮೆರಿಕ ಶೀಘ್ರದಲ್ಲೇ ರದ್ದುಗೊಳಿಸಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ.

ಐರ್ಲೆಂಡ್‌ನ ಡೂನ್‌ಬೆಾಗ್‌ನಲ್ಲಿ ನಡೆದ ಐರಿಶ್ ಓಪನ್ ಗಾಲ್ಫ್ ಪಂದ್ಯಾವಳಿಯ ಬಹುಮಾನ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಟ್ರಂಪ್, ಐರ್ಲೆಂಡ್ ಪ್ರಧಾನಿ ಮೈಕೆಲ್ ಮಾರ್ಟಿನ್ ಹಾಗೂ ಪ್ರಸಿದ್ಧ ಗಾಲ್ಫ್ ಆಟಗಾರ ಶೇನ್ ಲೌರಿ ಸೇರಿದಂತೆ ಹಲವರು ಈ ಸುಂಕವನ್ನು ಹಿಂಪಡೆಯುವಂತೆ ಮನವಿ ಮಾಡಿದ್ದರು ಎಂದು ತಿಳಿಸಿದ್ದಾರೆ.

“ಎಲ್ಲರೂ ನನ್ನ ಬಳಿ ಮನವಿ ಮಾಡಿಕೊಂಡಿದ್ದಾರೆ. ಐರಿಶ್ ವಿಸ್ಕಿ ಮೇಲಿನ ಸುಂಕವನ್ನು ಹಿಂಪಡೆಯುವಂತೆ ವಿನಂತಿಸಿದ್ದಾರೆ. ಹೀಗಾಗಿ ಅಮೆರಿಕದ ಪರವಾಗಿ ನಾನು ಐರಿಶ್ ವಿಸ್ಕಿ ಮೇಲಿನ ಸುಂಕವನ್ನು ರದ್ದುಗೊಳಿಸುತ್ತಿದ್ದೇನೆ” ಎಂದು ಟ್ರಂಪ್ ಸಾರ್ವಜನಿಕವಾಗಿ ಪ್ರಕಟಿಸಿದರು. ಆರಂಭದಲ್ಲಿ ಶೇಕಡಾ 15 ರಷ್ಟಿದ್ದ ಈ ಆಮದು ಸುಂಕವನ್ನು ಜುಲೈ ತಿಂಗಳಿನಲ್ಲಿ 10% ಗೆ ಇಳಿಸಲಾಗಿತ್ತು. ಪ್ರಸ್ತುತ ಇದನ್ನು ಸಂಪೂರ್ಣವಾಗಿ ರದ್ದುಗೊಳಿಸಲು ತೀರ್ಮಾನಿಸಲಾಗಿದ್ದು, ಈ ನಿರ್ಧಾರವನ್ನು ಐರಿಶ್ ವಿಸ್ಕಿ ಅಸೋಸಿಯೇಷನ್ ಸ್ವಾಗತಿಸಿದೆ.

Share

Leave a comment

Leave a Reply

Your email address will not be published. Required fields are marked *