Home ಕ್ರೈಂ ನ್ಯೂಸ್ “ಕಾಪಾಡಿ, ಕಾಪಾಡಿ” ಎಂದು ಓಡಿಬಂದ ಯುವತಿ ಕೂದಲು ಹಿಡಿದು ಎಳೆದಾಡಿದ ಸಲ್ಮಾನ್: ಒತ್ತಾಯಾಳುವಾಗಿಟ್ಟುಕೊಂಡು ಅತ್ಯಾಚಾರ ಎಸಗಿದ್ದ ಆರೋಪಿ ಬಂಧನ, ಹೊಟೇಲ್ ಸೀಜ್!
ಕ್ರೈಂ ನ್ಯೂಸ್ದಾವಣಗೆರೆಬೆಂಗಳೂರು

“ಕಾಪಾಡಿ, ಕಾಪಾಡಿ” ಎಂದು ಓಡಿಬಂದ ಯುವತಿ ಕೂದಲು ಹಿಡಿದು ಎಳೆದಾಡಿದ ಸಲ್ಮಾನ್: ಒತ್ತಾಯಾಳುವಾಗಿಟ್ಟುಕೊಂಡು ಅತ್ಯಾಚಾರ ಎಸಗಿದ್ದ ಆರೋಪಿ ಬಂಧನ, ಹೊಟೇಲ್ ಸೀಜ್!

Share
ಯುವತಿ
Share

ಮೀರತ್: ಉತ್ತರ ಪ್ರದೇಶದ ಮೀರತ್ ನಗರದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದ್ದು, ಘಾಜಿಯಾಬಾದ್ ಮೂಲದ 24 ವರ್ಷದ ಯುವತಿಯೊಬ್ಬರನ್ನು ಹೋಟೆಲ್‌ನಲ್ಲಿ ಒತ್ತೆಯಿಟ್ಟು ಅತ್ಯಾಚಾರ ಎಸಗಿರುವ ದಾರುಣ ಘಟನೆ ಬೆಳಕಿಗೆ ಬಂದಿದೆ.

ಹೋಟೆಲ್‌ನಿಂದ ಹೇಗೋ ತಪ್ಪಿಸಿಕೊಂಡು “ಕಾಪಾಡಿ, ಕಾಪಾಡಿ” ಎಂದು ಕೂಗುತ್ತಾ ಓಡಿಬಂದ ಯುವತಿಯನ್ನು, ಆರೋಪಿ ಸಲ್ಮಾನ್ ಸಾರ್ವಜನಿಕರ ಮುಂದೆಯೇ ಎಳೆದಾಡಿಕೊಂಡು ಮತ್ತೆ ಒಳಗೆ ಕರೆದೊಯ್ದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಸದರ್ ಬಜಾರ್ ಪ್ರದೇಶದಲ್ಲಿರುವ ಹೋಟೆಲ್‌ನಲ್ಲಿ ಈ ನಾಟಕೀಯ ಘಟನೆ ನಡೆದಿದೆ. ಕಂಕರ್‌ಖೇರಾ ನಿವಾಸಿ ಸಲ್ಮಾನ್ ಎಂಬಾತನೊಂದಿಗೆ ಯುವತಿ ಕಳೆದ ಎರಡೂವರೆ ವರ್ಷಗಳಿಂದ ಪರಿಚಿತಳಾಗಿದ್ದು, ಮದುವೆಯಾಗುವಂತೆ ಒತ್ತಾಯಿಸಿ ಆತ ಹೋಟೆಲ್‌ನಲ್ಲಿ ಕೂಡಿಹಾಕಿರುವುದಾಗಿ ಯುವತಿ ದೂರು ನೀಡಿದ್ದಾರೆ. ಯುವತಿ ತಪ್ಪಿಸಿಕೊಂಡು ಹೊರಬಂದಾಗ ಸ್ಥಳೀಯರು ಸಹಾಯಕ್ಕೆ ಧಾವಿಸಿದರೂ, ಹೋಟೆಲ್ ಸಿಬ್ಬಂದಿ ತಡೆದಿದ್ದಾರೆ.

ತದನಂತರ ಪೊಲೀಸರ ಮೇಲೆ ಗುಂಡು ಹಾರಿಸಿ ಪರಾರಿಯಾಗಲು ಯತ್ನಿಸಿದ ಆರೋಪಿ ಸಲ್ಮಾನ್, ಸೇತುವೆ ಮೇಲಿಂದ ಜಾರಿ ಬಿದ್ದು ಕಾಲಿಗೆ ಗಾಯ ಮಾಡಿಕೊಂಡು ಪೊಲೀಸರ ಅತಿಥಿಯಾಗಿದ್ದಾನೆ. ಹೋಟೆಲ್ ಅನ್ನು ಸೀಲ್ ಮಾಡಲಾಗಿದ್ದು, ಸಿಬ್ಬಂದಿಯ ಪಾತ್ರದ ಬಗ್ಗೆಯೂ ತನಿಖೆ ಮುಂದುವರಿದಿದೆ.

ಸೋಮವಾರದಿಂದ ಹೋಟೆಲ್‌ನಲ್ಲಿ ಒತ್ತೆಯಾಳಾಗಿದ್ದ ಯುವತಿ, ಹೇಗೋ ತಪ್ಪಿಸಿಕೊಂಡು ಹೊರಬಂದು “ಕಾಪಾಡಿ ಕಾಪಾಡಿ” ಎಂದು ಕಿರುಚಾಡುತ್ತಾ ಓಡಿದ್ದಾಳೆ.

ಸಾರ್ವಜನಿಕರ ಮುಂದೆಯೇ ಎಳೆದಾಟ: ಯುವತಿಯನ್ನು ಬೆನ್ನಟ್ಟಿದ ಸಲ್ಮಾನ್, ಜನರೆದುರೇ ಆಕೆಯನ್ನು ಬಲವಂತವಾಗಿ ಮತ್ತೆ ಹೋಟೆಲ್ ಒಳಗೆ ಎಳೆದುಕೊಂಡು ಹೋಗಿದ್ದಾನೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಪೊಲೀಸ್ ಕಾರ್ಯಾಚರಣೆ ಹಾಗೂ ಬಂಧನ: ತಲೆಮರೆಸಿಕೊಳ್ಳಲು ಯತ್ನಿಸಿ ಪೊಲೀಸರ ಮೇಲೆ ಗುಂಡು ಹಾರಿಸಿ ಪರಾರಿಯಾಗುತ್ತಿದ್ದಾಗ ಕಾಲು ಜಾರಿ ಬಿದ್ದು ಗಾಯಗೊಂಡ ಆರೋಪಿ ಸಲ್ಮಾನ್‌ನನ್ನು ಪೊಲೀಸರು ಬಂಧಿಸಿದ್ದಾರೆ.

ಪೊಲೀಸರು ಯುವತಿಯ ದೂರಿನ ಮೇರೆಗೆ ಅತ್ಯಾಚಾರ, ಹಲ್ಲೆ ಹಾಗೂ ಅಪಹರಣ ಪ್ರಕರಣ ದಾಖಲಿಸಿಕೊಂಡಿದ್ದು, ಹೋಟೆಲ್ ಮಾಲೀಕರು ಮತ್ತು ಸಿಬ್ಬಂದಿ ಯುವತಿಯ ದಾಖಲೆಗಳನ್ನು ಪಡೆಯದೆ ರೂಮ್ ನೀಡಿದ್ದರ ಬಗ್ಗೆಯೂ ತನಿಖೆ ನಡೆಸುತ್ತಿದ್ದಾರೆ.”ಕಾಪಾಡಿ, ಕಾಪಾಡಿ” ಎಂದು ಓಡಿಬಂದ ಯುವತಿಯನ್ನು ಕೂದಲು ಹಿಡಿದು ಒಳಗೆಳೆದ ಕಾಮುಕ: ಮೀೀರತ್ ಹೋಟೆಲ್ ದೃಶ್ಯ ವೈರಲ್!

Share

Recent Comments

No comments to show.
Related Articles