SUDDIKSHANA KANNADA NEWS/ DAVANAGERE/ DATE:25-03-2025
ಬೆಂಗಳೂರು: ಸಹಕಾರ ಸಚಿವ ಕೆ. ಎನ್. ರಾಜಣ್ಣರನ್ನು ಹನಿಟ್ರ್ಯಾಪ್ ಖೆಡ್ಡಾಕ್ಕೆ ಕೆಡವಲು ಬಂದಿದ್ದ ಯುವತಿ ಯಾರು? ಹೇಗಿದ್ದಳು? ಯಾವ ಡ್ರೆಸ್ ತೊಟ್ಟಿದ್ದಳು ಎಂಬ ಕುತೂಹಲ ಎಲ್ಲರಿಗೂ ಇದ್ದೇ ಇದೆ. ಆದ್ರೆ, ಈ ವಿಚಾರವನ್ನು ಸ್ವತಃ ಸಚಿವ ಕೆ. ಎನ್. ರಾಜಣ್ಣ ಅವರೇ ತಿಳಿಸಿದ್ದಾರೆ.
ರಾಜ್ಯ ರಾಜಕಾರಣ ಮಾತ್ರವಲ್ಲ, ರಾಷ್ಟ್ರ ರಾಜಕಾರಣದಲ್ಲಿ ಕೋಲಾಹಲ ಎಬ್ಬಿಸಿರುವ ಹನಿಟ್ರ್ಯಾಪ್ ವಿಚಾರ ಸದ್ದು ಮಾಡುತ್ತಲೇ ಇದೆ. ಬಿಜೆಪಿ – ಜೆಡಿಎಸ್ ಪಕ್ಷಗಳ ನಾಯಕರಂತೂ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ಆರೋಪಗಳ ಸುರಿಮಳೆ ಮಾಡುತ್ತಿದ್ದಾರೆ. ಕೆಲವರು ಸಿಎಂ ಸಿದ್ದರಾಮಯ್ಯರು ಸಿಎಂ ಖುರ್ಚಿ ಉಳಿಸಿಕೊಳ್ಳಲು ಮಾಡಿದ ಪ್ಲ್ಯಾನ್ ಎಂದರೆ, ಮತ್ತೆ ಕೆಲವರು ಡಿಸಿಎಂ ಡಿ. ಕೆ. ಶಿವಕುಮಾರ್ ಅವರು ಸಿಎಂ ಖುರ್ಚಿಯಲ್ಲಿ ಕುಳಿತುಕೊಳ್ಳಲು ಮಾಡಿರುವ ಷಡ್ಯಂತ್ರ ಎಂದು ಹೇಳುತ್ತಿದ್ದಾರೆ.
ಇದಕ್ಕೆ ಯಾವುದೇ ಸ್ಪಷ್ಟ ಪುರಾವೆ ಇಲ್ಲದಿದ್ದರೂ ಆರೋಪಗಳು ಮಾತ್ರ ಕೇಳಿ ಬರುತ್ತಲೇ ಇವೆ. ಇದೀಗ ಕೆ. ಎನ್. ರಾಜಣ್ಣ ಅವರೇ ಅಂದು ಬಂದಿದ್ದ ಹುಡುಗಿಯ ಬಗ್ಗೆ ಮಾಹಿತಿ ನೀಡಿದ್ದಾರೆ.
ಆಕೆ ಯುವತಿ. ಬ್ಲೂ ಟಾಪ್ ಹಾಗೂ ಜೀನ್ಸ್ ಧರಿಸಿದ್ದಳು. ಒಮ್ಮೆ ಮಾತ್ರವಲ್ಲ, ಎರಡು ಬಾರಿ ಬಂದಿದ್ದಳು. ಆಕೆ ಜೊತೆ ಒಬ್ಬ ಹುಡುಗ ಕೂಡ ಇದ್ದ. ಎರಡು ಬಾರಿ ಬಂದವರು ಬೇರೆ ಬೇರೆಯವರು. ಒಬ್ಬರೇ ಅಲ್ಲ. ಫಸ್ಟ್ ಬಂದಾಗ ಹೈಕೋರ್ಟ್
ವಕೀಲರು ಎಂದು ಪರಿಚಯಿಸಿಕೊಂಡಿದ್ದರು. 2ನೇ ಬಾರಿಯೂ ವಕೀಲೆ ಎಂದು ಹೇಳಿಕೊಂಡಿದ್ದರು ಎಂದು ರಾಜಣ್ಣ ತಿಳಿಸಿದ್ದಾರೆ.
ಬಂದು ಹೋಗಿರುವುದಕ್ಕೆ ನಮ್ಮ ಬಳಿ ಸಾಕ್ಷಿ ಇಲ್ಲ. ನನ್ನ ಮನೆಯಲ್ಲಿ ಸಿಸಿಟಿವಿ ಇಲ್ಲ. ಹಾಗಾಗಿ, ಅವರು ಯಾರು ಎಂದು ತಿಳಿದಿಲ್ಲ. ಆದರೆ ಫೋಟೋ ತೋರಿಸಿದರೆ ಅವರನ್ನು ಗುರುತು ಹಿಡಿಯುತ್ತೇನೆ. ನಿರಂತರ ಕಾರ್ಯಕ್ರಮವಿದ್ದ ಕಾರಣ ಇಷ್ಟು ದಿನ ದೂರು ಬರೆಯಲಾಗಿರಲಿಲ್ಲ. ನಾನೇ ಇಂದು ಕುಳಿತು ಬರೆದಿದ್ದೇನೆ. ಗೃಹ ಸಚಿವ ಪರಮೇಶ್ವರ್ ಅವರಿಗೆ ದೂರು ಕೊಟ್ಟಿದ್ದೇನೆ ಎಂದು ತಿಳಿಸಿದ್ದಾರೆ. ನ್ನನ ಬೆಂಗಳೂರು ಮನೆಯಲ್ಲಿ ಸಿಸಿಟಿವಿ ಇಲ್ಲ. ಹಾಗಾಗಿ ಯಾರು ಬಂದು ಹೋಗಿರುತ್ತಾರೆ ಎನ್ನುವ ದಾಖಲೆ ಇರುವುದಿಲ್ಲ. ಅಪರಿಚಿತರು ಅಂತ ದೂರಿನಲ್ಲಿ ದಾಖಲಿಸಿದ್ದೇನೆ ಎಂದು ಮಾಹಿತಿ ನೀಡಿದ್ದಾರೆ.