ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಕಳುವಾದ ಎಷ್ಟು ಮೊಬೈಲ್ ಬ್ಲಾಕ್ ಮಾಡಲಾಗಿದೆ…? ವಶಪಡಿಸಿಕೊಂಡ 206 ಮೊಬೈಲ್ ಗಳ ಮೌಲ್ಯವೆಷ್ಟು…?

On: January 5, 2024 4:59 PM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:05-01-2024

ದಾವಣಗೆರೆ: ಸಿಇಐಆರ್ ಪೋರ್ಟಲ್ ಸಹಾಯದಿಂದ ಕಳುವಾದ, ಕಳೆದುಕೊಂಡಿದ್ದ ಮೊಬೈಲ್ ಗಳನ್ನು ಪತ್ತೆ ಮಾಡಿ ವಾರಸುದಾರರಿಗೆ ಹಸ್ತಾಂತರಿಸಲಾಯಿತು. ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಎಸ್ಪಿ ಉಮಾ ಪ್ರಶಾಂತ್ ಅವರ ಅಧ್ಯಕ್ಷತೆಯಲ್ಲಿ ಸಿಇಐಆರ್ ಪೋರ್ಟಲ್ ಮೂಲಕ ಪತ್ತೆಯಾದ ಮೊಬೈಲ್‌ಗಳನ್ನು ಹಸ್ತಾಂತರಿಸುವ ಕಾರ್ಯಕ್ರಮ ಆಯೋಜಿಸಲಾಗಿತ್ತು.

ದಾವಣಗೆರೆ ಜಿಲ್ಲಾ ವ್ಯಾಪ್ತಿಯಲ್ಲಿ ಕಳುವಾದ, ಕಳೆದು ಹೋದ ಮೊಬೈಲ್ ಫೋನ್‌ಗಳನ್ನು ಸಿಇಐಆರ್ ಪೋರ್ಟಲ್ ನಲ್ಲಿ ಮೊಬೈಲ್ ವಾರಸುದಾರರ ವಿವರಗಳನ್ನು ನಮೂದು ಮಾಡಿ ಮೊಬೈಲ್ ಐಎಂಇಐ ನಂಬರ್ ಅನ್ನು ಬ್ಲಾಕ್ ಮಾಡಿ ಕಳೆದು ಹೋದ ಮೊಬೈಲ್‌ಗಳ ಪೈಕಿ 206 ಮೊಬೈಲ್‌ಗಳನ್ನು ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ಪತ್ತೆ ಮಾಡಲಾಗಿದೆ.

ಪತ್ತೆಯಾದ ಮೊಬೈಲ್‌ಗಳ ಅಂದಾಜು ಮೊತ್ತ 25,00,000 ಆಗಿದೆ. 2023 ರ ಸಾಲಿನಲ್ಲಿ ದಾವಣಗೆರೆ ಜಿಲ್ಲಾ ವ್ಯಾಪ್ತಿಯಲ್ಲಿ ಕಳುವಾದ, ಕಳೆದು ಹೋದ ಮೊಬೈಲ್‌ ಫೋನ್‌ಗಳನ್ನು ಸಿಇಐಆರ್ ಪೋರ್ಟಲ್ ನಲ್ಲಿ ಮೊಬೈಲ್ ವಾರಸುದಾರರ ವಿವರಗಳನ್ನು ನಮೂದು ಮಾಡಿ ಮೊಬೈಲ್ ಐಎಂಇಐ ನಂಬರ್ ಮೂಲಕ ಒಟ್ಟು 3,880 ಮೊಬೈಲ್‌ಗಳನ್ನು ಬ್ಲಾಕ್ ಮಾಡಲಾಗಿದೆ. ಅದರಲ್ಲಿ 889 ಮೊಬೈಲ್‌ಗಳನ್ನು ಮೊಬೈಲ್‌ ವಾರಸುದಾರರಿಗೆ ಹಿಂದಿರುಗಿಸಲಾಗಿದೆ.

ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೆ ಕಳುವಾದ, ಕಳೆದು ಹೋದ ಮೊಬೈಲ್ ಪೋನ್‌ಗಳನ್ನು ವಾರಸುದಾರರು ಕೆ ಎಸ್ ಪಿ ಮೊಬೈಲ್ ‘ಆ್ಯಪ್ ಮೂಲಕ ಇ-ಲಾಸ್ ನಲ್ಲಿ ದೂರು ದಾಖಲಿಸಿ , ದೂರಿನ ಸ್ವೀಕೃತಿ ಪ್ರತಿಯನ್ನು ಡೌನ್‌ಲೋಡ್ ಮಾಡಿ ಮೊಬೈಲ್ ಬ್ಲಾಕ್ ಹೇಗೆ ಮಾಡಬೇಕು ಎಂಬ ಕುರಿತಂತೆ ಮಾಹಿತಿ ನೀಡಲಾಯಿತು. ಕಾರ್ಯಕ್ರಮದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ -2 ಆದ ಜಿ. ಮಂಜುನಾಥ,ಸಿಇಎನ್ ಪೊಲೀಸ್ ನಿರೀಕ್ಷಕ ಪಿ. ಪ್ರಸಾದ್, ಪೊಲೀಸ್ ಸಿಬ್ಬಂದಿ ಹಾಗೂ ಮೊಬೈಲ್ ವಾರಸುದಾರರು ಉಪಸ್ಥಿತರಿದ್ದರು.

ಸಾರ್ವಜನಿಕರು ತಮ್ಮ ಮೊಬೈಲ್ ಕಳುವಾದಲ್ಲಿ, ಸುಲಿಗೆಯಾಗಿದ್ದಲ್ಲಿ, ಕಾಣೆಯಾಗಿದ್ದಲ್ಲಿ ಕೂಡಲೇ ನೂತನ ಸಿಐಐಆರ್ ವೆಬ್ ಪೋರ್ಟಲ್ ಗೆ ಭೇಟಿ ನೀಡಿ ನೋಂದಾಯಿಸಲು ಹಾಗೂ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಉಮಾ ಪ್ರಶಾಂತ್ ತಿಳಿಸಿದರು.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment