ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಸಿಂಧೂ ನದಿ ಬೇರೆಡೆ ತಿರುಗಿಸಲು ಯಾವುದೇ ರಚನೆ ನಿರ್ಮಿಸಿದ್ರೂ ಹೊಡೆದುರುಳಿಸುತ್ತೇವೆ: ಪಾಕ್ ಸಚಿವನ ಹೊಸ ಬೆದರಿಕೆ…!

On: May 3, 2025 7:22 PM
Follow Us:
---Advertisement---

SUDDIKSHANA KANNADA NEWS/ DAVANAGERE/ DATE-03-05-2025

ಇಸ್ಲಮಾಬಾದ್: ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಪಾಕ್ ನಾಯಕರ ಮಾತಿನ ಮೇಲೆ ಹಿಡಿತವೇ ಇಲ್ಲ. ಪಾಕಿಸ್ತಾನದ ಶೇಕಡಾ 80ರಷ್ಟು ಕೃಷಿ ಭೂಮಿಗೆ ನೀರು ಒದಗಿಸುವ ಸಿಂಧೂ ಜಲ ಒಪ್ಪಂದವನ್ನು ಭಾರತ ಅಮಾನತುಗೊಳಿಸಿತ್ತು. ಬಳಿಕ ಪಾಕಿಸ್ತಾನ ಪಿಎಂ ಸೇರಿದಂತೆ ಎಲ್ಲರೂ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಪಾಕ್ ರಕ್ಷಣಾ ಸಚಿವ ಖವಾಜಾ ಆಸಿಫ್, ಭಾರತವು ಸಿಂಧೂ ಒಪ್ಪಂದದಡಿಯಲ್ಲಿ ದೇಶದ ಪಾಲಿನ ನೀರನ್ನು ಬೇರೆಡೆಗೆ ತಿರುಗಿಸಲು ನಿರ್ಮಿಸಿದ ಯಾವುದೇ ರಚನೆಯನ್ನು ನಾಶಪಡಿಸಲಾಗುವುದು ಎಂದು ಹೇಳಿದ್ದಾನೆ.

ಸಂದರ್ಶನವೊಂದರಲ್ಲಿ ಮಾತನಾಡಿದ ಆತನು ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ, ಪಾಕಿಸ್ತಾನದ ಕೃಷಿ ಭೂಮಿಯ 80% ಗೆ ನೀರನ್ನು ಖಾತ್ರಿಪಡಿಸುವ ಸಿಂಧೂ ಜಲ ಒಪ್ಪಂದವನ್ನು ಭಾರತ ಅಮಾನತುಗೊಳಿಸಿದ್ದು ಸರಿಯಲ್ಲ. ಪಾಕಿಸ್ತಾನದ ನೀರನ್ನು ಬೇರೆಡೆಗೆ ತಿರುಗಿಸುವುದನ್ನು “ಆಕ್ರಮಣಶೀಲತೆಯ ಮುಖ” ಎಂದು ನೋಡಲಾಗುತ್ತದೆ ಎಂದು ಪುನರುಚ್ಚರಿಸಿದ್ದಾನೆ.

ಭಾರತ ಸಿಂಧೂ ನದಿಯ ಜಲಾನಯನ ಪ್ರದೇಶದಲ್ಲಿ ಅಣೆಕಟ್ಟುಗಳನ್ನು ನಿರ್ಮಿಸಲು ಮುಂದಾದರೆ ಪಾಕಿಸ್ತಾನದ ಪ್ರತಿಕ್ರಿಯೆ ಏನು ಎಂದು ಕೇಳಿದಾಗ, ಆಸಿಫ್, “ಅದು ಪಾಕಿಸ್ತಾನದ ವಿರುದ್ಧದ ಆಕ್ರಮಣವಾಗುತ್ತದೆ… ಅವರು (ಭಾರತ)
ನೀರು ಬೇರೆಡೆ ತಿರುಗಿಸಲು ಬೇರೆ ರೀತಿಯ ಯೋಜನೆ ರೂಪಿಸಿದರೆ ಪಾಕಿಸ್ತಾನ ಆ ರಚನೆಯನ್ನು ನಾಶಪಡಿಸುತ್ತದೆ” ಎಂದು ಹೇಳಿದ್ದಾನೆ..

ಆಸಿಫ್ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ ಬಿಜೆಪಿ ರಾಷ್ಟ್ರೀಯ ವಕ್ತಾರ ಶಹನವಾಜ್ ಹುಸೇನ್, ಇಂತಹ “ಟೊಳ್ಳಾದ ಬೆದರಿಕೆಗಳು” ಪಾಕಿಸ್ತಾನಿಗಳಲ್ಲಿ ಭಯವನ್ನು ತೋರಿಸುತ್ತವೆ ಎಂದು ಹೇಳಿದರು.

“ಖವಾಜಾ ಆಸಿಫ್ ಸ್ಪಷ್ಟವಾಗಿ ನಡುಗಿದ್ದಾರೆ. ಅವರು ಪಾಕಿಸ್ತಾನದ ರಕ್ಷಣಾ ಸಚಿವರಾಗಿದ್ದರೂ, ಅವರಿಗೆ ಯಾವುದೇ ನಿಯಂತ್ರಣವಿಲ್ಲ. ಅವರು ಕೇವಲ ‘ಹೇಳಿಕೆ ಸಚಿವ’, ನಿರಂತರವಾಗಿ ಪೊಳ್ಳು ಬೆದರಿಕೆಗಳನ್ನು ನೀಡುತ್ತಿದ್ದಾರೆ. ಪಾಕಿಸ್ತಾನಿಗಳಲ್ಲಿ ಭಯ ಸ್ಪಷ್ಟವಾಗಿದೆ. ಅವರು ರಾತ್ರಿಯಲ್ಲಿ ನಿದ್ರೆ ಕಳೆದುಕೊಳ್ಳುತ್ತಿದ್ದಾರೆ,” ಎಂದು ಹುಸೇನ್ ಮಾಧ್ಯಮಗಳಿಗೆ ತಿಳಿಸಿದರು.

ಭಾರತವು ಭಾರತಕ್ಕೆ ಸಿಂಧೂ ನದಿಯ “ಒಂದು ಹನಿ ನೀರು” ಪಾಕಿಸ್ತಾನಕ್ಕೆ ಹೋಗದಂತೆ ನೋಡಿಕೊಳ್ಳುತ್ತದೆ ಎಂದು ಜಲಶಕ್ತಿ ಸಚಿವ ಸಿಆರ್ ಪಾಟೀಲ್ ಹೇಳಿದ ಬಳಿಕ ಆಸಿಫ್ ಈ ರೀತಿ ಹೇಳಿದ್ದಾನೆ.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment