SUDDIKSHANA KANNADA NEWS/ DAVANAGERE/ DATE:26-01-2025
ದಾವಣಗೆರೆ: ಮಾಜಿ ಸಚಿವ ಹಾಗೂ ಬಿಜೆಪಿ ಹಿರಿಯ ಧುರೀಣ ಎಸ್. ಎ. ರವೀಂದ್ರನಾಥ್ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿ ಶಿರಮಗೊಂಡನಹಳ್ಳಿಯ ನಿವಾಸದಲ್ಲಿ ವಿಶ್ರಾಂತಿ ಪಡೆಯುತ್ತಿದ್ದು, ಆರೋಗ್ಯ ವಿಚಾರಿಸಲು ತೆರಳಿದ್ದೆವು. ಇದನ್ನೇ ತಪ್ಪಾಗಿ ಅರ್ಥೈಸಿದರೆ ಹೇಗೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಪ್ರಶ್ನಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಿನ್ನೆ ದಿವಸ ರವೀಂದ್ರನಾಥ್ ಅವರನ್ನು ನೋಡಲು ಹೋಗಿದ್ದೆ. ಇದನ್ನೇ ತಪ್ಪಾಗಿ ಹೇಳಿದರೆ ಹೇಗೆ? ತಪ್ಪು ತಿಳುವಳಿಕೆ ಬಂದರೆ ಏನ್ ಮಾಡಬೇಕು ಎಂದು ಹೇಳಿದರು.
ರವೀಂದ್ರನಾಥ್ ರ ಮೈಗೆ ಆರಾಮು ಇರಲಿಲ್ಲ. ಪತ್ನಿ ಪ್ರಭಾ ಹೋಗಿ ಬರೋಣ ಎಂದ್ರು. ಹೋಗಿ ಬಂದಿದ್ದೇವೆ. ರವೀಂದ್ರನಾಥ್ ಅವರು ಹಾಗೂ ಅವರ ಪತ್ನಿ ರತ್ನಮ್ಮರಿಗೆ ಕಣ್ಣಿನ ಆಪರೇಷನ್ ಆಗಿತ್ತು. ಹೋಗಿ ಆರೋಗ್ಯ ವಿಚಾರಿಸಿಕೊಂಡು ಕುಶಲೋಪಚರಿ ವಿಚಾರಿಸಿಕೊಂಡು ಬಂದಿದ್ದೇವೆ. ಇದನ್ನೇ ದೊಡ್ಡದು ಮಾಡುವುದು ಸರಿಯಲ್ಲ ಎಂದು ಹೇಳಿದರು.
ಗೋಷ್ಠಿಯಲ್ಲಿ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್, ಮಾಜಿ ಸಚಿವ ಹೆಚ್. ಆಂಜನೇಯ, ಮೇಯರ್ ಕೆ. ಚಮನ್ ಸಾಬ್, ದೂಡಾ ಅಧ್ಯಕ್ಷ ದಿನೇಶ್ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಬಿ ಮಂಜಪ್ಪ ಮತ್ತಿತರರಿದ್ದರು.