SUDDIKSHANA KANNADA NEWS/ DAVANAGERE/ DATE:24-02-2025
ದಾವಣಗೆರೆ: ಜಿಲ್ಲೆಯ ಹೊನ್ನಾಳಿ – ನ್ಯಾಮತಿ ತಾಲೂಕಿನ ತುಂಗಾಭದ್ರಾ ನದಿಯ ಮಧ್ಯೆ ನಡುಗಡ್ಡೆಯಲ್ಲಿರುವ ರಾಂಪುರ ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮೀಜಿ ಬೃಹನ್ಮಠದ ಮೂಲದ ಗುರುಗಳ ಶ್ರೀ ಸದ್ಗುರು ಶಿವಯೋಗಿ ಹಾಲಸಿದ್ದೇಶ್ವರ ಸ್ವಾಮೀಜಿಯ ಗವಿಯಲ್ಲಿ ಲೋಕಕಲ್ಯಾಣಾರ್ಥವಾಗಿ ಜಪ ತಪದ ಜೊತೆಗೆ ಮಹಾ ಮೌನಾನುಷ್ಠಾನ ಕೈಗೊಂಡಿದ್ದಾರೆ.
ನ್ಯಾಮತಿ ತಾಲೂಕಿನ ತಾಲೂಕಿನ ಕುರುವ , ಗೋವಿನಕೋವಿ ಮತ್ತು ರಾಂಪುರ ಗ್ರಾಮಗಳ ಮಧ್ಯೆ ಹರಿಯುವ ತುಂಗಾ ಭದ್ರ ನದಿಯ ಮಧ್ಯೆ ನಡುಗಡ್ಡೆಯಲ್ಲಿರುವ ರಾಂಪುರ ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮೀಜಿ ಬೃಹನ್ಮಠದ ಮೂಲ ಗುರುಗಳ ಶ್ರೀ ಸದ್ಗುರು ಶಿವಯೋಗಿ ಹಾಲಸಿದ್ದೇಶ್ವರ ಸ್ವಾಮೀಜಿಯ ಗವಿಯ ಮುಂದೆ ಭಕ್ತರೊಂದಿಗೆ ಸದ್ಗುರುಶಿವಯೋಗಿ ವಿಶ್ವಾರಾಧ್ಯ ಮಹಾಲಿಂಗ ಶಿವಾಚಾರ್ಯ ಹಾಲಸ್ವಾಮೀಜಿ ಪೂಜೆ ನೆರವೇರಿಸಿದರು.
ಶ್ರೀ ಹಾಲಸ್ವಾಮೀಜಿ ಬೃಹನ್ಮಠದ ಸದ್ಗುರು ಶಿವಯೋಗಿ ವಿಶ್ವಾರಾಧ್ಯ ಮಹಾಲಿಂಗ ಶಿವಾಚಾರ್ಯ ಹಾಲಸ್ವಾಮೀಜಿಯವರು ಮಾತನಾಡಿ, ಮನುಷ್ಯರಲ್ಲಿ ಅನುಸರಿಸುವ ಗುಣ, ಒಳ್ಳೆಯ ಹೃದಯವಂತಿಕೆ ಕೊಡು ಎಂದು ದೇವರನ್ನು ಪ್ರಾರ್ಥಿಸಿದರು.
ಇದು ದಕ್ಕಿದರೆ ಸಾರ್ಥಕ ಬದುಕು ಆಗುತ್ತದೆ. ಪ್ರತಿ ಮನುಷ್ಯನಲ್ಲೂ ದೇವರು ಇದ್ದಾನೆ ಎಂಬ ಜೀವಾನುಭವ ಹೊಂದಬೇಕು ಎಂದರು.
ಧಾರ್ಮಿಕ ಶ್ರದ್ಧೆ, ದೇವರ ಬಗ್ಗೆ ನಂಬಿಕೆ ಇಟ್ಟುಕೊಳ್ಳುವುದು ಮೂಢನಂಬಿಕೆ ಅಲ್ಲ, ದೇವರಲ್ಲಿ ನಂಬಿಕೆ ಇಟ್ಟ ವ್ಯಕ್ತಿ ಯಶಸ್ಸಿನ ಮೆಟ್ಟಿಲು ಏರುತ್ತಾನೆ. ಕಾಲ ಬದಲಾಗಬಹುದು. ಆದರೆ ಸತ್ಯ, ಧರ್ಮದ ಶಕ್ತಿ ಎಂದಿಗೂ ಕಡಿಮೆ ಆಗಲು ಸಾಧ್ಯವಿಲ್ಲ. ಅಂತಹ ನಂಬಿಕೆ ಅನೇಕ ವಿಚಾರಗಳನ್ನು ಹೊಂದಿ ಮಾನಸಿಕ ಶಕ್ತಿ ಹೆಚ್ಚಿಸುತ್ತದೆ , ನಂಬಿಕೆ ಮುಖ್ಯವಾಗಿ ಮನುಷ್ಯನಲ್ಲಿ ಹಲವು ಯುಕ್ತಿಗಳನ್ನು ಉಂಟು ಮಾಡಿ, ಆತ್ಮ ಬಲ ಹೆಚ್ಚು ಮಾಡಿ ಅಸಾಧ್ಯವಾದುದನ್ನೂ ಸಾಧಿಸಬಹುದಾದ ಆತ್ಮ ಶಕ್ತಿ ನೀಡುತ್ತದೆ. ಧರ್ಮ ಶ್ರದ್ಧೆಯು ವೈಜ್ಞಾನಿಕತೆಯ ವೈರುಧ್ಯವೇನಲ್ಲ ಎಂದು ಹೇಳಿದರು.
ಒಬ್ಬರನ್ನೊಬ್ಬರು ದೂಷಣೆ ಮಾಡುವ ಪರಿಸ್ಥಿತಿಗೆ ಬಂದಿದೆ. ಧರ್ಮದ ಹಾದಿಯಲ್ಲಿ ಕ್ರಮಿಸಿದಾತನ ಬಾಳಿನಲ್ಲಿ ಸುಖ, ಶಾಂತಿ ಲಭಿಸುವುದು ನಿಶ್ಚಿತ. ಧಾರ್ಮಿಕ ನಂಬಿಕೆ ಮೇಲೆ ಮಾನವನ ಬದುಕಿನ ಶ್ರೇಷ್ಠತೆ ಅಡಗಿದೆ ಎಂದು ಹೇಳಿದರು.
ಈ ವೇಳೆ ಹಾಲಸ್ವಾಮಿ ಸೇವಾ ಸಮಿತಿ ಅಧ್ಯಕ್ಷ ಎಸ್. ಈ. ರಮೇಶ, ಶಿವಮೂರ್ತಪ್ಪ, ಗಂಗಪ್ಪ, ರಾಜಪ್ಪ, ಸಿದ್ದೇಶ್, ಸೇರಿದಂತೆ ಹಾಲಸ್ವಾಮಿ ಸೇವಾ ಸಮಿತಿ ಪದಾಧಿಕಾರಿಗಳು, ಗೋವಿನಕೋವಿ, ಕುರುವ, ರಾಂಪುರ ಹಾಗೂ ಸುತ್ತಮುತ್ತಲಿನ ಗ್ರಾಮದ
ಭಕ್ತರು ಇದ್ದರು.