ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

Davanagere:ಅಧಿಕಾರ, ಸಂಪತ್ತು ವಿಕೇಂದ್ರೀಕರಣವಾಗಿ ಜನಸಾಮಾನ್ಯರ ಏಳಿಗೆಗೆ ಉಪಯೋಗವಾಗಬೇಕು: ವಿನಯ್ ಕುಮಾರ್ ಈ ಮಾತಿನ ಅರ್ಥವೇನು…?

On: October 23, 2023 11:41 AM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:23-10-2023

ದಾವಣಗೆರೆ (Davanagere): ಅಧಿಕಾರ, ಸಂಪತ್ತು ಒಂದೇ ಕಡೆಯಲ್ಲಿ ವಿಕೇಂದ್ರಿಕರಣದಿಂದ ಜನಸಾಮಾನ್ಯರ ಏಳಿಗೆಗೆ ಸದುಪಯೋಗವಾಗಬೇಕಿದೆ. ಆದ್ದರಿಂದ ನಮ್ಮ ಮಕ್ಕಳಿಗೆ ಉನ್ನತ ಮಟ್ಟದ ಶಿಕ್ಷಣ ಕೊಡಿಸುವಲ್ಲಿ ಮುಂದಾಗಬೇಕಿದೆ. ಏಕೆಂದರೆ ಶಿಕ್ಷಣದಿಂದಲೇ ಮಾತ್ರ ನಾವು ಸಮಾಜ ಸುಧಾರಣೆಯಾಗಲಿದೆ. ನಾವು ಕೂಡ ಬದಲಾವಣೆ ಆಗಬೇಕೆಂದರೆ ಮೊದಲು ಶಿಕ್ಷಣಕ್ಕೆ ಆದ್ಯತೆ ನೀಡಬೇಕಾಗಿದೆ ಎಂದು ಇನ್ಸೈಟ್ ಐಎಎಸ್, ಐಪಿಎಸ್ ತರಬೇತಿ ಸಂಸ್ಥೆಯ ಸಂಸ್ಥಾಪಕ ಜಿ. ಬಿ. ವಿನಯ ಕುಮಾರ್ ಹೇಳಿದರು.

Read Also This Story:

ಚಲುವ ಸಿನಿಮಾ ನಾಯಕಿಯ ಬದುಕಿನಲ್ಲಿ ಏಳು ಸುತ್ತಿನ ಕೋಟೆ ಕಟ್ಟಿದವರು ಯಾರು…? 25 ವರ್ಷದ ಬಿಜೆಪಿಗೆ ಗುಡ್ ಬೈ ಹೇಳಿದ್ಯಾಕೆ.. ರಾಜೀನಾಮೆ ಪತ್ರದಲ್ಲೇನು ಬರೆದಿದ್ದಾರೆ  ಗೌತಮಿ (Gautami) ತಡಿಮಲ್ಲ….?

ತಾಲೂಕಿನ ಮಳಲ್ಕೆರೆ ಮತ್ತು ಬಾಡ ಗ್ರಾಮದಲ್ಲಿ ವಿನಯ್ ಕುಮಾರ್ ಅಭಿಮಾನ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಮಾತನಾಡಿದ ಅವರು, ಹಳ್ಳಿಗಳ ಪರಿಸ್ಥಿತಿ ನೋಡಿದರೆ ನಾವು ಹಿಂದೆ ಹೇಗಿದ್ದೇವೊ ಈಗಲೂ ಅದೇ ಪರಿಸ್ಥಿತಿಯಲ್ಲಿ ಇದ್ದೇವೆ. ನಮ್ಮ ಆರ್ಥಿಕ, ಸಾಮಾಜಿಕ, ರಾಜಕೀಯ ಪರಿಸ್ಥಿತಿಗಳು ಇದುವರೆಗೂ ಬದಲಾವಣೆಯಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ನಿರುದ್ಯೋಗ, ಗ್ರಾಮೀಣ ಪ್ರದೇಶದಲ್ಲಿ ಉತ್ತಮ ಮಟ್ಟದ ಶಿಕ್ಷಣ, ರಸ್ತೆ , ಬಡತನ ಇವುಗಳೆಲ್ಲ ಹಾಗೆಯೇ ಉಳಿದಿವೆ. ಇವಳಿಗೆಲ್ಲ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಾಗಿರುವುದರಿಂದ ಮುಂಬರುವ ಲೋಕಸಭಾ ಚುನಾವಣೆಗೆ
ಸ್ಪರ್ಧಿಸಿ ಗ್ರಾಮೀಣ ಪ್ರದೇಶದ ಜನರ ಬದುಕಿಗೆ ಆಸರೆ ಆಗಬೇಕೆಂಬ ಉದ್ದೇಶ ಹೊಂದಿರುವುದಾಗಿ ತಿಳಿಸಿದರು.

ಪ್ರಸ್ತುತ ದಿನಗಳಲ್ಲಿ ಕೆಳ ಸಮುದಾಯಗಳ ಹೇಳಿಕೆಗೆ ಯಾವ ಜನ ಪ್ರತಿನಿಧಿಗಳು ಮುಂದಾಗುತ್ತಿಲ್ಲ. ನಿರಂತರವಾಗಿ ಈ ಸಮುದಾಯಗಳು ಶೋಷಣೆಗಳಿಗೆ ಒಳ ಪಡುತ್ತಿದ್ದು, ಅಧಿಕಾರಿ ವರ್ಗ ಕೂಡ ಜನಪ್ರತಿನಿಧಿಗಳಂತೆ ವರ್ತಿಸಿ ಸಾಮಾನ್ಯ ವರ್ಗಗಳಿಗೆ ಸಾಮಾಜಿಕ ನ್ಯಾಯ ಮರೀಚಿಕೆಯಾಗಿಸಿದೆ ಎಂದು ಬೇಸರ ವ್ಯಕ್ತಪಡಿಸಿದರು.

ತಳ ಸಮುದಾಯದವರು ಇನ್ನು ಮುಂದಾದರೂ ಜಾಗೃತರಾಗಿ ನಮ್ಮ ಹಕ್ಕು ನಾವು ಪಡೆಯಲು ಮುಂದಾಗದೆ ಇದ್ದರೆ ನಿರಂತರ ಸಾಮಾಜಿಕ ಶೋಷಣೆಗೆ ಒಳಗಾಗಿ, ಮೂಲ ಭೂತ ಸೌಲಭ್ಯಗಳಿಂದ ವಂಚಿತರಾಗಬೇಕಾಗುತ್ತದೆ ಎಂದು
ತಿಳಿ ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಮುಖಂಡ ರುದ್ರಪ್ಪಗೌಡ, ಮಳಲ್ಕೆರೆ ಹಿರಿಯ ಕಾಂಗ್ರೆಸ್ ಮುಖಂಡ ತಿಮ್ಮಜ್ಜರ ಉಮಾಪತಿ, ಲೋಕಿಕೆರೆ ತಾಲೂಕ್ ಪಂಚಾಯಿತಿ ಸದಸ್ಯ ಯುವ ಕ್ರಿಯಾಶೀಲ ಮುಖಂಡ ಮುರುಗೇಶ್, ಕೃಷ್ಣಮೂರ್ತಿ, ರುದ್ರೇಶ್ ಕೂಲಂಬಿ ಮರುಳಸಿದ್ದೇಶ, ಎ.ಕೆ. ಸದಾಶಿವ ಸೇರಿದಂತೆ ಮಳಲಕೆರೆ ಮತ್ತು ಬಾಡ ಗ್ರಾಮದ ಮುಖಂಡರು, ಗ್ರಾಮ ಪಂಚಾಯಿತಿ ಅಧ್ಯಕ್ಷರು, ವಾಲ್ಮೀಕಿ ಸಮಾಜದ ಹಿರಿಯ ಮುಖಂಡರು ಉಪಸ್ಥಿತರಿದ್ದರು.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment