Home ಕ್ರೈಂ ನ್ಯೂಸ್ ಹಿಂದೂ ಹೆಸರುಗಳಿದ್ದ ಮುಸ್ಲಿಂ ಯುವಕರ ವಿವಾಹ ಕಾರ್ಡ್‌ ವೈರಲ್ ವಿವಾದ ಅಂತ್ಯ: ಬಿಗಿ ಪೊಲೀಸ್ ಭದ್ರತೆಯಲ್ಲಿ ನೆರವೇರಿದ ಸೋದರಿಯರ ನಿಕಾಹ್!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಹಿಂದೂ ಹೆಸರುಗಳಿದ್ದ ಮುಸ್ಲಿಂ ಯುವಕರ ವಿವಾಹ ಕಾರ್ಡ್‌ ವೈರಲ್ ವಿವಾದ ಅಂತ್ಯ: ಬಿಗಿ ಪೊಲೀಸ್ ಭದ್ರತೆಯಲ್ಲಿ ನೆರವೇರಿದ ಸೋದರಿಯರ ನಿಕಾಹ್!

Share
ಹಿಂದೂ
Share

ಸಹಾರನ್‌ಪುರ: ಉತ್ತರ ಪ್ರದೇಶದ ಸಹಾರನ್‌ಪುರ ಜಿಲ್ಲೆಯ ಗಂಗೋಹ್ ಪ್ರದೇಶದಲ್ಲಿ ಎರಡು ಮುಸ್ಲಿಂ ಯುವತಿಯರ ವಿವಾಹದ ಆಹ್ವಾನ ಪತ್ರಿಕೆಯಲ್ಲಿ ವರರ ಹೆಸರುಗಳು ಹಿಂದೂ ಸಂಪ್ರದಾಯದಂತಿದ್ದ ಕಾರಣಕ್ಕೆ (ಅನಿಲ್ ಮತ್ತು ಸಂಜಯ್) ಉಂಟಾಗಿದ್ದ ತೀವ್ರ ವಿವಾದವು ಅಂತಿಮವಾಗಿ ಸುಖಾಂತ್ಯ ಕಂಡಿದೆ. ಹರಿಯಾಣ ಮೂಲದ ಯುವಕರೊಂದಿಗೆ ನಡೆದ ಈ ಮದುವೆಯು ಯಾವುದೇ ಅಡಚಣೆಯಿಲ್ಲದೆ ಕಟ್ಟುನಿಟ್ಟಿನ ಪೊಲೀಸ್ ಭದ್ರತೆಯಲ್ಲಿ ನೆರವೇರಿದೆ.

ಸಾಮಾಜಿಕ ಜಾಲತಾಣಗಳಲ್ಲಿ ವಿವಾಹ ಪತ್ರಿಕೆ ವೈರಲ್ ಆದ ಬಳಿಕ, ಇದು ಅಂತರ್ಧಮೀಯ ವಿವಾಹವೆಂದು ತಪ್ಪಾಗಿ ಬಿಂಬಿಸಿ ಕೆಲವರು ಗೊಂದಲ ಸೃಷ್ಟಿಸಿದ್ದರು. ಅಲ್ಲದೆ ಮದುವೆ ನಡೆಸಿಕೊಡದಂತೆ ಮ್ಯಾರೇಜ್ ಗಾರ್ಡನ್ ಮಾಲೀಕರಿಗೆ ಬೆದರಿಕೆ ಹಾಕಲಾಗಿತ್ತು.

ಎಚ್ಚೆತ್ತ ವಧುವಿನ ಕುಟುಂಬದವರು ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿ ಭದ್ರತೆ ಕೋರಿದ್ದರು. ವರರು ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿದ್ದು, 1947ರ ದೇಶ ವಿಭಜನೆ ಕಾಲದಿಂದಲೂ ತಮ್ಮ ಕುಟುಂಬದಲ್ಲಿ ಹಿಂದೂಗಳೊಂದಿಗಿನ ಬಾಂಧವ್ಯದ ನೆನಪಿಗಾಗಿ ಮಕ್ಕಳ ಹೆಸರುಗಳನ್ನು ಹಿಂದೂ ಸಂಪ್ರದಾಯದಂತೆ ಇಡುವ ವಿಶಿಷ್ಟ ಪರಂಪರೆ ಮುಂದುವರಿದುಕೊಂಡು ಬಂದಿದೆ ಎಂದು ಕುಟುಂಬ ಸ್ಪಷ್ಟಪಡಿಸಿತ್ತು.

ವಿವಾದದ ಹಿನ್ನೆಲೆ: ಮದುವೆ ಆಹ್ವಾನ ಪತ್ರಿಕೆಯಲ್ಲಿ ವರರ ಹೆಸರುಗಳು (ಅನಿಲ್ ಮತ್ತು ಸಂಜಯ್) ಹಿಂದೂ ಹೆಸರಿನಂತಿರುವುದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿತ್ತು.

ಕುಟುಂಬದ ಸ್ಪಷ್ಟನೆ: ವರರು ಮತ್ತು ಅವರ ಕುಟುಂಬದವರು ಮುಸ್ಲಿಂ ಧರ್ಮಕ್ಕೆ ಸೇರಿದವರಾಗಿದ್ದು, ದೇಶ ವಿಭಜನೆ ಕಾಲದಲ್ಲಿ ಸ್ಥಳೀಯ ಹಿಂದೂಗಳು ರಕ್ಷಣೆ ನೀಡಿದ್ದರ ನೆನಪಿಗಾಗಿ ಹಿಂದೂ ಹೆಸರುಗಳನ್ನು ಇಡುವ ಕುಟುಂಬದ ಹಳೆಯ ಪರಂಪರೆ ಇದಾಗಿದೆ.

ಪೊಲೀಸ್ ಭದ್ರತೆ: ಸವಾಲಿನ ಪರಿಸ್ಥಿತಿ ಹಾಗೂ ಬೆದರಿಕೆಗಳ ಹಿನ್ನೆಲೆಯಲ್ಲಿ ಮ್ಯಾರೇಜ್ ಗಾರ್ಡನ್ ಸುತ್ತಲೂ ಬಲವಾದ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿ ಯಾವುದೇ ಅಹಿತಕರ ಘಟನೆಗೆ ಅವಕಾಶವಿಲ್ಲದಂತೆ ನಿಕಾಹ್ ನೆರವೇರಿಸಲಾಯಿತು.

ಪೊಲೀಸರ ಸಮ್ಮುಖದಲ್ಲಿ ಹಾಗೂ ಸ್ಥಳೀಯ ಗಣ್ಯರ ಉಪಸ್ಥಿತಿಯಲ್ಲಿ ವಿವಾಹದ ಎಲ್ಲಾ ಧಾರ್ಮಿಕ ವಿಧಿವಿಧಾನಗಳು ಶಾಂತಿಯುತವಾಗಿ ಪೂರ್ಣಗೊಂಡಿದ್ದು, ಸೃಷ್ಟಿಯಾಗಿದ್ದ ಅನಗತ್ಯ ವಿವಾದಕ್ಕೆ ಅಧಿಕೃತವಾಗಿ ತೆರೆಬಿದ್ದಿದೆ.

Share

Leave a comment

Leave a Reply

Your email address will not be published. Required fields are marked *

Related Articles