Home ಕ್ರೈಂ ನ್ಯೂಸ್ 1.34 ಲಕ್ಷ ಇನ್‌ಸ್ಟಾಗ್ರಾಮ್ ಫಾಲೋವರ್ಸ್ ಹೊಂದಿದ್ದ ಕಾನ್‌ಸ್ಟೇಬಲ್ 1 ಕೆಜಿ ಚಿನ್ನ ದರೋಡೆ ಪ್ರಕರಣದಲ್ಲಿ ಅಮಾನತು!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

1.34 ಲಕ್ಷ ಇನ್‌ಸ್ಟಾಗ್ರಾಮ್ ಫಾಲೋವರ್ಸ್ ಹೊಂದಿದ್ದ ಕಾನ್‌ಸ್ಟೇಬಲ್ 1 ಕೆಜಿ ಚಿನ್ನ ದರೋಡೆ ಪ್ರಕರಣದಲ್ಲಿ ಅಮಾನತು!

Share
ಕಾನ್‌ಸ್ಟೇಬಲ್
Share

ಜೌನ್‌ಪುರ್ (ಉತ್ತರ ಪ್ರದೇಶ): ಲಕ್ನೋದಲ್ಲಿ ಚಿನ್ನದ ವ್ಯಾಪಾರಿಯೊಬ್ಬರಿಗೆ ಸೇರಿದ ಸುಮಾರು 1 ಕೆಜಿ ಚಿನ್ನವನ್ನು ದರೋಡೆ ಮಾಡಿದ ಪ್ರಕರಣದಲ್ಲಿ ಪ್ರಮುಖ ಸಂಚು ರೂಪಿಸಿ ಭಾಗಿಯಾಗಿದ್ದ ಉತ್ತರ ಪ್ರದೇಶದ ಜೌನ್‌ಪುರ್ ಪೊಲೀಸ್ ಕಾನ್‌ಸ್ಟೇಬಲ್ ವಿನಯ್ ಶಂಕರ್ ಎಂಬಾತನನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.

2019ರ ಬ್ಯಾಚ್‌ನ ಕಾನ್‌ಸ್ಟೇಬಲ್ ಆಗಿರುವ ಈತನಿಗೆ ಇನ್‌ಸ್ಟಾಗ್ರಾಮ್‌ನಲ್ಲಿ 1.34 ಲಕ್ಷಕ್ಕೂ ಅಧಿಕ ಅನುಯಾಯಿಗಳಿದ್ದು, ಐಷಾರಾಮಿ ಜೀವನ ಶೈಲಿಗೆ ಹೆಸರುವಾಸಿಯಾಗಿದ್ದ. ಸದ್ಯ ಈತ ತಲೆಮರೆಸಿಕೊಂಡಿದ್ದು, ಪೊಲೀಸರು ಬಲೆ ಬೀಸಿದ್ದಾರೆ.

ಲಕ್ನೋದ ಸುಶಾಂತ್ ಗೋಲ್ಫ್ ಸಿಟಿ ಪ್ರದೇಶದಲ್ಲಿ ಜೌನ್‌ಪುರ್‌ನಿಂದ ದೆಹಲಿಗೆ ಬಸ್‌ನಲ್ಲಿ ಮರಳುತ್ತಿದ್ದ ಚಿನ್ನದ ವ್ಯಾಪಾರಿ ಮಹೇಂದ್ರ ದಾಸ್ ಅವರನ್ನು ನಕಲಿ ಪೊಲೀಸರ ವೇಷದಲ್ಲಿ ತಡೆದು, ಕಾರಿನಲ್ಲಿ ಅಪಹರಿಸಿ 1 ಕೆಜಿ ಚಿನ್ನವನ್ನು ಲಪಟಾಯಿಸಲಾಗಿತ್ತು. ಈ ದರೋಡೆ ಕೃತ್ಯದಲ್ಲಿ ಇಬ್ಬರು ಪೊಲೀಸ್ ಕಾನ್‌ಸ್ಟೇಬಲ್‌ಗಳು ಮತ್ತು ಕಂದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಯೊಬ್ಬರು ಶಾಮೀಲಾಗಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 5 ಜನ ಆರೋಪಿಗಳನ್ನು ಬಂಧಿಸಲಾಗಿದೆ.

ಐಷಾರಾಮಿ ಜೀವನ ಹಾಗೂ ಇನ್‌ಸ್ಟಾಗ್ರಾಮ್ ಖ್ಯಾತಿ: ಜೌನ್‌ಪುರ್‌ನ ಲೈನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಕರ್ತವ್ಯದಲ್ಲಿದ್ದ ವಿನಯ್ ಶಂಕರ್, ರಾಯ್‌ಬರೇಲಿ ಮೂಲದವನಾಗಿದ್ದು, ಅತ್ಯಾಧುನಿಕ ಐಫೋನ್, ರಾಯಲ್ ಎನ್‌ಫೀಲ್ಡ್ ಶಾಟ್‌ಗನ್ ಬೈಕ್ ಹಾಗೂ ಮಹಿಳಾ ಕಾನ್‌ಸ್ಟೇಬಲ್ ಜತೆ ಲಿವ್-ಇನ್ ಸಂಬಂಧದ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಚಿರಪರಿಚಿತನಾಗಿದ್ದ.

ದರೋಡೆ ಸಂಚು ರೂಪಿಸಿದ ಕಾನ್‌ಸ್ಟೇಬಲ್: ವ್ಯಾಪಾರಿ ಜೌನ್‌ಪುರ್‌ಗೆ ಬಂದು ಚಿನ್ನಾಭರಣ ಕೊಟ್ಟು ವಾಪಸ್ ಹೋಗುವ ಮಾಹಿತಿಯನ್ನು ಸಹಚರರ ಮೂಲಕ ಕಲೆಹಾಕಿ, ವಿನಯ್ ಶಂಕರ್ ಈ ದರೋಡೆಗೆ ಮಾಸ್ಟರ್‌ಪ್ಲಾನ್ ರೂಪಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಇಲಾಖಾ ಕ್ರಮ ಹಾಗೂ ಅಮಾನತು: ಪ್ರಕರಣದ ಗಂಭೀರತೆಯನ್ನು ಪರಿಗಣಿಸಿರುವ ಜೌನ್‌ಪುರ್ ಎಸ್‌ಪಿ ಡಾ. ಯಶ್‌ವೀರ್ ಸಿಂಗ್ ಅವರು ಕಾನ್‌ಸ್ಟೇಬಲ್ ವಿನಯ್ ಶಂಕರ್ ಅವರನ್ನು ಸೇವೆಯಿಂದ ಅಮಾನತುಗೊಳಿಸಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ತನಿಖೆ ತೀವ್ರಗೊಳಿಸಿದ್ದಾರೆ.

Share
Related Articles