ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ನ್ಯಾನೋ ಯೂರಿಯಾ ಬಳಕೆಯಿಂದ ಏನೆಲ್ಲಾ ಉಪಯೋಗಗಳಿವೆ ಗೊತ್ತಾ…?

On: July 19, 2025 8:10 PM
Follow Us:
ಯೂರಿಯಾ
---Advertisement---

SUDDIKSHANA KANNADA NEWS/ DAVANAGERE/ DATE:19_07_2025

ದಾವಣಗೆರೆ: ಹರಳು ರೂಪದ ಯೂರಿಯಾ ಬಳಕೆಯ ಬದಲಾಗಿ ನ್ಯಾನೋ ಯೂರಿಯಾ ಬಳಸುವುದರಿಂದ ರೈತರಿಗೆ ಹಣ, ಸಮಯ ಉಳಿತಾಯದೊಂದಿಗೆ ಬೆಳೆಗಳ ಇಳುವರಿ ಹೆಚ್ಚಾಗುವುದರ ಜತೆಗೆ ಮಣ್ಣಿನ ಫಲವತ್ತತೆಯನ್ನೂ ಕಾಪಾಡುತ್ತದೆ ಎಂದು ಕೃಷಿ ಇಲಾಖೆ ಸಹಾಯಕ ಕೃಷಿ ನಿರ್ದೇಶಕ ಶ್ರೀಧರಮೂರ್ತಿ ಹೇಳಿದರು.

ಈ ಸುದ್ದಿಯನ್ನೂ ಓದಿ: ಮಾಹಿತಿ ಹಕ್ಕು ಬಾಕಿ ಪ್ರಕರಣಗಳ ಇತ್ಯರ್ಥಕ್ಕೆ ನವೆಂಬರ್ ನಲ್ಲಿ ಲೋಕ ಅದಾಲತ್ ಮಾದರಿಯಲ್ಲಿ ಕಲಾಪ: ರುದ್ರಣ್ಣ ಹರ್ತಿಕೋಟೆ

ಜಿಲ್ಲೆಯ ದಾವಣಗೆರೆ ತಾಲ್ಲೂಕಿನ ಆನಗೋಡು ಹೋಬಳಿಯ ಹೊನ್ನೂರು ಗ್ರಾಮದಲ್ಲಿ ಕೃಷಿ ಇಲಾಖೆ, ಇಫ್ಕೋ ಸಂಸ್ಥೆ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಶನಿವಾರ ಆಯೋಜಿಸಲಾಗಿದ್ದ “ಹರಳು ರೂಪದ ಯೂರಿಯಾ ಬದಲಾಗಿ ನ್ಯಾನೋ ಯೂರಿಯಾ ಡ್ರೋನ್ ಮೂಲಕ ಸಿಂಪೆಣೆ ಆಂದೋಲನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿರು.

ಹರಳು ರೂಪದ ಯೂರಿಯಾವನ್ನು ಅತೀ ಹೆಚ್ಚು ಬಳಸುವುದರಿಂದ ಫಲವತ್ತತೆ ಹಾಳಾಗುವುದಲ್ಲದೇ, ಬೆಳೆಗಳಿಗೆ ಅನುಕೂಲವಾಗುವ ಸೂಕ್ಷö್ಮಣು ಜೀವಿಗಳು ನಾಶವಾಗುತ್ತವೆ. ಈ ಗೊಬ್ಬರವನ್ನು ಹೆಚ್ಚಾಗಿ ಬಳಸುವುದರಿಂದ ಬೆಳೆಯಲ್ಲಿ ಕೇವಲ ಶೇ.60ರಷ್ಟು ಮಾತ್ರ ಇಳುವರಿ ಸಿಗುತ್ತದೆ. ಆದರೆ ನ್ಯಾನೋ ಯೂರಿಯಾವನ್ನು ಸಿಂಪಡಣೆ ಮಾಡುವುದರಿಂದ ರೈತರಿಗೆ ಬೆಳೆಯಲ್ಲಿ ಶೇ.80ರಷ್ಟು ಇಳುವರಿಯನ್ನು ಕಾಣಬಹುದು.

ಹಾಗೆಯೇ ಒಂದು ಎಕರೆ ಪ್ರದೇಶವನ್ನು ಕೇವಲ 7 ರಿಂದ 10 ನಿಮಿಷದಲ್ಲಿ ಡ್ರೋನ್ ಮೂಲಕ ಸಿಂಪಡಣೆ ಮಾಡಬಹುದು. ಪ್ರತಿ ಲೀಟರ್ ನೀರಿಗೆ 5 ಮಿ.ಲೀ ನ್ಯಾನೋ ಯೂರಿಯಾ ದ್ರಾವಣವನ್ನು ರೈತರು ಸ್ಪೆçÃಯರ್ ಮೂಲಕವೂ ಸಹ ಮೆಕ್ಕೆಜೋಳ, ತೊಗರಿ, ಭತ್ತ ಹಾಗೂ ಇನ್ನಿತರೆ ಬೆಳೆಗಳಿಗೆ ಸಿಂಪರಣೆ ಮಾಡಬಹುದು. ನ್ಯಾನೋ ಯೂರಿಯಾ ಹಾಗೂ ನ್ಯಾನೋ ಡಿ.ಎ.ಪಿ ತಾಂತ್ರಿಕತೆಯೂ ನಮ್ಮ ದೇಶದ್ದೇ ಆಗಿದ್ದು, ರೈತರು ಇದರ ಸದುಪಯೋಗಪಡೆದುಕೊಳ್ಳಬೇಕು. ನ್ಯಾನೋ ಯೂರಿಯಾ ಬಳಕೆ ಮಾಡುವುದರಿಂದ ದೇಶದ ಮೇಲಿನ ಆರ್ಥಿಕ ಹೊರೆಯನ್ನು ಕಡಿಮೆ ಮಾಡಲು ಸಾಧ್ಯವಗುವುದರ ಜೊತೆಗೆ ಮಣ್ಣಿನ ಫಲವತ್ತತೆಯನ್ನು ಕಾಪಾಡಿಕೊಳ್ಳಲು ಸಹಾಯವಾಗುವುದು ಎಂದರು.

ಈ ವೇಳೆ ಉಪ ಕೃಷಿ ನಿರ್ದೇಶಕ ಎಸ್.ಅಶೋಕ್, ಇಫ್ಕೋ ಸಂಸ್ಥೆ ಅಧಿಕಾರಿ ವಿನಯ್ ಕುಮಾರ್, ಹೊನ್ನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪರಮೇಶ್ವರಪ್ಪ, ನಿರ್ದೇಶಕ ಹೆಚ್.ಜಿ.ಮಂಜುನಾಥ್, ವೀರೇಶ್, ಕಾರ್ಯದರ್ಶಿ ಹಾಲಪ್ಪ, ಗ್ರಾ.ಪಂ. ಸದಸ್ಯ ಶಿವಕುಮಾರ್ ಸೇರಿದಂತೆ ಸುತ್ತಮುತ್ತಲಿನ ರೈತರು ಮತ್ತಿತರರು ಇದ್ದರು. ಕೃಷಿ ಅಧಿಕಾರಿ ಶ್ರೀನಿವಾಸ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment