Home ಕ್ರೈಂ ನ್ಯೂಸ್ ತಂದೆ ಕರೆದೊಯ್ಯಬೇಡಿ ಎಂದು ಕಾಲುಹಿಡಿದು ಬೇಡಿದ ಮಗಳು: ಅಮೆರಿಕ ವಿಮಾನ ನಿಲ್ದಾಣದಲ್ಲಿ ಐಸಿಇ ಅಧಿಕಾರಿಗಳಿಂದ ಇಬ್ಬರ ಬಂಧನ, ವಾಷಿಂಗ್ಟನ್ ಗವರ್ನರ್ ತೀವ್ರ ವಿರೋಧ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ತಂದೆ ಕರೆದೊಯ್ಯಬೇಡಿ ಎಂದು ಕಾಲುಹಿಡಿದು ಬೇಡಿದ ಮಗಳು: ಅಮೆರಿಕ ವಿಮಾನ ನಿಲ್ದಾಣದಲ್ಲಿ ಐಸಿಇ ಅಧಿಕಾರಿಗಳಿಂದ ಇಬ್ಬರ ಬಂಧನ, ವಾಷಿಂಗ್ಟನ್ ಗವರ್ನರ್ ತೀವ್ರ ವಿರೋಧ!

Share
ಅಮೆರಿಕ
Share

ಸಿಯಾಟಲ್ (ಅಮೆರಿಕ): ಅಮೆರಿಕದ ಸಿಯಾಟಲ್-ಟಾಕೋಮಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಲಾಸ್ಕಾ ಏರ್‌ಲೈನ್ಸ್ ವಿಮಾನ ಹತ್ತು ವೇಳೆ ಮಾಸ್ಕ್ ಧರಿಸಿದ್ದ ಇಮಿಗ್ರೇಷನ್ ಅಂಡ್ ಕಸ್ಟಮ್ಸ್ ಎನ್‌ಫೋರ್ಸ್‌ಮೆಂಟ್ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯು ಭಾರೀ ಬಿಗುವಿನ ವಾತಾವರಣ ಸೃಷ್ಟಿಸಿದೆ. ವೀಸಾ ಅವಧಿ ಮುಕ್ತಾಯಗೊಂಡಿದ್ದ ಮೆಕ್ಸಿಕೋ ಪ್ರಜೆಗಳನ್ನು ವಿಮಾನದ ಬೋರ್ಡಿಂಗ್ ಬ್ರಿಡ್ಜ್‌ನಲ್ಲಿ ಬಂಧಿಸಿದ್ದು, ಈ ವೇಳೆ ಪ್ರಯಾಣಿಕರು ಮತ್ತು ಅಧಿಕಾರಿಗಳ ನಡುವೆ ತೀವ್ರ ಘರ್ಷಣೆ ನಡೆದಿದೆ.

ಲಾಸ್ ಏಂಜಲೀಸ್‌ಗೆ ತೆರಳಬೇಕಿದ್ದ ಅಲಾಸ್ಕಾ ಏರ್‌ಲೈನ್ಸ್ ವಿಮಾನ 1306 ರ ಬೋರ್ಡಿಂಗ್ ಪ್ರಕ್ರಿಯೆ ನವೆಂಬರ್ 21 ರಂದು ಬೆಳಿಗ್ಗೆ ನಡೆಯುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಅಧಿಕಾರಿಗಳು ಯಾವುದೇ ಮುನ್ಸೂಚನೆ ನೀಡದೆ ಕಾರ್ಯಾಚರಣೆ ನಡೆಸಿದ್ದರಿಂದ ವಿಮಾನ ಹೊರಡುವುದು ವಿಳಂಬವಾಯಿತು. ಅಲ್ಲದೆ, ಸ್ಥಳದಲ್ಲಿದ್ದ ಮಹಿಳೆಯೊಬ್ಬರು ತನ್ನ ಮಗಳನ್ನು ಕರೆದೊಯ್ಯುತ್ತಿದ್ದಾರೆ ಎಂದು ಗೋಳಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಬಂಧನದ ವಿವರ: ವೀಸಾ ಅವಧಿ ಮುಗಿದು ಅಕ್ರಮವಾಗಿ ನೆಲೆಸಿದ್ದ ಮೆಕ್ಸಿಕೋ ಪ್ರಜೆ ರಿಕಾರ್ಡೊ ಲಾರೊಂಡೊ ಮೆಂಡೋಜಾ ಎಂಬಾತನನ್ನು ಐಸಿಇ ಅಧಿಕಾರಿಗಳು ಬಂಧಿಸಿದ್ದಾರೆ. ಈ ವೇಳೆ ಅಧಿಕಾರಿಗಳ ಮೇಲೆ ಬಿಸಿ ಕಾಫಿ ಎರಚಿದ ಆರೋಪದ ಮೇಲೆ ಸೊಫಿಯಾ ಹೆರ್ನಾಂಡಿಸ್ ಮೆಜಿಯಾ ಎಂಬ ಮತ್ತೊಬ್ಬ ಮಹಿಳೆಯನ್ನು ಬಂಧಿಸಲಾಗಿದ್ದು, ಫೆಡರಲ್ ಅಧಿಕಾರಿಯ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿದ್ದಾರೆ.

ವಿಮಾನಯಾನ ಸಂಸ್ಥೆ ಆಕ್ಷೇಪ: ಯಾವುದೇ ಮುನ್ಸೂಚನೆ ನೀಡದೆ ವಿಮಾನದೊಳಗೆ ಬಂದು ಈ ರೀತಿಯ ಕಾರ್ಯಾಚರಣೆ ನಡೆಸಿರುವುದು ಪ್ರಯಾಣಿಕರಿಗೆ ಮತ್ತು ಸಿಬ್ಬಂದಿಗೆ ತೀವ್ರ ಆಘಾತ ತಂದಿದೆ ಎಂದು ಅಲಾಸ್ಕಾ ಏರ್‌ಲೈನ್ಸ್ ಕಳವಳ ವ್ಯಕ್ತಪಡಿಸಿದೆ.

ರಾಜ್ಯಪಾಲರ ತೀವ್ರ ಖಂಡನೆ: ವಾಷಿಂಗ್ಟನ್ ಗವರ್ನರ್ ಬಾಬ್ ಫರ್ಗುಸನ್ ಐಸಿಇ ಅಧಿಕಾರಿಗಳ ಕ್ರಮವನ್ನು “ಅತ್ಯಂತ ಅಮೆರಿಕನ್ ವಿರೋಧಿ” ಎಂದು ತೀವ್ರವಾಗಿ ಟೀಕಿಸಿದ್ದು, ಐಸಿಇ ಸಂಸ್ಥೆಯನ್ನೇ ರದ್ದುಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.

ಪ್ರಯಾಣಿಕರ ದಟ್ಟಣೆ ಹೆಚ್ಚಿರುವ ರಜಾ ದಿನಗಳ ಸಮಯದಲ್ಲಿ ಇಂತಹ ಘಟನೆಗಳು ವಿಮಾನ ನಿಲ್ದಾಣದಲ್ಲಿ ತೀವ್ರ ಭಯ ಮತ್ತು ಗೊಂದಲದ ವಾತಾವರಣ ಸೃಷ್ಟಿಸಿವೆ ಎಂದು ಕಾರ್ಮಿಕ ಸಂಘಟನೆಗಳ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Share

Recent Posts

Recent Comments

No comments to show.
Related Articles