Home ಕ್ರೈಂ ನ್ಯೂಸ್ 2017 ಕ್ಕೂ ಮುನ್ನ ಯುಪಿಯಲ್ಲಿತ್ತು ಮಾಫಿಯಾ ರಾಜ್; ಈಗ ವ್ಯಾಪಾರಿಗಳಿಗೆ ಗೂಂಡಾ ತೆರಿಗೆಯಿಂದ ಮುಕ್ತಿ ಎಂದ ಯೋಗಿ ಆದಿತ್ಯನಾಥ್!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

2017 ಕ್ಕೂ ಮುನ್ನ ಯುಪಿಯಲ್ಲಿತ್ತು ಮಾಫಿಯಾ ರಾಜ್; ಈಗ ವ್ಯಾಪಾರಿಗಳಿಗೆ ಗೂಂಡಾ ತೆರಿಗೆಯಿಂದ ಮುಕ್ತಿ ಎಂದ ಯೋಗಿ ಆದಿತ್ಯನಾಥ್!

Share
ಯೋಗಿ ಆದಿತ್ಯನಾಥ್
Share

ಲಕ್ನೋ: ಉತ್ತರ ಪ್ರದೇಶದಲ್ಲಿ ಕಠಿಣ ಕಾನೂನು ಸುವ್ಯವಸ್ಥೆ ಮತ್ತು ಪಾರದರ್ಶಕ ಆಡಳಿತದಿಂದಾಗಿ ವ್ಯಾಪಾರಿಗಳು ಈಗ ‘ಗೂಂಡಾ ತೆರಿಗೆ’ (ಮಾಫಿಯಾ ತೆರಿಗೆ) ಮತ್ತು ಭಯದಿಂದ ಸಂಪೂರ್ಣ ಮುಕ್ತರಾಗಿದ್ದಾರೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ. ರಾಜ್ಯದಲ್ಲಿ ಸೃಷ್ಟಿಯಾಗಿರುವ ಸುರಕ್ಷಿತ ವಾತಾವರಣವು ವ್ಯಾಪಾರ ಮತ್ತು ಹೂಡಿಕೆಗೆ ದೊಡ್ಡ ವೇಗವನ್ನು ನೀಡಿದೆ ಎಂದು ಅವರು ಹೇಳಿದ್ದಾರೆ.

ಲಕ್ನೋದಲ್ಲಿ ಯಮುನಾ ಎಕ್ಸ್‌ಪ್ರೆಸ್‌ವೇ ಕೈಗಾರಿಕಾ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಉದ್ಯಮಿಗಳಿಗೆ ಭೂಮಿ ಹಂಚಿಕೆ ಪತ್ರ ವಿತರಿಸಿ ಮಾತನಾಡಿದ ಅವರು, ಹಳೆಯ ದಿನಗಳನ್ನು ನೆನಪಿಸಿಕೊಂಡರು.

2017 ಕ್ಕೂ ಮುನ್ನ ಇತ್ತು ಮಾಫಿಯಾ ಸಾಮ್ರಾಜ್ಯ:

“2017 ರಲ್ಲಿ ಬಿಜೆಪಿ ಸರ್ಕಾರ ಬರುವ ಮೊದಲು ಉತ್ತರ ಪ್ರದೇಶದಲ್ಲಿ ಸರ್ಕಾರದ ಜೊತೆಜೊತೆಗೇ ಮಾಫಿಯಾ ಸಾಮ್ರಾಜ್ಯವೂ ನಡೆಯುತ್ತಿತ್ತು. ಪ್ರತಿ ಜಿಲ್ಲೆಯಲ್ಲೂ ಭಯ ಮತ್ತು ಭೀತಿಯ ವಾತಾವರಣವಿತ್ತು. ಹೆಣ್ಣುಮಕ್ಕಳು ಶಾಲೆಗೆ ಹೋಗುವಂತಿರಲಿಲ್ಲ, ವ್ಯಾಪಾರಿಗಳು ನೆಮ್ಮದಿಯಿಂದ ಉದ್ಯಮ ನಡೆಸುವಂತಿರಲಿಲ್ಲ. ರಸ್ತೆಗಳು ಹಾಳಾಗಿದ್ದವು, ವಿದ್ಯುತ್ ಇರಲಿಲ್ಲ. ಇಡೀ ಜಿಲ್ಲೆಗಳನ್ನು ಮಾಫಿಯಾಗಳೇ ನಿಯಂತ್ರಿಸುತ್ತಿದ್ದವು. ಅಂದಿನ ಸರ್ಕಾರಕ್ಕೆ ಸ್ಪಷ್ಟ ನೀತಿಯಾಗಲಿ, ಜನಪರ ಉದ್ದೇಶವಾಗಲಿ ಇರಲಿಲ್ಲ” ಎಂದು ಸಿಎಂ ಯೋಗಿ ಆಕ್ರೋಶ ಹೊರಹಾಕಿದರು.

ಜಾಗತಿಕ ಮಟ್ಟದಲ್ಲಿ ಮಿಂಚುತ್ತಿದೆ ಹೊಸ ಉತ್ತರ ಪ್ರದೇಶ:

ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಉತ್ತರ ಪ್ರದೇಶವು ಪ್ರವಾಸೋದ್ಯಮ, ವ್ಯಾಪಾರ ಮತ್ತು ಹೂಡಿಕೆಯಲ್ಲಿ ಜಾಗತಿಕ ಮಟ್ಟದ ತಾಣವಾಗಿ ಹೊರಹೊಮ್ಮುತ್ತಿದೆ. ಜೇವರ್ ಮತ್ತು ಯಮುನಾ ಎಕ್ಸ್‌ಪ್ರೆಸ್‌ವೇ ಸುತ್ತಮುತ್ತ ನಡೆಯುತ್ತಿರುವ ಬದಲಾವಣೆಯೇ ಇದಕ್ಕೆ ಸಾಕ್ಷಿ. ಕಳೆದ 5 ವರ್ಷಗಳಲ್ಲಿ ಗೋರಖ್‌ಪುರ ಒಂದರಲ್ಲೇ ಭಾರಿ ಹೂಡಿಕೆಯಾಗಿದ್ದು, 50,000 ಕ್ಕೂ ಹೆಚ್ಚು ಯುವಕರಿಗೆ ಉದ್ಯೋಗಾವಕಾಶ ಸಿಕ್ಕಿದೆ ಎಂದು ಸಿಎಂ ಯೋಗಿ ಆದಿತ್ಯನಾಥ್ ವಿವರಿಸಿದರು.

Share

Leave a comment

Leave a Reply

Your email address will not be published. Required fields are marked *

Related Articles