Home ಮಿನಿ ಕ್ಯಾಸಿನೋಗಳಂತೆ ಬದಲಾಗಿದ್ದ ಇಸ್ಫೀಟ್ ಅಡ್ಡೆಗಳಿಗೆ ಪೊಲೀಸರ ಶಾಕ್: 5 ಕಡೆ ಏಕಕಾಲಕ್ಕೆ ದಾಳಿ, 55 ಜನರ ವಿರುದ್ಧ ಕೇಸ್!
Homeಕ್ರೈಂ ನ್ಯೂಸ್ದಾವಣಗೆರೆಬೆಂಗಳೂರು

ಮಿನಿ ಕ್ಯಾಸಿನೋಗಳಂತೆ ಬದಲಾಗಿದ್ದ ಇಸ್ಫೀಟ್ ಅಡ್ಡೆಗಳಿಗೆ ಪೊಲೀಸರ ಶಾಕ್: 5 ಕಡೆ ಏಕಕಾಲಕ್ಕೆ ದಾಳಿ, 55 ಜನರ ವಿರುದ್ಧ ಕೇಸ್!

Share
ಇಸ್ಫೀಟ್
Share

ದಾವಣಗೆರೆ: ಜಿಲ್ಲೆಯ ವಿವಿಧೆಡೆ ಕಾನೂನು ಬಾಹಿರವಾಗಿ ನಡೆಯುತ್ತಿದ್ದ ಇಸ್ಫೀಟ್ ಜೂಜಾಟದ ಅಡ್ಡೆಗಳ ಮೇಲೆ ಪೊಲೀಸರು ಪ್ರತ್ಯೇಕ ದಾಳಿ ನಡೆಸಿದ್ದಾರೆ. ದಾಳಿಯ ವೇಳೆ ಜೂಜಾಟದಲ್ಲಿ ತೊಡಗಿದ್ದ ಒಟ್ಟು 55 ಜನರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದ್ದು, ಆರೋಪಿಗಳಿಂದ ಒಟ್ಟು 50,180 ರೂಪಾಯಿ ನಗದನ್ನು ವಶಪಡಿಸಿಕೊಳ್ಳಲಾಗಿದೆ.

ಜಿಲ್ಲೆಯ ವಿವಿಧ ಉಪವಿಭಾಗಗಳ ಡಿವೈಎಸ್ಪಿಗಳ ಮಾರ್ಗದರ್ಶನದಲ್ಲಿ ಆಯಾ ಠಾಣಾ ವ್ಯಾಪ್ತಿಯ ಇನ್ಸ್‌ಪೆಕ್ಟರ್ ಹಾಗೂ ಸಿಬ್ಬಂದಿಗಳ ತಂಡ ಈ ಕಾರ್ಯಾಚರಣೆ ನಡೆಸಿದೆ.

ದಾಳಿ ನಡೆದ ಸ್ಥಳಗಳ ವಿವರ:

ವಿದ್ಯಾನಗರ ಠಾಣೆ ವ್ಯಾಪ್ತಿ: ತರಳಬಾಳು ಬಡಾವಣೆಯ ಮನೆಯೊಂದರ ಮೇಲೆ ಡಿವೈಎಸ್ಪಿ ಶರಣಬಸವೇಶ್ವರ ಬಿ ಮಾರ್ಗದರ್ಶನದಲ್ಲಿ ಇನ್ಸ್‌ಪೆಕ್ಟರ್ ಶಿಲ್ಪಾ ನೇತೃತ್ವದ ತಂಡ ದಾಳಿ ನಡೆಸಿ, 14 ಜನರನ್ನು ಬಂಧಿಸಿ 24,680 ರೂ. ಜಪ್ತಿ ಮಾಡಿದೆ.

ನ್ಯಾಮತಿ ಠಾಣೆ ವ್ಯಾಪ್ತಿ: ಬೆಳಗುತ್ತಿ ಗ್ರಾಮದ ಹಿರೆಕೆರೆ ಬಳಿ ಡಿವೈಎಸ್ಪಿ ರುದ್ರಪ್ಪ ಉಜ್ಜನಕೊಪ್ಪ ಮಾರ್ಗದರ್ಶನದಲ್ಲಿ ಇನ್ಸ್‌ಪೆಕ್ಟರ್ ಸಿದ್ದೇಗೌಡ ನೇತೃತ್ವದ ತಂಡ ದಾಳಿ ಮಾಡಿ, 14 ಜನರನ್ನು ವಶಕ್ಕೆ ಪಡೆದು 17,330 ರೂ. ವಶಪಡಿಸಿಕೊಂಡಿದೆ.

ಜಗಳೂರು ಠಾಣೆ ವ್ಯಾಪ್ತಿ: ನಿಬಗೂರು ಗ್ರಾಮದ ಬಳಿ ಗ್ರಾಮಾಂತರ ಉಪವಿಭಾಗದ ಡಿವೈಎಸ್ಪಿ ಬಸವರಾಜ್ ಬಿ ಎಸ್ ಮಾರ್ಗದರ್ಶನದಲ್ಲಿ ಇನ್ಸ್‌ಪೆಕ್ಟರ್ ಸಿದ್ರಾಮಯ್ಯ ನೇತೃತ್ವದ ತಂಡ ದಾಳಿ ನಡೆಸಿ, 10 ಜನರನ್ನು ಬಂಧಿಸಿ 4,500 ರೂ. ಸೀಜ್ ಮಾಡಿದೆ.

ಹರಿಹರ ಗ್ರಾಮಾಂತರ: ಬನ್ನಿಕೋಡು ಗ್ರಾಮದ ಸಂತೇಮೈದಾನದ ಬಳಿ ಗ್ರಾಮಾಂತರ ಪಿಎಸ್ಐ ನೇತೃತ್ವದಲ್ಲಿ ದಾಳಿ ನಡೆಸಿ, 4 ಜನರನ್ನು ವಶಕ್ಕೆ ಪಡೆದು 1,820 ರೂ. ನಗದು ವಶಪಡಿಸಿಕೊಳ್ಳಲಾಗಿದೆ.

ದಾವಣಗೆರೆ ಗ್ರಾಮಾಂತರ: ಕಡ್ಲೆಬಾಳು-ಕೋಡಿಹಳ್ಳಿ ರಸ್ತೆಯಲ್ಲಿ ಜೂಜಾಡುತ್ತಿದ್ದ 13 ಜನರನ್ನು ಸಿಬ್ಬಂದಿ ಬಂಧಿಸಿದ್ದು, 1,800 ರೂ. ಹಣವನ್ನು ವಶಕ್ಕೆ ಪಡೆದಿದ್ದಾರೆ.

ಈ ಐದೂ ಪ್ರಕರಣಗಳಿಗೆ ಸಂಬಂಧಿಸಿದಂತೆ ಆಯಾ ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕವಾಗಿ ಎಫ್‌ಐಆರ್ (FIR) ದಾಖಲಿಸಿ, ಮುಂದಿನ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Share

Leave a comment

Leave a Reply

Your email address will not be published. Required fields are marked *