ಪ್ರಯಾಗ್‌ರಾಜ್: ಡೇಟಿಂಗ್ ಆ್ಯಪ್‌ಗಳ ಮೂಲಕ ಪುರುಷರನ್ನು ತನ್ನ ಬಲೆಗೆ ಬೀಳಿಸಿಕೊಂಡು, ಆಪ್ತ ಕ್ಷಣಗಳ ವೀಡಿಯೊ ಹಾಗೂ ಫೋಟೋಗಳನ್ನು ಬಳಸಿಕೊಂಡು ಕೋಟ್ಯಂತರ ರೂಪಾಯಿ ಸುಲಿಗೆ ಮಾಡುತ್ತಿದ್ದ ಸುಂದರಿ ಸೇರಿದಂತೆ ಖತರ್ನಾಕ್ ಜಾಲವೊಂದನ್ನು ಉತ್ತರ ಪ್ರದೇಶದ ಪ್ರಯಾಗ್‌ರಾಜ್ ಪೊಲೀಸರು ಬಯಲಿಗೆಳೆದಿದ್ದಾರೆ.
ಹೈಕೋರ್ಟ್ ವಕೀಲರೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಪಲ್ಲವಿ ಸಿಂಗ್ ರಜಪೂತ್ (ಸ್ವೀಟಿ ತಿವಾರಿ) ಎಂಬ ಯುವತಿಯ ವಿರುದ್ಧ ಪ್ರಕರಣ ದಾಖಲಾಗಿದೆ. ಈಕೆ ತನ್ನ ಸಹಚರರೊಂದಿಗೆ ಸೇರಿಕೊಂಡು ಈವರೆಗೆ ಬರೋಬ್ಬರಿ 6 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ಸುಲಿಗೆ ಮಾಡಿದ್ದಾಳೆ ಎಂದು ಆರೋಪಿಸಲಾಗಿದೆ.
ಸಂಚು ನಡೆಸಿದ್ದು ಹೇಗೆ?
ಆರೋಪಿ ಪಲ್ಲವಿ ಸಿಂಗ್ ಟಿಂಡರ್ ಹಾಗೂ ಇತರೆ ಸೋಷಿಯಲ್ ಮೀಡಿಯಾಗಳಲ್ಲಿ ನಕಲಿ ಹೆಸರುಗಳಿಂದ ಖಾತೆ ತೆರೆದು ಪುರುಷರಿಗೆ ಪರಿಚಯವಾಗುತ್ತಿದ್ದಳು. ನಂತರ ಸ್ನೇಹ ಬೆಳೆಸಿ, ಖಾಸಗಿಯಾಗಿ ಭೇಟಿಯಾದಾಗ ಅವರಿಗೆ ತಿಳಿಯದಂತೆ ಆಪ್ತ ವೀಡಿಯೊ ಹಾಗೂ ಫೋಟೋಗಳನ್ನು ಸೆರೆಹಿಡಿಯುತ್ತಿದ್ದಳು.
ಸುಳ್ಳು ಕೇಸ್ ಬೆದರಿಕೆ:
ಫೋಟೋ ಹಾಗೂ ವೀಡಿಯೊಗಳನ್ನು ಇಟ್ಟುಕೊಂಡು ಹಣ ನೀಡದಿದ್ದರೆ ಅತ್ಯಾಚಾರ ಮತ್ತು ಕೊಲೆ ಯತ್ನದಂತಹ ಗಂಭೀರ ಪ್ರಕರಣಗಳನ್ನು ದಾಖಲಿಸುವುದಾಗಿ ಬೆದರಿಕೆ ಹಾಕುತ್ತಿದ್ದಳು. ಈಕೆಯ ದೂರಿನ ಆಧಾರದ ಮೇಲೆಯೇ ಈಗಾಗಲೇ ಐವರು ಜೈಲು ಪಾಲಾಗಿದ್ದಾರೆ ಎನ್ನಲಾಗಿದೆ.
ಈ ಸುಲಿಗೆ ದಂಧೆಯಲ್ಲಿ ಪಲ್ಲವಿಗೆ ಇಬ್ಬರು ಮಹಿಳೆಯರು ಹಾಗೂ ಇಬ್ಬರು ಪುರುಷರು ಸಾಥ್ ನೀಡುತ್ತಿದ್ದು, ಪ್ರಕರಣ ಕುರಿತು ಉತ್ತರ ಪ್ರದೇಶ ಪೊಲೀಸರು ಸುದೀರ್ಘ ತನಿಖೆ ನಡೆಸುತ್ತಿದ್ದಾರೆ.
- 6 Crore Sextortion Fraud
- Dating App Fraud
- Online Extortion UP Police
- Pallavi Singh Rajput
- Prayagraj Extortion Case
- Sweety Tiwari Blackmail
- Tinder Dating Scam
- UP Sextortion Gang
- ಉತ್ತರ ಪ್ರದೇಶ ಸುದ್ದಿ
- ಟಿಂಡರ್ ವಂಚನೆ
- ಡೇಟಿಂಗ್ ಆ್ಯಪ್ ಸುಲಿಗೆ
- ಪಲ್ಲವಿ ಸಿಂಗ್ ರಜಪೂತ್
- ಪ್ರಯಾಗ್‌ರಾಜ್ ಬ್ಲ್ಯಾಕ್ಮೇಲ್ ಕೇಸ್
- ಸುಲಿಗೆ ಜಾಲ
- ಸೈಬರ್ ಕ್ರೈಮ್ ಯುಪಿ
- ಸ್ವೀಟಿ ತಿವಾರಿ





Leave a comment