Home ಕ್ರೈಂ ನ್ಯೂಸ್ ಲಕ್ಷ ಲಕ್ಷ ಹಣ, ಕಾರು ಕೊಟ್ಟರೂ ನಿಲ್ಲದ ವರದಕ್ಷಿಣೆ ಕಿರುಕುಳ: ವಿವಾಹವಾದ 8 ತಿಂಗಳಲ್ಲೇ ನವವಿವಾಹಿತೆ ಶವವಾಗಿ ಪತ್ತೆ, ಪತಿಯೇ ಕೊಂದಿರುವುದಾಗಿ ಆರೋಪ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಲಕ್ಷ ಲಕ್ಷ ಹಣ, ಕಾರು ಕೊಟ್ಟರೂ ನಿಲ್ಲದ ವರದಕ್ಷಿಣೆ ಕಿರುಕುಳ: ವಿವಾಹವಾದ 8 ತಿಂಗಳಲ್ಲೇ ನವವಿವಾಹಿತೆ ಶವವಾಗಿ ಪತ್ತೆ, ಪತಿಯೇ ಕೊಂದಿರುವುದಾಗಿ ಆರೋಪ!

Share
ವರದಕ್ಷಿಣೆ
Share

ಕೌಶಾಂಬಿ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಕೌಶಾಂಬಿ ಜಿಲ್ಲೆಯಲ್ಲಿ ಮದುವೆಯಾದ ಕೇವಲ 8 ತಿಂಗಳಿಗೆ ನವವಿವಾಹಿತೆಯೊಬ್ಬರು ಶಂಕಾಸ್ಪದ ರೀತಿಯಲ್ಲಿ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.

ಹೆಚ್ಚುವರಿ ವರದಕ್ಷಿಣೆಗಾಗಿ ಪತಿ ಹಾಗೂ ಅತ್ತೆ-ಮಾವಂದಿರು ಸೇರಿ ತನ್ನ ಮಗಳನ್ನು ಹತ್ಯೆ ಮಾಡಿದ್ದಾರೆ ಎಂದು ಮೃತರ ತಂದೆ ಗಂಭೀರ ಆರೋಪ ಮಾಡಿದ್ದಾರೆ. ಮಾರ್ಚ್ 22, 2026ರಂದು ಒಸಾ ಗ್ರಾಮದ ಅರವಿಂದ್ ಕುಮಾರ್ ಎಂಬುವವರ ಜತೆ ಆರತಿ ಎಂಬ ಯುವತಿಯ ಮದುವೆ ನಡೆದಿತ್ತು.

ಮದುವೆ ಸಂದರ್ಭದಲ್ಲಿ ಜಮೀನು ಮಾರಾಟ ಮಾಡಿ ರೂ. 12 ಲಕ್ಷ ಜೋಡಿಸಿ, ತಿಲಕ ಸಮಾರಂಭಕ್ಕೆ ರೂ. 5 ಲಕ್ಷ ನಗದು ಹಾಗೂ ಬ್ರೆಝಾ  ಕಾರನ್ನು ವರದಕ್ಷಿಣೆಯಾಗಿ ನೀಡಲಾಗಿತ್ತು. ಆದರೂ ಬಿಡದೆ ಇನ್ನ್ಯೂ ರೂ. 5 ಲಕ್ಷಕ್ಕಾಗಿ ಅತ್ತೆಮನೆಯವರು ನಿರಂತರವಾಗಿ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡುತ್ತಿದ್ದರು ಎಂದು ತಂದೆ ಅಮೃತ್ ಲಾಲ್ ಭಾರತಿ ಆರೋಪಿಸಿದ್ದಾರೆ.

ಮಗಳನ್ನು ನೇಣು ಹಾಕಿ ಕೊಲೆ ಮಾಡಲಾಗಿದೆ ಎಂದು ಅವರು ದೂರಿನಲ್ಲಿ ತಿಳಿಸಿದ್ದು, ಪತಿ ಅರವಿಂದ್ ಪೊಲೀಸ್ ವಶದಲ್ಲಿ ತಪ್ಪೊಪ್ಪಿಕೊಂಡಿದ್ದಾನೆ ಎಂದೂ ಅವರು ತಿಳಿಸಿದ್ದಾರೆ.

ಆದರೆ, ಪ್ರಾಥಮಿಕ ತನಿಖೆಯಲ್ಲಿ ನವವಿವಾಹಿತೆ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಡಿಎಸ್‌ಪಿ ಸೌರಭ್ ಸಾವಂತ್ ತಿಳಿಸಿದ್ದು, ಪ್ರಕರಣ ದಾಖಲಿಸಿಕೊಂಡು ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯಲಾಗುತ್ತಿದೆ.

ವರದಕ್ಷಿಣೆ ಕಿರುಕುಳ ಆರೋಪ: ಮದುವೆಯಾಗಿ ಕೇವಲ 8 ತಿಂಗಳು ಕಳೆದರೂ ರೂ. 5 ಲಕ್ಷ ಹೆಚ್ಚುವರಿ ವರದಕ್ಷಿಣೆಗಾಗಿ ಪತಿ ಮತ್ತು ಕುಟುಂಬಸ್ಥರು ಕಿರುಕುಳ ನೀಡುತ್ತಿದ್ದರು ಎಂದು ಮೃತಳ ತಂದೆ ಆರೋಪಿಸಿದ್ದಾರೆ.

ದೂರು ದಾಖಲು: ಮೃತ ಆರತಿಯ ತಂದೆ ಅಮೃತ್ ಲಾಲ್ ನೀಡಿದ ದೂರಿನ ಮೇರೆಗೆ ಪತಿ, ಅತ್ತೆ, ಮಾವ ಹಾಗೂ ಮೈದುನನ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮರಣೋತ್ತರ ಪರೀಕ್ಷೆ: ಪೊಲೀಸರು ಮೃತದೇಹವನ್ನು ವಶಕ್ಕೆ ಪಡೆದು ಪೋಸ್ಟ್‌ಮಾರ್ಟಮ್‌ಗೆ ಕಳುಹಿಸಿದ್ದು, ವರದಿ ಬಂದ ಬಳಿಕ ಸಾವಿಗೆ ನಿಖರ ಕಾರಣ ತಿಳಿದುಬರಲಿದೆ.

ಪೊಲೀಸ್ ತನಿಖೆ ಚುರುಕು: ಆರತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದ್ದು, ವರದಕ್ಷಿಣೆ ಸಾವು ಕೋನದಲ್ಲೂ ತನಿಖೆ ಮುಂದುವರಿದಿದೆ.

Share

Recent Comments

No comments to show.
Related Articles