Home ಕ್ರೈಂ ನ್ಯೂಸ್ ಗೆಸ್ಟ್ ಹೌಸ್ ಬಳಿ ಹೈಡ್ರಾಮಾ: ಪ್ರೇಯಸಿ ಜೊತೆ ಸರಸ, ರಸ್ತೆಯಲ್ಲೇ ಗಂಡನಿಗೆ ಹಿಗ್ಗಾಮುಗ್ಗಾ ಥಳಿಸಿದ ಹೆಂಡತಿ!
ಕ್ರೈಂ ನ್ಯೂಸ್ನವದೆಹಲಿಬೆಂಗಳೂರು

ಗೆಸ್ಟ್ ಹೌಸ್ ಬಳಿ ಹೈಡ್ರಾಮಾ: ಪ್ರೇಯಸಿ ಜೊತೆ ಸರಸ, ರಸ್ತೆಯಲ್ಲೇ ಗಂಡನಿಗೆ ಹಿಗ್ಗಾಮುಗ್ಗಾ ಥಳಿಸಿದ ಹೆಂಡತಿ!

Share
ಪ್ರೇಯಸಿ
Share

ಹಾಪುರ (ಉತ್ತರ ಪ್ರದೇಶ): ಪ್ರೇಯಸಿಗಾಗಿ ಎರಡು ಪ್ಲೇಟ್ ಛೋಲೆ ಬಟೂರೆ ಖರೀದಿಸಲು ಹೋದ ವ್ಯಕ್ತಿಯೊಬ್ಬ ತನ್ನ ಪತ್ನಿಯ ಕೈಗೆ ರೆಡ್-ಹ್ಯಾಂಡ್‌ ಆಗಿ ಸಿಕ್ಕಿಬಿದ್ದು, ರಸ್ತೆಯಲ್ಲೇ ಪತ್ನಿ ಮತ್ತು ಆಕೆಯ ಮನೆಯವರಿಂದ ಧರ್ಮದೇಟು ತಿಂದ ವಿಚಿತ್ರ ಹಾಗೂ ಹೈಡ್ರಾಮಾ ಘಟನೆ ಉತ್ತರ ಪ್ರದೇಶದ ಹಾಪುರ ಜಿಲ್ಲೆಯ ಬ್ರಿಜ್‌ಘಾಟ್‌ನಲ್ಲಿ ನಡೆದಿದೆ.

ಸುಮಾರು 14 ವರ್ಷಗಳ ಹಿಂದೆ ಮದುವೆಯಾಗಿದ್ದ ಅಜಯ್‌ ಎಂಬ ವ್ಯಕ್ತಿ, ಪ್ರತಿದಿನ ಕೆಲಸಕ್ಕೆ ಹೋಗುವುದಾಗಿ ಹೇಳಿ ತನ್ನ ಪ್ರೇಯಸಿಯನ್ನು ಭೇಟಿಯಾಗುತ್ತಿದ್ದ ಎಂಬ ಆರೋಪ ಕೇಳಿಬಂದಿದೆ. ಈ ವಿಷಯ ತಿಳಿದ ಪತ್ನಿ ಕವಿತಾ ಮತ್ತು ಆಕೆಯ ಕುಟುಂಬಸ್ಥರು ಆತನನ್ನು ಹಿಂಬಾಲಿಸಿಕೊಂಡು ಬ್ರಿಜ್‌ಘಾಟ್‌ಗೆ ಬಂದಿದ್ದಾರೆ. ಈ ವೇಳೆ ಅಜಯ್‌ ಸ್ಥಳೀಯ ಗೆಸ್ಟ್ ಹೌಸ್ ಒಂದರ ಬಳಿ ಪ್ರೇಯಸಿಗಾಗಿ 2 ಪ್ಲೇಟ್ ಛೋಲೆ ಬಟೂರೆ ಪಾರ್ಸೆಲ್ ಕಟ್ಟಿಸುತ್ತಿದ್ದಾಗ ಪತ್ನಿ ಆತನನ್ನು ತಡೆದು ನಿಲ್ಲಿಸಿದ್ದಾಳೆ.

ಪತ್ನಿ ಪ್ರಶ್ನಿಸಿದಾಗ, “ನಾನು ಮಾನಸಿಕ ಒತ್ತಡದಿಂದ ಒಬ್ಬನೇ ಇಲ್ಲಿಗೆ ಬಂದಿದ್ದೇನೆ, ನನ್ನ ಜೊತೆ ಯಾವುದೇ ಮಹಿಳೆ ಇಲ್ಲ” ಎಂದು ಅಜಯ್‌ ಸಮರ್ಥಿಸಿಕೊಳ್ಳಲು ಯತ್ನಿಸಿದ್ದಾನೆ. ಆದರೆ ಪತ್ನಿ ಕವಿತಾ, “ನೀನು ಒಬ್ಬನೇ ಬಂದಿದ್ದರೆ ಎರಡು ಪ್ಲೇಟ್ ಛೋಲೆ ಬಟೂರೆ ಯಾಕೆ ತರಿಸುತ್ತಿದ್ದೀಯಾ?” ಎಂದು ಪ್ರಶ್ನಿಸಿ, ರಸ್ತೆಯಲ್ಲೇ ಆತನಿಗೆ ಹಾಗೂ ಆತನ ಪ್ರೇಯಸಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ಮಾತಿಗೆ ಮಾತು ಬೆಳೆದು ಪತ್ನಿ ಹಾಗೂ ಆಕೆಯ ಸಂಬಂಧಿಕರು ನಡು ರಸ್ತೆಯಲ್ಲೇ ಅಜಯ್‌ಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಸಾರ್ವಜನಿಕರ ಸಮ್ಮುಖದಲ್ಲಿ ನಡೆದ ಈ ಗಲಾಟೆ ಕೊನೆಗೆ ಪೊಲೀಸ್ ಠಾಣೆ ಮೆಟ್ಟಿಲೇರಿತು. ಪೊಲೀಸರ ಮಧ್ಯಸ್ಥಿಕೆಯಲ್ಲಿ ಎರಡೂ ಕಡೆಯವರು ಮಾತುಕತೆ ನಡೆಸಿ, ಕೊನೆಗೆ ಸಂಧಾನ ಮಾಡಿಕೊಂಡು ಮನೆಗೆ ಮರಳಿದ್ದಾರೆ.

Share

Leave a comment

Leave a Reply

Your email address will not be published. Required fields are marked *