
ದಾವಣಗೆರೆ: ಜಿಲ್ಲಾ ವರದಿಗಾರರ ಕೂಟದ ವತಿಯಿಂದ 2026-2028ನೇ ಸಾಲಿನ ನೂತನ ಪದಾಧಿಕಾರಿಗಳ ಅಧಿಕಾರ ಹಸ್ತಾಂತರ ಹಾಗೂ ಸೇವಾ ಸ್ವೀಕಾರ ಸಮಾರಂಭ, ಜೀವಮಾನ ಸೇವಾ ಸಾಧನೆಗಾಗಿ ಗೌರವ ಸನ್ಮಾನ ಮತ್ತು ಜಿಲ್ಲಾಡಳಿತದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ ಕಾರ್ಯಕ್ರಮವನ್ನು ನವೆಂಬರ್ 28ರಂದು ಬೆಳಿಗ್ಗೆ 11-30ಕ್ಕೆ ಇಲ್ಲಿನ ಕುವೆಂಪು ಕನ್ನಡ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೂಟದ ಅಧ್ಯಕ್ಷ ಆರ್. ರವಿ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಸಮಾರಂಭ ಉದ್ಘಾಟಿಸಲಿದ್ದು, ಹಿರಿಯ ಪತ್ರಕರ್ತರು ಹಾಗೂ ನಿಕಟಪೂರ್ವ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ. ಪ್ರಭಾಕರ್ ಅವರಿಗೆ ಗೌರವ ಅಭಿನಂದನೆ ಸಲ್ಲಿಸಲಾಗುವುದು ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ನೂತನ ಅಧ್ಯಕ್ಷ ರವಿ ಆರ್. ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್, ಸಚಿವ ಕೆ.ಎಸ್. ಬಸವಂತಪ್ಪ, ವಿಧಾನಪರಿಷತ್ ಸದಸ್ಯ ಕೆ.ಎಂ. ಸುರೇಶ್, ಕೂಟದ ಗೌರವಾಧ್ಯಕ್ಷರಾದ ಬಿ.ಎನ್. ಮಲ್ಲೇಶ್, ಕೆ. ಏಕಾಂತಪ್ಪ ಹಾಗೂ ಮಾಜಿ ಅಧ್ಯಕ್ಷ ಬಸವರಾಜ್ ದೊಡ್ಮನಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಬೆಂಗಳೂರಿನ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮತ್ತು ಶಿವಮೊಗ್ಗದ ಹಿರಿಯ ಪತ್ರಕರ್ತರು ಹಾಗೂ ಬೆಂಗಳೂರಿನ ಕಾ.ನಿ.ಪ. ರಾಜ್ಯ ಸಮಿತಿ ನಿರ್ದೇಶಕರಾದ ಎನ್. ರವಿಕುಮಾರ್ (ಟೆಲೆಕ್ಸ್) ಅವರು ಮಧ್ಯ ಕರ್ನಾಟಕ ಹಾಗೂ ಪಿಪಿಎಲ್-5 ಕ್ರಿಕೆಟ್ ಟೂರ್ನಿಯ ಪ್ರೋಮೊ ಮತ್ತು ಲೋಗೊ ಅನಾವರಣಗೊಳಿಸಲಿದ್ದಾರೆ ಎಂದು ಹೇಳಿದರು.
ಅತಿಥಿಗಳಾಗಿ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೇಖರ್ ಹೆಚ್.ಟಿ., ಧೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ, ಆಯುಕ್ತರಾದ ರೇಣುಕಾ, ಪಾಲಿಕೆ ಆಯುಕ್ತ ಡಾ. ಮಹಾಂತೇಶ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಿ. ಧನಂಜಯ ಹಾಗೂ ದಾವಣಗೆರೆ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಮಂಜುನಾಥ್ ಏಕಬೋಟೆ ಭಾಗವಹಿಸಲಿದ್ದಾರೆ ಎಂದರು.
ಜಿಲ್ಲಾ ವರದಿಗಾರರ ಕೂಟದ ನಿಕಟಪೂರ್ವ ಅಧ್ಯಕ್ಷ ನಾಗರಾಜ್ ಬಡದಾಳ್ ಮತ್ತು ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ಎಂ.ವೈ. ಸತೀಶ್ ಅವರು ಸೇವಾ ಹಸ್ತಾಂತರ ಮಾಡಲಿದ್ದಾರೆ. ಕೂಟದ ಹಿರಿಯ ಉಪಾಧ್ಯಕ್ಷ ಕೆ. ಚಂದ್ರಣ್ಣ, ಗೌರವಾಧ್ಯಕ್ಷ ಕೆ. ಏಕಾಂತಪ್ಪ, ವಿಜಯ ಕರ್ನಾಟಕ ಸ್ಥಾನಿಕ ಸಂಪಾದಕ ಸದಾನಂದ್ ಹೆಗಡೆ, ಸಂಯುಕ್ತ ಕರ್ನಾಟಕ ಸ್ಥಾನಿಕ ಸಂಪಾದಕ ಮಂಜುನಾಥ್ ಗೌರಕ್ಕಳವರ್, ಕೂಟದ ಮಾಜಿ ಅಧ್ಯಕ್ಷ ಬಸವರಾಜ್ ದೊಡ್ಮನಿ ಹಾಗೂ ಸುವರ್ಣ ಟಿವಿ ಮಾಜಿ ಹಿರಿಯ ವರದಿಗಾರ ಡಾ. ವರದರಾಜ್ ಸಿ. ಅವರಿಗೆ ಜೀವಮಾನ ಸೇವಾ ಸಾಧನೆಗಾಗಿ ಗೌರವ ಸನ್ಮಾನ ನೆರವೇರಲಿದೆ. ಅಲ್ಲದೆ, ಜಿಲ್ಲಾಡಳಿತದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ರಮೇಶ್ ಜಹಗೀರ್ದಾರ್, ಎ.ಎನ್. ನಿಂಗಪ್ಪ, ಸತೀಶ್ ಎಂ.ವೈ., ಪುನೀತ್ ಆಪ್ತಿ, ಕೆ.ಎನ್. ಮಲ್ಲಿಕಾರ್ಜುನ್ ಮೂರ್ತಿ, ಹನುಮಂತರಾವ್, ಹರಿಹರದ ಶೇಖರ್ಗೌಡ ಗೌಡ ಹಾಗೂ ಚನ್ನಗಿರಿಯ ಬಾ.ರಾ. ಮಹೇಶ್ ಅವರನ್ನು ಸನ್ಮಾನಿಸಲಾಗುವುದು ಎಂದು ಮಾಹಿತಿ ನೀಡಿದರು.
ಇದೇ ವೇಳೆ 2026-2028ನೇ ಸಾಲಿನ ನೂತನ ಪದಾಧಿಕಾರಿಗಳ ವಿವರ ನೀಡಿದ ಅವರು, ಗೌರವಾಧ್ಯಕ್ಷರಾಗಿ ಬಿ.ಎನ್. ಮಲ್ಲೇಶ್, ಕೆ. ಏಕಾಂತಪ್ಪ, ಅಧ್ಯಕ್ಷರಾಗಿ ರವಿ. ಆರ್, ಪ್ರಧಾನ ಕಾರ್ಯದರ್ಶಿಯಾಗಿ ಮಧುನಾಗರಾಜ್ ಕುಂದುವಾಡ, ಖಜಾಂಚಿಯಾಗಿ ಎಸ್.ಎನ್. ಮಹೇಶ್ ಕಾಶೀಪುರ, ಹಿರಿಯ ಉಪಾಧ್ಯಕ್ಷರಾಗಿ ಕೆ. ಚಂದ್ರಣ್ಣ, ಸಿದ್ದಯ್ಯ ಹಿರೇಮಠ, ಮಂಜುನಾಥ್ ಗೌರಕ್ಕಳವರ್, ಸದಾನಂದ ಹೆಗಡೆ, ಎನ್.ಡಿ. ಶಾಂತಕುಮಾರ್, ಹೆಚ್.ಕೆ. ನಟರಾಜ್, ಉಪಾಧ್ಯಕ್ಷರಾಗಿ ಮಂಜುನಾಥ ಕಾಡಜ್ಜಿ, ಯಳನಾಡು ಮಂಜುನಾಥ್, ಬಿ.ಬಿ. ಮಲ್ಲೇಶ್, ನಿಂಗಪ್ಪ ಎ.ಎನ್., ಮಲ್ಲಿಕಾರ್ಜುನ್ ಕೈದಾಳೆ, ಉಮೇಶ್ ಕಾಡಪ್ಪ, ಹೆಚ್. ನಿಂಗರಾಜ್, ಗಂಗರಾಜ್. ಕೆ, ಯಶವಂತ್ ಕುಮಾರ್ ಹಾಗೂ ಕಾರ್ಯದರ್ಶಿಗಳಾಗಿ ಡಿ. ರಂಗನಾಥರಾವ್, ವಿಷ್ಣು ಯರಬಾಳು, ಪ್ರಕಾಶ್ ಹೆಚ್.ಎನ್., ಕಿರಣ್ ಕುಮಾರ್. ಎಸ್., ಸಂಘಟನಾ ಕಾರ್ಯದರ್ಶಿಗಳಾಗಿ ವಿನಾಯಕ ಪೂಜಾರ್, ಶ್ಯಾಮ್, ಕೆ.ಎನ್. ಮಲ್ಲಿಕಾರ್ಜುನ್ ಮೂರ್ತಿ, ಗಣೇಶ್ ಕಮಲಾಪುರ, ಸಂಜಯ್ ಎ.ಪಿ, ರಾಮಪ್ರಸಾದ್, ಕ್ರೀಡಾ ಕಾರ್ಯದರ್ಶಿಗಳಾಗಿ ಪುನೀತ್ ಆಪ್ತಿ, ನೂರುಲ್ಲಾ ಡಿ., ಪರಶುರಾಮ್ ಹೆಚ್.ಕೆ, ಜಿ. ಶಿವಕುಮಾರ್, ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ ಚನ್ನಬಸವ ಶೀಲವಂತ್, ಭಾರತಿ ಹೆಚ್, ವಿಠಲ್ ಕ್ಯಾರವಾಡ, ಶೋಭ ಕೆ. ಗೌಡ, ಸುಮಾ ಬಿ, ಕರಿಬಸವರಾಜು, ನಿರ್ದೇಶಕರಾಗಿ ಎಂ. ರಫೀಕ್, ಹನುಮಂತರಾವ್, ಡಾ. ಹೆಚ್.ಬಿ. ಮಂಜಪ್ಪ, ಸತೀಶ್ ಸಿ., ಅಣ್ಣೇಶ್, ಸತೀಶ್ ಬಡಿಗೇರ್, ರಾಜೇಶ್ ಎಸ್, ವಸಂತಕುಮಾರ್ ಜಿ.ಎಸ್., ಸಲಹಾ ಸಮಿತಿ ಸದಸ್ಯರಾಗಿ ಎಂ.ಎಸ್. ವಿಕಾಸ್, ಬಸವರಾಜ್ ದೊಡ್ಮನಿ, ಹನುಮಂತಪ್ಪ ವಿ., ಜಿ.ಎಂ.ಆರ್. ಆರಾಧ್ಯ, ಮಲ್ಲಿಕಾರ್ಜುನ್ ಕಬ್ಬೂರು, ನಾಗರಾಜ ಬಡದಾಳ್, ಬಸವರಾಜ ಐರಣಿ, ವಿವೇಕ್ ಬದ್ಧಿ, ತಾರಾನಾಥ್, ಪ್ರದೀಪ್ ಕುಂದಣಗಾರ, ರಮೇಶ್ ಜಹಗೀರ್ದಾರ್, ಎನ್.ವಿ. ಬದರಿನಾಥ್, ಸತೀಶ್ ಎಂ.ವೈ., ಎ. ಫಕೃದ್ದೀನ್, ರವಿ ಎನ್.ಆರ್., ಡಾ. ಬಿ. ವಾಸುದೇವ್, ಹೆಚ್.ಎಂ.ಪಿ. ಕುಮಾರ್, ನೃಪತುಂಗ ನೇಮಕಗೊಂಡಿದ್ದು ಪದಗ್ರಹಣ ಮಾಡಲಿದ್ದಾರೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಕೂಟದ ಪದಾಧಿಕಾರಿಗಳಾದ ಕೆ. ಚಂದ್ರಣ್ಣ, ಮಧು ನಾಗರಾಜ್ ಕುಂದುವಾಡ, ಮಹೇಶ್ ಕಾಶಿಪುರ, ಬಸವರಾಜ್ ದೊಡ್ಮನಿ ಇದ್ದರು.




