Home ಕ್ರೈಂ ನ್ಯೂಸ್ ಪ್ರಿಯಕರನಿಂದಲೇ ನರ್ಸಿಂಗ್‌ ವಿದ್ಯಾರ್ಥಿನಿ ಭೀಕರ ಕೊಲೆ; ಪೊದೆಯಲ್ಲಿ ಸಿಕ್ಕಿತು ಕೊಳೆತ ಮೃತದೇಹ!
ಕ್ರೈಂ ನ್ಯೂಸ್ದಾವಣಗೆರೆಬೆಂಗಳೂರು

ಪ್ರಿಯಕರನಿಂದಲೇ ನರ್ಸಿಂಗ್‌ ವಿದ್ಯಾರ್ಥಿನಿ ಭೀಕರ ಕೊಲೆ; ಪೊದೆಯಲ್ಲಿ ಸಿಕ್ಕಿತು ಕೊಳೆತ ಮೃತದೇಹ!

Share
ವಿದ್ಯಾರ್ಥಿನಿ
Share

ಡುಂಗರ್‌ಪುರ (ರಾಜಸ್ಥಾನ): ರಾಜಸ್ಥಾನದ ಡುಂಗರ್‌ಪುರ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ-927A ಬಳಿಯ ಪೊದೆಯಲ್ಲಿ ನರ್ಸಿಂಗ್ ವಿದ್ಯಾರ್ಥಿನಿ ನಿಶಾ ಕಟಾರಾ ಅವರ ಕೊಳೆತ ಮೃತದೇಹ ಪತ್ತೆಯಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಪ್ರಿಯಕರ ಪೂನಂಚಂದ್ ಕಟಾರಾನನ್ನು ಪೊಲೀಸರು ಬಂಧಿಸಿದ್ದಾರೆ.

ಸಾಗವಾರಾದಲ್ಲಿ ನರ್ಸಿಂಗ್ ವ್ಯಾಸಂಗ ಮಾಡುತ್ತಿದ್ದ ನಿಶಾ, ಸೆಪ್ಟೆಂಬರ್ 19 ರಂದು ತನ್ನ ಪ್ರಿಯಕರನೊಂದಿಗೆ ತೆರಳಿದ್ದಳು. ಆದರೆ ಮನೆಗೆ ಹಿಂತಿರುಗದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಹಾಗೂ ಪೊಲೀಸರು ಆತನಿಗಾಗಿ ಹುಡುಕಾಟ ನಡೆಸಿದ್ದರು. ಸೆಪ್ಟೆಂಬರ್ 24 ರಂದು ಹೆದ್ದಾರಿ ಬದಿಯಲ್ಲಿ ದುರ್ವಾಸನೆ ಬಂದಾಗ ಹೋದ ಹಾದಿಹೋಕನೊಬ್ಬ ಮೃತದೇಹವನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದ.

ಪೋಲಿಸರ ತೀವ್ರ ವಿಚಾರಣೆ ವೇಳೆ ಪ್ರಿಯಕರ ಪೂನಂಚಂದ್ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ನಿಶಾ ಸಂಬಂಧವನ್ನು ತೊರೆಯಲು ಮತ್ತು ಪೊಲೀಸ್ ದೂರು ನೀಡುವುದಾಗಿ ಬೆದರಿಕೆ ಹಾಕಿದ್ದರಿಂದ ಆಕೆಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಚಾಕುವಿನಿಂದ ಇರಿದು ಹತ್ಯೆಗೈದಿರುವುದಾಗಿ ತಿಳಿಸಿದ್ದಾನೆ. ಬಳಿಕ ಕೊಲೆಗೆ ಬಳಸಿದ ಚಾಕು ಮತ್ತು ರಕ್ತಸಿಕ್ತ ಬಟ್ಟೆಗಳನ್ನು ಗೆಪ್ ಸಾಗರ್ ಸರೋವರಕ್ಕೆ ಎಸೆದಿದ್ದು, ಪೊಲೀಸರು ಡೈವರ್‌ಗಳ ನೆರವಿನಿಂದ ಸಾಕ್ಷ್ಯಾಧಾರಗಳನ್ನು ವಶಪಡಿಸಿಕೊಂಡಿದ್ದಾರೆ.

Share

Leave a comment

Leave a Reply

Your email address will not be published. Required fields are marked *