ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಅ. 15ಕ್ಕೆ ಕೃಷ್ಣನಗರಿಯಲ್ಲಿ ಮಹಿಷ ದಸರಾ, ಸಾಂಸ್ಕೃತಿಕ ಹಬ್ಬ ಆಚರಣೆ: ಉಡುಪಿ (Udupi) ಜಿಲ್ಲಾ ಅಂಬೇಡ್ಕರ್ ಯುವಸೇನೆ ಆಯೋಜಿಸಿರುವುದಾದರೂ ಯಾಕೆ…?

On: October 4, 2023 4:01 PM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:04-10-2023

ಉಡುಪಿ: ಉಡುಪಿ(Udupi)ಯಲ್ಲಿ ಮಹಿಷ ದಸರಾ ಮತ್ತು ಸಾಂಸ್ಕೃತಿಕ ಹಬ್ಬದ ಸಂಭ್ರಮ ಅ. 15ಕ್ಕೆ ಕಳೆಗಟ್ಟಲಿದೆ. ಮಹಿಷ ಮಂಡಳವನ್ನಾಳಿದ ದ್ರಾವಿಡರ ದೊರೆ ಮಹಿಷಾಸುರ ಮಹಾರಾಜರ ಬಗ್ಗೆ ಜನತೆಗೆ ಅರಿವಿನ ಜಾಗೃತಿ ಮೂಡಿಸುವ ಉದ್ದೇಶದಿಂದ ಮಹಿಷ ದಸರಾ ಮತ್ತು ಮೂಲ ನಿವಾಸಿಗಳ ಸಾಂಸ್ಕೃತಿಕ ಹಬ್ಬ ಆಚರಿಸಲು ಉಡುಪಿ ಜಿಲ್ಲಾ ಅಂಬೇಡ್ಕರ್ ಯುವಸೇನೆ ತೀರ್ಮಾನಿಸಿದೆ.

ಈ ಸುದ್ದಿಯನ್ನೂ ಓದಿ: 

STOCK MARKET: ಷೇರುಪೇಟೆಯಲ್ಲಿ ಮತ್ತೆ ಕುಸಿತ : ನಿಫ್ಟಿ 92 ಅಂಕ, ಸೆನ್ಸೆಕ್ಸ್ 286 ಅಂಕ ಇಳಿಕೆ

ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಯುವಸೇನೆಯ ಜಿಲ್ಲಾಧ್ಯಕ್ಷ ಹರೀಶ್ ಸಾಲ್ಯಾನ್ ಅವರು,  ಪೂರ್ವಾಗ್ರಹ ಪೀಡಿತವಾಗಿ ದುಷ್ಟ, ನೀಚ, ಪ್ರಜಾಕಂಟಕ, ನರಭಕ್ಷಕ ಎಂದು ಮಹಿಷನನ್ನು ಈಗಾಗಲೇ ಚಿತ್ರಿಸಲಾಗಿದೆ. ಆದ್ರೆ, ಮಹಿಷಾಸುರ ಈ ದೇಶದ ಅಸುರ ಸಾಮ್ರಾಜ್ಯದ ನಾಯಕರಲ್ಲಿ ಅಗ್ರಗಣ್ಯನಾದ ಆರ್ಯ ಮತ್ತು ಬುದ್ಧ ಪೂರ್ವ ಪ್ರಾಗೈತಿಹಾಸಿಕ ಯುಗದ ಚಕ್ರೇಶ್ವರ ಮೈಸೂರಿನ ಹುಟ್ಟಿಗೆ ಕಾರಣನಾದವ. ಪ್ರಾಚೀನ ಮಹಿಷಾಮಂಡಲದ ದೊರೆ ಎಂದು ತಿಳಿಸಿದರು.

ಸಾಮ್ರಾಟ್ ಅಶೋಕ ಚಕ್ರವರ್ತಿಯು ಕಾಳಿಂಗ ಯುದ್ಧದಿಂದಾದ ಸಾವು ನೋವು ನೋಡಿ ಮನಪರಿವರ್ತನೆಯಾಗಿ ಶಸ್ತ್ರವನ್ನು ತ್ಯಜಿಸಿ ಇನ್ನು ಮುಂದೆ ಯುದ್ಧ ಮಾಡುವುದಿಲ್ಲವೆಂದು ಶಪಥ ಮಾಡುತ್ತಾನೆ.ಒಂಬತ್ತು ದಿನ ಉಪವಾಸ ಮಾಡಿ
ಬೌದ್ಧ ಧಮ್ಮವನ್ನು ಸ್ವೀಕರಿಸುತ್ತಾನೆ. ಆ ದಿನವನ್ನೇ ವಿಜಯ ದಶಮಿಯೆಂದು ಆಚರಿಸುತ್ತಾ ಬರಲಾಗುತ್ತಿತ್ತು. ಆದರೆ ಪುರೋಹಿತ ಶಾಹಿಗಳು ಅದನ್ನು ತಿರುಚಿ ಕಾಲ್ಪನಿಕ ದೇವಿಯ ಸುಳ್ಳನ ಕಥೆ ಕಟ್ಟ ದಸರಾ ಉತ್ಸವವನ್ನು ಆಚರಣೆಗೆ ತಂದರು.
ಬಹುಜನರ ಭಾಗ್ಯವಿದಾತ ಬೌದ್ಧರ ನೈಜ ಇತಿಹಾಸ, ಮಹಿಷಾ ಪರಂಪರೆ ಸುಸ್ಥಿರಗೊಳಿಸುವ ನಿಟ್ಟಿನಲ್ಲಿ ಮತ್ತು ವೈದಿಕ ಸಂಸ್ಕೃತಿಗೆ ಪರ್ಯಾಯವಾಗಿ ಪ್ರತಿಸಂಸ್ಕೃತಿ ಸೃಷ್ಟಿಸುವ ಸಲುವಾಗಿ ಅಂಬೇಡ್ಕರ್‌ ಯುವಸೇನೆ ಆಯೋಜಿಸಿರುವ ಮಹಿಷ
ದಸರಾ ಸಾರ್ವಕಾಲಿಕ ಮಹತ್ವ ಹೊಂದಲಿದೆ ಎಂದು ಅಭಿಪ್ರಾಯಪಟ್ಟರು.

ಅಂದು ಬೆಳಿಗ್ಗೆ 10.30 ಕ್ಕೆ ಉಡುಪಿ ಅಜ್ಜರಕಾಡು, ಹುತಾತ್ಮ ಸ್ಮಾರಕದಿಂದ ವಿವಿಧ ವಾಹನ ಜಾಥಾದೊಂದಿಗೆ ಮಹಿಷ ರಾಜನ ಟ್ಯಾಬ್ ಮೆರವಣಿಗೆ ಹೊರಡಲಿದೆ. ಜೋಡು ಮಾರ್ಗವಾಗಿ ಉಡುಪಿಯ ಹೃದಯಭಾಗದಿಂದ ಬನ್ನಂಜೆ ಮೂಲಕ ಕರಾವಳಿ ಬೈಪಾಸ್ ಹಾದು ಆದಿ ಉಡುಪಿಯ ಜಿಲ್ಲಾ ಅಂಬೇಡ್ಕರ್‌ ಭವನ ತಲುಪಲಿದೆ. ಅಲ್ಲಿ ಮಹಿಷಾಸುರ ಯಾರು? ಎಂಬ ಕುರಿತ ವಿಚಾರ ಸಂಕಿರಣವನ್ನು ಕಲಬುರಗಿಯ ಸಂಶೋಧನಾ ಬರಹಗಾರ ಡಾ.ವಿಠಲ ವಗ್ಗನ್ ಉದ್ಘಾಟಿಸಿ ವಿಚಾರ ಮಂಡಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪ್ರಗತಿಪರ ಚಿಂತಕ ಶ್ರೀರಾಮ ದಿವಾಣ ಮತ್ತು ದಲಿತ ಚಿಂತಕ ನಾರಾಯಣ ಮಣೂರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಈ ಕಾರ್ಯಕ್ರಮಕ್ಕೆ ನಾಡಿನ ಪ್ರಗತಿಪರ ಚಳವಳಿಗಾರರು, ದಲಿತ, ಹಿಂದುಳಿದ ಅಲ್ಪಸಂಖ್ಯಾತರು, ದಲಿತರ ಸಂಘ – ಸಂಸ್ಥೆಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿಕೊಡಬೇಕು ಎಂದು ಅವರು ಮನವಿ ಮಾಡಿದರು.

(ವಿಶೇಷ ಸೂಚನೆ: ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿರುವುದನ್ನು ಪ್ರಕಟಿಸಲಾಗಿದೆ. ಎಲ್ಲಾ ಜವಾಬ್ದಾರಿ ಕಾರ್ಯಕ್ರಮ ಆಯೋಜಕರದ್ದು. ಸುದ್ದಿಕ್ಷಣ ಸಂಪಾದಕ ಮಂಡಳಿಯದ್ದಲ್ಲ)

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment