SUDDIKSHANA KANNADA NEWS/ DAVANAGERE/ DATE:16-10-2023
ಗಿರೀಶ್ ಕೆ ಎಂ
ಭಾರತೀಯ ಷೇರು ಮಾರುಕಟ್ಟೆ (Stock market)ಯಲ್ಲಿ ನಿರುತ್ಸಾಹ ಮನೆಮಾಡಿದೆ. ಆರಂಭದಲ್ಲಿ ನಕರಾತ್ಮಕ ವಹಿವಾಟು ಆರಂಭಿಸಿದ ಸೂಚ್ಯಂಕಗಳು ದಿನದ ಅಂತ್ಯಕ್ಕೆ ಅಲ್ಪ ಕುಸಿತ ಕಂಡಿದೆ.
Read Also This Story:
ಸ್ಕಾಚ್ ವಿಸ್ಕಿ (Scotch whisky) ಬಗ್ಗೆ ನಿಮಗೆಷ್ಟು ಗೊತ್ತು… ದೇಸಿ ಬ್ರಾಂಡ್ಗಳ ಭಾರೀ ಬೆಳವಣಿಗೆ: ಭಾರತದ ಸಿಂಗಲ್-ಮಾಲ್ಟ್ ಉದ್ಯಮದ ಏರಿಕೆ
ದಿನದ ಅಂತ್ಯಕ್ಕೆ ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್ಎಸ್ಇ) ನಿಫ್ಟಿ -19.30 (-0.10%) ಅಂಕ ಇಳಿಕೆ ಕಂಡು 19,731.75 ರಲ್ಲಿ ಮತ್ತು ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ -115.81 (-0.17%) ಅಂಕ ಇಳಿಕೆ ಕಂಡು 66,166.93 ರಲ್ಲಿ ದಿನದ ವಹಿವಾಟು ಮುಕ್ತಾಯಗೊಳಿಸಿದವು.
ಏರಿಕೆ ಕಂಡ ಷೇರುಗಳು:
ಇಂದು ನಿಫ್ಟಿಯಲ್ಲಿ HEROMOTOCO, JSWSTEEL,TATASTEEL, LTIM,UPL ಷೇರುಗಳು ಜಿಗಿತ ಕಂಡವು.
ಇಳಿಕೆ ಕಂಡ ಷೇರುಗಳು:
ನಿಫ್ಟಿಯಲ್ಲಿ DIVISLAB, NESTLEIND, TCS, INDUSINDBK, ADANIPORTS ಷೇರುಗಳು ನಕಾರಾತ್ಮಕ ವಹಿವಾಟು ನಡೆಸಿದವು.
ಕರೆನ್ಸಿ ವಹಿವಾಟು:
ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ 83.27 ಕ್ಕೆ ತನ್ನ ವಹಿವಾಟು ಕೊನೆಗೊಳಿಸಿದೆ.
FII ಮತ್ತು DII ನಗದು ವಹಿವಾಟು ವಿವರ:
ಇಂದಿನ ಮಾರುಕಟ್ಟೆಯ ಅಂತ್ಯದಲ್ಲಿ ‘ವಿದೇಶಿ ಸಾಂಸ್ಥಿಕ ಹೂಡಿಕೆದಾರರು” (FII) : ರೂ.-593.66 ಕೋಟಿ ನಿವ್ವಳ ಮಾರಾಟ ಮಾಡಿದರೆ , ‘ದೇಶೀಯ ಸಾಂಸ್ಥಿಕ ಹೂಡಿಕೆದಾರರು’ (DII) ರೂ.1,184.24 ಕೋಟಿ ನಿವ್ವಳ ಖರೀದಿ ಮಾಡಿದ್ದಾರೆ.