SUDDIKSHANA KANNADA NEWS/ DAVANAGERE/ DATE:15-10-2023
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಯಾವ ರಾಶಿ(Rashi)ಗಳಿಗೆ ಒಳಿತು, ಯಾವ ರಾಶಿಗೆ ಕೆಡುಕು ಎಂಬುದನ್ನು ನೋಡಲಾಗುತ್ತದೆ. ಪ್ರತಿಯೊಂದು ರಾಶಿಯದ್ದು ದಿನಭವಿಷ್ಯವೂ ದಿನ ಕಳೆದಂತೆ ಬೇರೆ ಬೇರೆಯದ್ದೇ ಆಗಿರುತ್ತದೆ. ಮೇಷ, ವೃಷಭ, ಮಿಥುನ, ಸಿಂಹ, ಕರ್ಕ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ. ಹಾಗೆಯೇ 27 ರಾಶಿಗಳಿಗೆ ಭವಿಷ್ಯ ಹೇಳಬಹುದು. ಪ್ರತಿಯೊಂದು ಮೊತ್ತವು ತನ್ನದೇ ಆದ ಸ್ವಭಾವ ಮತ್ತು ಗುಣಲಕ್ಷಣಗಳನ್ನು ಹೊಂದಿದೆ, ಆದ್ದರಿಂದ ಗ್ರಹಗಳ ಜೀವನದಲ್ಲಿ ಸಂಭವಿಸುವ ಸಂದರ್ಭಗಳು ಪ್ರತಿ ದಿನದ ಗ್ರಹಗಳಿಗೆ ಅನುಗುಣವಾಗಿ ಬದಲಾಗುತ್ತವೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಯಾವ ರಾಶಿ(Rashi)ಗಳಿಗೆ ಒಳಿತು, ಯಾವ ರಾಶಿಗೆ ಕೆಡುಕು ಎಂಬುದನ್ನು ನೋಡಲಾಗುತ್ತದೆ. ಪ್ರತಿಯೊಂದು ರಾಶಿಯದ್ದು ದಿನಭವಿಷ್ಯವೂ ದಿನ ಕಳೆದಂತೆ ಬೇರೆ ಬೇರೆಯದ್ದೇ ಆಗಿರುತ್ತದೆ. ಮೇಷ, ವೃಷಭ, ಮಿಥುನ, ಸಿಂಹ, ಕರ್ಕ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ. ಹಾಗೆಯೇ 27 ರಾಶಿಗಳಿಗೆ ಭವಿಷ್ಯ ಹೇಳಬಹುದು. ಪ್ರತಿಯೊಂದು ಮೊತ್ತವು ತನ್ನದೇ ಆದ ಸ್ವಭಾವ ಮತ್ತು ಗುಣಲಕ್ಷಣಗಳನ್ನು ಹೊಂದಿದೆ, ಆದ್ದರಿಂದ ಗ್ರಹಗಳ ಜೀವನದಲ್ಲಿ ಸಂಭವಿಸುವ ಸಂದರ್ಭಗಳು ಪ್ರತಿ ದಿನದ ಗ್ರಹಗಳಿಗೆ ಅನುಗುಣವಾಗಿ ಬದಲಾಗುತ್ತವೆ.
Read Also This Story:
Davanagere: ಬೆಣ್ಣೆನಗರಿಯಾಯ್ತು ಕೇಸರಿಲೋಕ, ಹಿಂದೂ ಮಹಾಗಣಪತಿ ಶೋಭಯಾತ್ರೆಯಲ್ಲಿ ಹುಚ್ಚೆದ್ದು ಕುಣಿದ ಯುವತಿಯರು…!
ಮೇಷ ರಾಶಿ (Rashi):
ಮೇಷ ರಾಶಿಯವರು ಎಚ್ಚರಿಕೆಯಿಂದ ನಡೆಯಬೇಕು. ಹಣಕಾಸಿನ ವ್ಯವಹಾರ ಸಂಬಂಧ ಯಾಮಾರಬೇಡಿ. ನಿಮಗೆ ಯಾಮಾರಿಸುವ ಜನರಿದ್ದು ಎಚ್ಚರ ವಹಿಸಿ.
ಮಿಥುನ ರಾಶಿ (Rashi):
ಜೀವನದಲ್ಲಿ ಸವಾಲು ಬರುತ್ತವೆ. ಎದೆಗುಂದಬೇಡಿ. ಶಾಂತಿಯಿಂದ ಎದುರಿಸಿ. ನೀವಂದುಕೊಂಡದ್ದು ಆಗುತ್ತದೆ. ಅವಸರ ಪಡಬೇಡಿ.
ವೃಷಭ ರಾಶಿ (Rashi):
ವೃಷಭ ರಾಶಿಯವರು ಪ್ರಯಾಣ ಮಾಡಬೇಡಿ. ಇಂದು ರಾಶಿ ಪ್ರಕಾರ ನೀವು ಹೊರಗೆ ಹೋಗುವ ಮುನ್ನ ಅಡ್ಜಿಗಳು ಉಂಟಾಗುತ್ತವೆ. ನಿರ್ಲಕ್ಷ್ಯ ವಹಿಸಬೇಡಿ.
ಮಿಥುನ ರಾಶಿ (Rashi):
ಮಿಥುನ ರಾಶಿಯವರಿಗೆ ಹಣಕಾಸಿನ ಲಾಭ ಇದೆ. ಬಹಳ ದಿನಗಳಿಂದ ಬರಬೇಕಿದ್ದ ಹಣವು ಇಂದು ಬರುವ ಸಾಧ್ಯತೆ ಇದೆ. ನೀವು ಅಂದುಕೊಂಡ ಕೆಲಸವೂ ಆಗುತ್ತದೆ.
ಕರ್ಕ ರಾಶಿ (Rashi):
ಕರ್ಕ ರಾಶಿಯವರು ಮಕ್ಕಳ ಬಗ್ಗೆ ಎಚ್ಚರ ವಹಿಸಿ. ಮಕ್ಕಳ ಆರೋಗ್ಯದ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸಬೇಡಿ, ಹಣಕಾಸಿನ ವಿಚಾರದ ಕುರಿತಂತೆಯೂ ಜಾಗೃತಿ ವಹಿಸಿ.
ಸಿಂಹ ರಾಶಿ (Rashi):
ಸಿಂಹ ರಾಶಿಯವರಿಗೆ ಮುಂಗೋಪ ಜಾಸ್ತಿ. ಸಿಟ್ಟು ಕಡಿಮೆ ಮಾಡಿಕೊಳ್ಳಿ. ವೈವಾಹಿಕ ಜೀವನದ ಬಗ್ಗೆ ಎಚ್ಚರ ವಹಿಸಿ. ಪತಿಯಾಗಲೀ, ಪತ್ನಿಯಾಗಲೀ ತಾಳ್ಮೆಯಿಂದ ಇದ್ದರೆ ಕುಟುಂಬ ಚೆನ್ನಾಗಿರುತ್ತದೆ.
ಕನ್ಯಾ ರಾಶಿ (Rashi):
ಕನ್ಯಾ ರಾಶಿಯವರು ಪ್ರಯಾಣ ಮಾಡುವ ಮುನ್ನ ಹಿರಿಯರ ಆಶೀರ್ವಾದ ಪಡೆಯಿರಿ. ಹೋಗುವ ಪ್ರಯಾಣ ಸುಖಕರವಾಗಿರಲಿದೆ. ಪ್ರಯಾಣ ಮಾಡಿ ಕುಟುಂಬದೊಂದಿಗೆ ಆನಂದ ಕ್ಷಣ ಕಳೆಯುವಿರಿ.
ತುಲಾ ರಾಶಿ (Rashi):
ತುಲಾ ರಾಶಿಯವರು ದೇವಸ್ಥಾನಕ್ಕೆ ಹೋಗುತ್ತಾರೆ. ದೇವರ ದರ್ಶನ ಪಡೆಯಿರಿ. ಪ್ರಸಾದ ಸೇವಿಸಿ ದೇವರಲ್ಲಿ ಒಳಿತಾಗಲಿ ಎಂದು ಪ್ರಾರ್ಥಿಸಿ.
ವೃಶ್ಚಿಕ ರಾಶಿ (Rashi):
ವೃಶ್ಕಿಕ ರಾಶಿಯವರಿಗೆ ರಾಜಕೀಯದಲ್ಲಿ ಒಳ್ಳೆಯ ಹೆಸರು ಬರಲಿದೆ. ನೀವು ಅಂದುಕೊಂಡಿದ್ದ ಕೆಲಸ ಆಗಲಿದೆ. ನಿಮಗೆ ಹಣ ಕೊಡದೇ ಸತಾಯಿಸುತ್ತಿರುವವರು ಹಣ ನೀಡುವ ಸಮಯವೂ ಬರಲಿದೆ. ಎದೆಗುಂದಬೇಡಿ, ತಾಳ್ಮೆ ವಹಿಸಿ.
ಧನು ರಾಶಿ (Rashi):
ಧನು ರಾಶಿಯವರು ಮನೆಯಲ್ಲಿನ ವಾತಾವರಣದ ಬಗ್ಗೆ ಕಾಳಜಿ ವಹಿಸಿ. ಮನೆಯಲ್ಲಿ ಎಲ್ಲರೊಂದಿಗೆ ಬೆರೆಯಿರಿ. ಹೊರಗಡೆ ಊಟಕ್ಕೆ ಹೋಗುವಿರಿ.
ಮಕರ ರಾಶಿ (Rashi):
ಮಕರ ರಾಶಿಯವರಿಗೆ ಸ್ನೇಹಿತರು ಸಹಕಾರ ಕೊಡಲಿದ್ದಾರೆ. ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸುತ್ತಾರೆ. ಏನೇ ಕಷ್ಟ ಇದ್ದರೂ ಸ್ನೇಹಿತರು ಬರುತ್ತಾರೆ. ಜೊತೆಗೆ ಕುಟುಂಬದವರು, ಸಂಬಂಧಿಕರ ಸಹಕಾರವೂ ಸಿಗಲಿದೆ.
ಕುಂಭ ರಾಶಿ (Rashi):
ಕುಂಭ ರಾಶಿಯವರು ಸಮಾಧಾನದಿಂದ ವರ್ತಿಸಿ. ಏನೇ ಸಮಸ್ಯೆ ಎದುರಾದರೂ ಕೋಪಗೊಳ್ಳಬೇಡಿ. ಇಂದು ಸಮಸ್ಯೆ ಎನಿಸಬಹುದು. ಮುಂದೆ ಉತ್ತಮ ಫಲಿತಾಂಶ ಪಡೆಯುತ್ತೀರಿ.
ಮೀನ ರಾಶಿ (Rashi):
ಮೀನ ರಾಶಿಯವರು ನಿರುದ್ಯೋಗಿಯಾಗಿದ್ದರೆ ಸಿಹಿ ಸುದ್ದಿ ಬರುವ ಸಾಧ್ಯತೆ ಇದೆ. ಕೆಲಸಕ್ಕೆ ಹುಡುಕಾಟ ನಡೆಸುತ್ತಿರುವವರಿಗೆ ಉದ್ಯೋಗಾವಕಾಶದ ಅವಕಾಶ ಸಿಗುತ್ತದೆ. ಮಿಸ್ ಮಾಡ್ಕೋಬೇಡಿ.