ಚೆನ್ನೈ/ಇಂಫಾಲ್: ದೇಶಾದ್ಯಂತ ತೀವ್ರ ಸಂಚಲನ ಮೂಡಿಸಿದ್ದ ತಮಿಳುನಾಡಿನ ಭೀಕರ ಬಿರಿಯಾನಿ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳಾದ ಮಾಣಿಕ್ಕುದ್ದೀನ್ ಲಷ್ಕರ್ ಹಾಗೂ ಆತನ ಪತ್ನಿ ಭಗವತಿ ಮಾಜಿಯನ್ನು ಕೊನೆಗೂ ಪೊಲೀಸರು ಬಂಧಿಸಿದ್ದಾರೆ.
ತಮಿಳುನಾಡು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಮಣಿಪುರದ ಜಿರಿಬಾಮ್ ಜಿಲ್ಲೆಯಲ್ಲಿ ತಲೆಮರೆಸಿಕೊಂಡಿದ್ದ ಈ ದಂಪತಿಯನ್ನು ವಶಕ್ಕೆ ಪಡೆದು, ಹೆಚ್ಚಿನ ತನಿಖೆಗಾಗಿ ತಮಿಳುನಾಡಿಗೆ ಕರೆತಂದಿದ್ದಾರೆ.
ರೈಲಿನಲ್ಲಿ ದುರ್ವಾಸನೆ: ಕೊಲೆಯ ರಹಸ್ಯ ಬಯಲು
ಆಗಸ್ಟ್ 5ರಂದು ತಮಿಳುನಾಡು ಎಕ್ಸ್‌ಪ್ರೆಸ್ ರೈಲು ಉತ್ತರ ಪ್ರದೇಶದ ಆಗ್ರಾ ನಿಲ್ದಾಣ ತಲುಪಿದ್ದಾಗ, ಸಾಮಾನ್ಯ ಬೋಗಿಯಲ್ಲಿದ್ದ ಕೆಂಪು ಬಣ್ಣದ ಸೂಟ್‌ಕೇಸ್‌ನಿಂದ ತೀವ್ರ ದುರ್ವಾಸನೆ ಬರಲು ಪ್ರಾರಂಭಿಸಿತು. ಪ್ರಯಾಣಿಕರು ತಕ್ಷಣ ರೈಲ್ವೆ ಪೊಲೀಸರಿಗೆ (GRP) ಮಾಹಿತಿ ನೀಡಿದರು. ಪೊಲೀಸರು ಸೂಟ್‌ಕೇಸ್ ತೆರೆದು ಪರಿಶೀಲಿಸಿದಾಗ ಅದರಲ್ಲಿ ಕತ್ತರಿಸಿದ ಮಾನವ ದೇಹದ ಭಾಗಗಳು ಪತ್ತೆಯಾಗಿ ಬೆಚ್ಚಿಬಿದ್ದಿದ್ದರು.
ಸಿಟಿಸಿಟಿವಿ ತನಿಖೆಯಿಂದ ಚೆನ್ನೈನ ಮನೆಯವರೆಗೆ ಜಾಡು
ರೈಲ್ವೆ ನಿಲ್ದಾಣಗಳ 350ಕ್ಕೂ ಹೆಚ್ಚು ಸಿಸಿಟಿವಿ ದೃಶ್ಯಾವಳಿಗಳನ್ನು ತನಿಖೆ ಮಾಡಿದ ಪೊಲೀಸರಿಗೆ, ಚೆನ್ನೈ ಸೆಂಟ್ರಲ್ ರೈಲು ನಿಲ್ದಾಣದಿಂದ ದಂಪತಿಯೊಬ್ಬರು ಈ ಕೆಂಪು ಸೂಟ್‌ಕೇಸ್ ಹೊತ್ತು ತಂದು ರೈಲಿನಲ್ಲಿಟ್ಟು ಪರಾರಿಯಾಗಿದ್ದ ದೃಶ್ಯ ಸಿಕ್ಕಿತು. ಪೊಲೀಸರು ಈ ಜಾಡನ್ನು ಹಿಡಿದು ತನಿಖೆ ಮುಂದುವರಿಸಿದಾಗ ಆರೋಪಿಗಳು ಚೆನ್ನೈನ ಗೂಡುಾಂಚೇರಿಯ ಮಸೀದಿ ಬೀದಿಯಲ್ಲಿದ್ದ ಬಾಡಿಗೆ ಮನೆಯಲ್ಲಿ ವಾಸವಿದ್ದುದು ಪತ್ತೆಯಾಯಿತು.
ಬಿರಿಯಾನಿ ಪಾತ್ರೆಯಲ್ಲಿ ಕತ್ತರಿಸಿದ ಶವದ ಭಾಗಗಳು!
ಪೊಲೀಸರು ಚೆನ್ನೈನ ಗೂಡುಾಂಚೇರಿಯಲ್ಲಿದ್ದ ಆರೋಪಿಗಳ ಮನೆ ಬಾಗಿಲು ಮುರಿದು ಒಳಪ್ರವೇಶಿಸಿದಾಗ ಮತ್ತಷ್ಟು ದೋರಕರ ಘಟನೆಗಳು ಬೆಳಕಿಗೆ ಬಂದವು. ಒಡಿಶಾ ಮೂಲದ 38 ವರ್ಷದ ಹಯಾತ್ ನಿಶಾ ಅವರ ಶವ ತೂಗಾಡುತ್ತಿದ್ದು, ಅವರ ದೇಹದ ಹಲವು ಕತ್ತರಿಸಿದ ಭಾಗಗಳನ್ನು ದೊಡ್ಡ ಬಿರಿಯಾನಿ ಪಾತ್ರೆಯಲ್ಲಿ ಮೈದಾ ಹಿಟ್ಟು ಹಾಗೂ ತರಕಾರಿಗಳೊಂದಿಗೆ ಮುಚ್ಚಿಟ್ಟಿದ್ದು ಪತ್ತೆಯಾಯಿತು. ಸಾಕ್ಷ್ಯ ನಾಶಪಡಿಸಲು ಕೊಲೆಯಾದ ಮಹಿಳೆಯ ದೇಹದ ಭಾಗಗಳನ್ನು ಬೇಯಿಸಲು ಆರೋಪಿಗಳು ಯತ್ನಿಸಿದ್ದರೆಂದು ಪೊಲೀಸರು ಶಂಕಿಸಿದ್ದಾರೆ.
ಅಕ್ರಮ ಸಂಬಂಧ ಹಾಗೂ ಕೊಲೆಗೆ ಕಾರಣ
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಕೊಲೆಯಾದ ಹಯಾತ್ ನಿಶಾ ಹಾಗೂ ಆರೋಪಿ ಮಾಣಿಕ್ಕುದ್ದೀನ್ ಲಷ್ಕರ್ ನಡುವೆ ಅಕ್ರಮ ಸಂಬಂಧವಿತ್ತು. ಈ ವಿಚಾರ ಮಾಣಿಕ್ಕುದ್ದೀನ್ ಪತ್ನಿ ಭಗವತಿ ಮಾಜಿಗೆ ತಿಳಿದು ಮನೆಯಲ್ಲಿ ತೀವ್ರ ಗಲಾಟೆ ನಡೆದಿದೆ. ಈ ಜಗಳದ ಬೆನ್ನಲ್ಲೇ ದಂಪತಿ ಸೇರಿ ಹಯಾತ್ ನಿಶಾ ಅವರನ್ನು ಭೀಕರವಾಗಿ ಹತ್ಯೆ ಮಾಡಿ, ದೇಹವನ್ನು ತುಂಡರಿಸಿ ಸಾಕ್ಷ್ಯ ನಾಶಪಡಿಸಲು ಯತ್ನಿಸಿ ಬಳಿಕ ಮಣಿಪುರಕ್ಕೆ ಓಡಿಹೋಗಿದ್ದರು. ಪ್ರಸ್ತುತ ಆರೋಪಿಗಳನ್ನು ಸುಪರ್ದಿಗೆ ಪಡೆದಿರುವ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
- Bhagwati Maji
- Chennai crime news
- Guduvanchery Murder Case
- Hayat Nisha Murder Case
- Manikuddin Lashkar
- Manipur Arrest
- Tamil Nadu Express Suitcase Body
- TN Biryani Murder
- ಕ್ರೈಮ್ ನ್ಯೂಸ್ ಕನ್ನಡ
- ಚೆನ್ನೈ ಗೂಡುಾಂಚೇರಿ ಅಪರಾಧ ಸುದ್ದಿ
- ತಮಿಳುನಾಡು ಎಕ್ಸ್‌ಪ್ರೆಸ್ ಸೂಟ್‌ಕೇಸ್ ಶವ
- ತಮಿಳುನಾಡು ಬಿರಿಯಾನಿ ಕೊಲೆ ಪ್ರಕರಣ
- ಭಗವತಿ ಮಾಜಿ arrest
- ಮಣಿಪುರ ಬಂಧನ
- ಮಾಣಿಕ್ಕುದ್ದೀನ್ ಲಷ್ಕರ್
- ಹಯಾತ್ ನಿಶಾ ಕೊಲೆ





Leave a comment