ತೆಲಂಗಾಣ: ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಿದ್ದ 21 ವರ್ಷದ ನರ್ಸ್ ಉಕೆ ಶಿರೀಷಾ ಅವರ ಶವ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈದರಾಬಾದ್ ಪೊಲೀಸರು ಬಿಹಾರ ಮೂಲದ 34 ವರ್ಷದ ಎಂಡಿ ಸನಾವುಲ್ಲಾ ಖಾನ್ ಎಂಬಾತನನ್ನು ಬಂಧಿಸಿದ್ದಾರೆ.
ತುಕ್ಕುಗುಡದ ಪ್ರೈಮ್ ಕೇರ್ ಆಸ್ಪತ್ರೆಯಲ್ಲಿ ಕಳೆದ ಏಳು ತಿಂಗಳಿನಿಂದ ಶಿರೀಷಾ ನರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಆಸ್ಪತ್ರೆಯ ಸಮೀಪವೇ ಸಿಬ್ಬಂದಿಗೆ ನೀಡಲಾಗಿದ್ದ ವಸತಿಗೃಹದಲ್ಲಿ ಅವರು ವಾಸವಿದ್ದರು. ಶುಕ್ರವಾರ ರಾತ್ರಿ 10 ಗಂಟೆ ಸುಮಾರಿಗೆ ಕರ್ತವ್ಯ ಮುಗಿಸಿ ತಮ್ಮ ಕೋಣೆಗೆ ತೆರಳಿದ್ದ ಅವರು, ಮರುದಿನ ಬೆಳಿಗ್ಗೆ ಸಹೋದ್ಯೋಗಿಗಳ ಕರೆಗೆ ಪ್ರತಿಕ್ರಿಯಿಸಿರಲಿಲ್ಲ. ಬಳಿಕ ಕಿಟಕಿ ಮೂಲಕ ನೋಡಿದಾಗ ಶವವಾಗಿ ಪತ್ತೆಯಾಗಿದ್ದಾರೆ. ಆಕೆಯ ಮುಖದ ಮೇಲೆ ಗಾಯದ ಗುರುತುಗಳಿದ್ದವು. ಸಿಸಿಟಿವಿ ದೃಶ್ಯಾವಳಿಗಳು ಹಾಗೂ ಇತರ ಸಾಕ್ಷ್ಯಗಳ ಆಧಾರದ ಮೇಲೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಘಟನೆ ಕುರಿತು ಪ್ರತಿಕ್ರಿಯಿಸಿರುವ ಮಹೇಶ್ವರಂ ಕ್ಷೇತ್ರದ ಬಿಜೆಪಿ ಉಸ್ತುವಾರಿ ಅಂದೇಲ ಶ್ರೀರಾಮುಲು, ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಕೊಲೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಅಲ್ಲದೆ, ಸಂತ್ರಸ್ತೆಯ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಮತ್ತು ಆರೋಪಿಯನ್ನು ಎನ್‌ಕೌಂಟರ್ ಮಾಡುವಂತೆ ಅವರು ಒತ್ತಾಯಿಸಿದ್ದಾರೆ.
ಇತ್ತ, ಘಟನೆಯನ್ನು ಖಂಡಿಸಿರುವ ತೆಲಂಗಾಣ ನರ್ಸ್ ಸಂಘ (ಟಿಎನ್‌ಎ), ನರ್ಸಿಂಗ್ ಸಿಬ್ಬಂದಿಗೆ ಸುರಕ್ಷಿತ ಮತ್ತು ಗೌರವಯುತ ಕಾರ್ಯಕ್ಷೇತ್ರವನ್ನು ಒದಗಿಸುವಂತೆ ಕೋರಿ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದೆ.
- BJP Andela Sriramulu
- MD Sanaullah Khan arrested
- Rangareddy district crime
- Telangana nurse death
- Telangana Nurses Association
- Thukkuguda Prime Care Hospital
- Uke Shireesha
- ಉಕೆ ಶಿರೀಷಾ
- ಎಂಡಿ ಸನಾವುಲ್ಲಾ ಖಾನ್ ಬಂಧನ
- ತುಕ್ಕುಗುಡ ಪ್ರೈಮ್ ಕೇರ್ ಆಸ್ಪತ್ರೆ
- ತೆಲಂಗಾಣ ನರ್ಸ್ ಸಂಘ
- ತೆಲಂಗಾಣ ನರ್ಸ್ ಸಾವು
- ಬಿಜೆಪಿ ಅಂದೇಲ ಶ್ರೀರಾಮುಲು
- ರಂಗಾರೆಡ್ಡಿ ಜಿಲ್ಲೆ ಅಪರಾಧ





Leave a comment