ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಟಿಕೆಟ್ ಘೋಷಿಸಿಲ್ಲ, ಏಕಮುಖ ನಿರ್ಧಾರ ಒಪ್ಪಲ್ಲ – ಬಿಜೆಪಿ ಕಟ್ಟಿ ಬೆಳೆಸಿದ್ದು ರವೀಂದ್ರನಾಥರೆಂದು ಘಂಟಾಘೋಷವಾಗಿ ಹೇಳ್ತೇನೆ: ರೇಣುಕಾಚಾರ್ಯ ಹೊಸ ಕ್ಯಾತೆ…!

On: February 8, 2024 10:57 PM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:09-02-2024

ದಾವಣಗೆರೆ: ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಘೋಷಣೆ ಯಾರಿಗೂ ಆಗಿಲ್ಲ ಎಂದು ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ ಹೇಳುವ ಮೂಲಕ ಹೊಸ ವರಸೆ ತೆಗೆದಿದ್ದು, ಈಗ ಮತ್ತೆ ನಾನು ಪ್ರಬಲ ಆಕಾಂಕ್ಷಿ. ಟಿಕೆಟ್ ಕೇಳುವುದರಲ್ಲಿ ತಪ್ಪೇನಿದೆ ಎಂದು ಹೇಳುವ ಮೂಲಕ ಕುತೂಹಲದ ನಡೆ ಇಟ್ಟಿದ್ದಾರೆ.

ಮಾಧ್ಯಮದವರ ಜೊತೆ ಮಾತನಾಡಿದ ಅವರು, ದಾವಣಗೆರೆ ಜಿಲ್ಲೆಯಲ್ಲಿ ಬಿಜೆಪಿ ಪಕ್ಷವನ್ನು ಕಟ್ಟಿ ಬೆಳೆಸಿದ್ದು ಮಾಜಿ ಸಚಿವ ಎಸ್. ಎ. ರವೀಂದ್ರನಾಥ್ ಅವರು. ಗುರುಸಿದ್ದನಗೌಡರು ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಪಕ್ಷ ಕಟ್ಟಿ
ಬೆಳೆಸಿದ್ದಾರೆ. ಚಿತ್ರದುರ್ಗ – ದಾವಣಗೆರೆ ಜಿಲ್ಲೆಯಾಗಿದ್ದಾಗ ಜಿಲ್ಲಾಧ್ಯಕ್ಷರಾಗಿದ್ದವರು ರವೀಂದ್ರನಾಥ್. ಘಂಟಾಘೋಷವಾಗಿ ಎಲ್ಲಿ ಬೇಕಾದರೂ ನಾನು ಹೇಳುತ್ತೇನೆ ಎಂದು ಗುಡುಗಿದರು.

ವೇದಿಕೆಯಲ್ಲಿ ಮಾತನಾಡುವಾಗ ಮಾಜಿ ಸಿಎಂ ಯಡಿಯೂರಪ್ಪ ಅವರು ಯಾರ ಹೆಸರು ಘೋಷಿಸಿಲ್ಲ. ಯಡಿಯೂರಪ್ಪ, ಕೆ. ಎಸ್. ಈಶ್ವರಪ್ಪ, ಬಿ. ವೈ. ವಿಜಯೇಂದ್ರ ಅವರ ಜೊತೆ ಚರ್ಚಿಸಿದ್ದೇನೆ. ನಮ್ಮ ಅಭಿಪ್ರಾಯ ತಿಳಿಸಿದ್ದೇವೆ. ಸೂಕ್ತವಾದ ಅಭ್ಯರ್ಥಿ ಘೋಷಿಸಬೇಕು. ಸಾಮಾನ್ಯ ಮತದಾರರು, ಬಿಜೆಪಿ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ. ಜನರ ಮಧ್ಯೆ ಇರುವವರಿಗೆ ಟಿಕೆಟ್ ನೀಡುವಂತೆ ಕೇಳಿದ್ದೇವೆ. ಇದರಲ್ಲಿ ತಪ್ಪೇನಿದೆ ಎಂದರು.

ದಿವಂಗತ ಮಲ್ಲಿಕಾರ್ಜುನಪ್ಪರು ಅಜಾತಶತ್ರು. ಒಳ್ಳೆಯ ಕೆಲಸ ಮಾಡಿದ್ದಾರೆ. ಕಾರ್ಯಕರ್ತರು, ಮುಖಂಡರ ಅಭಿಪ್ರಾಯ ಸಂಗ್ರಹಿಸಿ ಟಿಕೆಟ್ ಘೋಷಣೆ ಮಾಡಬೇಕು. ಇಲ್ಲದಿದ್ದರೆ ನಾವ್ಯಾರೂ ಒಪ್ಪುವುದಿಲ್ಲ. ಏಕಮುಖವಾಗಿ ಘೋಷಣೆ ಮಾಡಿಲ್ಲ, ಏಕಮುಖವಾಗಿ ಮಾಡಿದರೆ ಒಪ್ಪುವುದೂ ಇಲ್ಲ ಎಂದು ಹೇಳುವ ಮೂಲಕ ಭಿನ್ನಮತ ಕಾವು ಆರಿಲ್ಲ ಎಂದು ಸ್ಪಷ್ಟಪಡಿಸಿದರು.

ಬಿ. ಎಸ್. ಯಡಿಯೂರಪ್ಪ, ಕೆ. ಎಸ್. ಈಶ್ವರಪ್ಪ, ಬಿ. ವೈ. ವಿಜಯೇಂದ್ರ ಯಡಿಯೂರಪ್ಪ ಅವರು ಕಾರ್ಯಕರ್ತರು, ಮುಖಂಡರ ಅಭಿಪ್ರಾಯ ಪಡೆದು ಘೋಷಣೆ ಮಾಡುತ್ತೇವೆ ಎಂದಿದ್ದಾರೆ. ನಾನೂ ಪ್ರಬಲ ಆಕಾಂಕ್ಷಿ, ಡಾ. ರವಿಕುಮಾರ್ ಅವರೂ ಇದ್ದಾರೆ. ಇಂದು ಕಾರ್ಯಕರ್ತರ, ಮುಖಂಡರ ಅಭಿಪ್ರಾಯ ಸಂಗ್ರಹಿಸಿ ಟಿಕೆಟ್ ಘೋಷಣೆ ಮಾಡಿ ಎಂದಿದ್ದೇವೆ ಎಂದು ಹೇಳಿದರು.

ನನಗೆ ಟಿಕೆಟ್ ನೀಡುವುದರಲ್ಲಿ ತಪ್ಪೇನಿದೆ? ಯಾಕೆ ಕೊಡಬಾರದು. ನಮಗೇನೂ ಸಾಮರ್ಥ್ಯ ಇಲ್ಲವೇ. ಜನರ ಪ್ರೀತಿ ಗಳಿಸಿದ್ದೇವೆ. ಪ್ರಬಲ ಆಕಾಂಕ್ಷಿ ಎಂದಿದ್ದೇನೆ. ಜನರ ಮಧ್ಯೆ ಇದ್ದೇವೆ, ಕೆಲಸ ಮಾಡಿದ್ದೇವೆ. ಕೇಳಲು ಹಕ್ಕಿದೆ. ಯಾವ ವ್ಯಕ್ತಿ ಹೆಸರು ಘೋಷಿಸಿಲ್ಲ. ಇಲ್ಲಿ ನಾನು ಎಂಬುವುದಿಲ್ಲ, ನಾವು ಎನ್ನುವುದು ಇರುವುದು ಎಂದು ರೇಣುಕಾಚಾರ್ಯ ತಿಳಿಸಿದರು.

ಪದಗ್ರಹಣ ಸಮಾರಂಭಕ್ಕೆ ಮಾಜಿ ಸಚಿವ ಎಸ್. ಎ. ರವೀಂದ್ರನಾಥ್ ಅವರು ಬಂದಿಲ್ಲ. ಕೋರ್ಟ್ ವಾರೆಂಟ್ ಇದ್ದ ಕಾರಣಕ್ಕೆ ಗೈರು ಹಾಜರಾಗಿದ್ದಾರೆ. ನವದೆಹಲಿಯಲ್ಲಿ ಸಭೆ ಇರುವ ಕಾರಣಕ್ಕೆ ಬಿ. ವೈ. ವಿಜಯೇಂದ್ರ ಅವರೂ ಬಂದಿಲ್ಲ. ಇದಕ್ಕೆ ಬೇರೆ ಅರ್ಥ ಕಲ್ಪಿಸುವುದಕ್ಕೆ ಆಗುತ್ತಾ ಎಂದು ಪ್ರಶ್ನಿಸಿದರು.

ಬಿಜೆಪಿ ಶಾಸಕರು ಹೊನ್ನಾಳಿಯಲ್ಲಿ ಸಭೆ ಮಾಡಿರುವುದು ನನ್ನ ಗಮನಕ್ಕೆ ಬಂದಿದೆ. ನಾನು ಕೀಳುಮಟ್ಟದ ರಾಜಕಾರಣ ಮಾಡಲ್ಲ. ನನಗೂ ಎಲ್ಲಾ ಕಡೆ ಸಭೆ ನಡೆಸುವ ಸಾಮರ್ಥ್ಯ ಇದೆ. ಎಲ್ಲಿ ಏನು ಹೇಳಬೇಕೋ ಅದನ್ನು ಹೇಳಿದ್ದೇವೆ. ಮುಂದೆಯೂ ಮಾತನಾಡುತ್ತೇವೆ. ಅಗತ್ಯಬಿದ್ದರೆ ದೆಹಲಿಗೂ ಹೋಗುತ್ತೇನೆ. ವರಿಷ್ಠರ ಭೇಟಿ ಮಾಡುತ್ತೇನೆ ಎಂದ ಅವರು, ಬಿಜೆಪಿ ನಾಯಕರನ್ನು ಭೇಟಿ ಮಾಡುವುದರಲ್ಲಿ ತಪ್ಪೇನಿಲ್ಲ. ನಾನೇನೂ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ್ ಖರ್ಗೆ ಸೇರಿದಂತೆ ಕಾಂಗ್ರೆಸ್ ಮುಖಂಡರನ್ನೇನೂ ಭೇಟಿ ಮಾಡಿಲ್ಲ. ನಮ್ಮ ಪಕ್ಷದ ಮುಖಂಡರನ್ನು ಸಂಘಟಿಸಿದ್ದೇನೆ. ಮುಂದೆಯೂ ಮಾಡುತ್ತೇನೆ ಎಂದರು.

ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರನ್ನು ಬಿಜೆಪಿ ಉಚ್ಚಾಟನೆ ಮಾಡಿಲ್ಲ. ಕೇಸ್ ಆಗಿತ್ತು. ಹಾಗಾಗಿ ಸ್ವಲ್ಪ ದೂರ ಉಳಿದಿದ್ದರು. ಸ್ವಾಭಿಮಾನಿ ಬಳಗದಿಂದ ಮಾಡಾಳ್ ಮಲ್ಲಿಕಾರ್ಜುನ್ ಸ್ಪರ್ಧೆ ಮಾಡಿದ ಕಾರಣಕ್ಕೆ ಪಕ್ಷದಿಂದ ಉಚ್ಚಾಟನೆ ಮಾಡಲಾಗಿತ್ತು. ಮತ್ತೆ ಪಕ್ಷಕ್ಕೆ ಮರಳಿದ್ದಾರೆ ಎಂದು ತಿಳಿಸಿದರು.

ಮಾಜಿ ಶಾಸಕ ಗುರುಸಿದ್ದನಗೌಡರು, ಅವರ ಪುತ್ರ ರವಿಕುಮಾರ್ ಅವರನ್ನು ಉಚ್ಚಾಟನೆ ಮಾಡುವ ಅಧಿಕಾರ ಬಿಜೆಪಿ ಜಿಲ್ಲಾ ಘಟಕಕ್ಕೆ ಇಲ್ಲ. ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷರು, ರಾಜ್ಯಾಧ್ಯಕ್ಷರಿಗೆ ಇದೆ. ರಾಜ್ಯ ಕಾರ್ಯಕಾರಿಣಿ ಸೇರಿದಂತೆ ಇತರೆ ಸಭೆಗಳಿಗೆ ಮಾಡಾಳ್ ವಿರೂಪಾಕ್ಷಪ್ಪ ಹಾಗೂ ಗುರುಸಿದ್ದನಗೌಡರಿಗೆ ಕರೆ ಬರುತಿತ್ತು. ಕಾರ್ಯಕರ್ತರು, ಮುಖಂಡರ ಅಪೇಕ್ಷೆಯಂತೆ ಗುರುಸಿದ್ದನಗೌಡರು, ರವಿಕುಮಾರ್ ಹಾಗೂ ಮಾಡಾಳ್ ಮಲ್ಲಿಕಾರ್ಜುನ್ ಅವರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳಲಾಗಿದೆ ಎಂದು ಹೇಳಿದರು.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment