SUDDIKSHANA KANNADA NEWS/ DAVANAGERE/ DATE:01-12-2024
ವಿಶಾಖಪಟ್ಟಣಂ: ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮೂವರು ಮಹಿಳೆಯರ ಮೇಲೆ ರಾಸಾಯನಿಕ ದಾಳಿ ನಡೆಸಲಾಗಿದ್ದು, ಉಸಿರಾಟದ ತೊಂದರೆ ಉಂಟಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಪರಿಚಿತ ವ್ಯಕ್ತಿಯೊಬ್ಬ ಮಹಿಳೆಯ ಮೇಲೆ ರಾಸಾಯನಿಕ ವಸ್ತು ಎಸೆದಿದ್ದಾನೆ ಎನ್ನಲಾಗಿದೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಕೆಮಿಕಲ್ ಎಸೆಯುತ್ತಿದ್ದಂತೆ ಮಹಿಳೆಯರು ಜೋರಾಗಿ ಕಿರುಚಿಕೊಂಡರು. ಜೊತೆಗೆ ಕೆಮ್ಮಲು ಶುರು ಮಾಡಿದರು. ತಕ್ಷಣವೇ ಬಸ್ ಅನ್ನು ಚಾಲಕ ನಿಲ್ಲಿಸಿದ. ಸ್ಥಳೀಯರ ಸಹಾಯದಿಂದ ಮಹಿಳೆಯರನ್ನು ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ಸಾಗಿಸಲಾಯಿತು.
ದಾಳಿಗೆ ಬಳಸಿದ ವಸ್ತು ನಿಜವಾಗಿಯೂ ಆಸಿಡ್ ಅಥವಾ ಇನ್ನೊಂದು ರಾಸಾಯನಿಕವೇ ಎಂಬುದನ್ನು ನಾವು ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸ್ ಸರ್ಕಲ್ ಇನ್ಸ್‌ಪೆಕ್ಟರ್ ಚಂದ್ರಶೇಖರ್ ಹೇಳಿದ್ದಾರೆ. ದಾಳಿಯ ಹಿಂದಿನ ಉದ್ದೇಶ ಇನ್ನೂ ಪತ್ತೆಯಾಗಿಲ್ಲ. ಹೆಚ್ಚಿನ ತನಿಖೆ ನಡೆಯುತ್ತಿದೆ.