SUDDIKSHANA KANNADA NEWS/ DAVANAGERE/ DATE:16-01-2025
ದಾವಣಗೆರೆ: ಆವರಗೊಳ್ಳ ಗ್ರಾಮದ ಹತ್ತಿರ ಇರುವ ಮಹಾನಗರಪಾಲಿಕೆ ಒಡೆತನದಲ್ಲಿರುವ 33 ಎಕರೆ ವ್ಯಾಪ್ತಿಯ ಘನತ್ಯಾಜ್ಯ ವಿಲೇವಾರಿ ಘಟಕದ ಪ್ರದೇಶವೆಂದು ಗುರುತಿಸಲಾಗಿದೆ.
ಸರ್ವೇ ನಂ 117/2, 119, 123, 129, 129/1, 129/2, 129/4, 130/1 ಪ್ರದೇಶಗಳು ಸಂಪೂರ್ಣವಾಗಿ ನಿರ್ಬಂಧಿತ ಪ್ರದೇಶವೆಂದು ಘೋಷಿಸಲಾಗಿದೆ.
ಯಾವುದೇ ಅನಧಿಕೃತ ವಾಹನಗಳಾಗಲಿ, ವ್ಯಕ್ತಿಗಳಾಗಲಿ, ಜಾನುವಾರುಗಳಾಗಲಿ ಪೂರ್ವಾನುಮತಿ ಇಲ್ಲದೇ ಪ್ರವೇಶವಿರುವುದಿಲ್ಲ. ಒಂದು ವೇಳೆ ಯಾವುದೇ ವ್ಯಕ್ತಿ, ವಾಹನ, ಜಾನುವಾರುಗಳು ಮಹಾನಗರಪಾಲಿಕೆಯ ಅನುಮತಿ ಇಲ್ಲದೆ ಅನಧಿಕೃತವಾಗಿ ಪ್ರವೇಶಿಸುವುದು ಹಾಗೂ ನುಸುಳಿ ಯಾವುದೇ ರೀತಿಯ ಅನಾಹುತಕೊಳಗಾದಲ್ಲಿ ಪಾಲಿಕೆ ಜವಾಬ್ದಾರಿಯಾಗಿರುವುದಿಲ್ಲ ಎಂದು ಪಾಲಿಕೆ ಆಯುಕ್ತರಾದ ರೇಣುಕಾ ತಿಳಿಸಿದ್ದಾರೆ.