Home ಕ್ರೈಂ ನ್ಯೂಸ್ ಲಂಡನ್ ವರ ಅಂದ್ಕೊಂಡು ಪ್ರೀತಿಸಿದ್ಳು, ಕೋಳಿ ಅಂಗಡಿ ಕೆಲಸಗಾರನೆಂದು ಗೊತ್ತಾಗ್ತಿದ್ದಂತೆ ಪ್ರಾಣ ಬಿಟ್ಳು!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಲಂಡನ್ ವರ ಅಂದ್ಕೊಂಡು ಪ್ರೀತಿಸಿದ್ಳು, ಕೋಳಿ ಅಂಗಡಿ ಕೆಲಸಗಾರನೆಂದು ಗೊತ್ತಾಗ್ತಿದ್ದಂತೆ ಪ್ರಾಣ ಬಿಟ್ಳು!

Share
ಲಂಡನ್
Share

ತಿರುವಾರೂರು: ಲಂಡನ್‌ನಲ್ಲಿ ಉದ್ಯೋಗದಲ್ಲಿದ್ದಾನೆ ಎಂದು ಸುಳ್ಳು ಹೇಳಿ ಮದುವೆ ನಿಶ್ಚಯ ಮಾಡಿಕೊಂಡಿದ್ದ ವರನ ಅಸಲಿ ಬಣ್ಣ ಬಯಲಾದ ನಂತರವೂ, ಆತನನ್ನೇ ಮದುವೆಯಾಗುವುದಾಗಿ ಪಟ್ಟು ಹಿಡಿದ ಯುವತಿಯೊಬ್ಬಳು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ತಮಿಳುನಾಡಿನ ತಿರುವಾರೂರಿನಲ್ಲಿ ನಡೆದಿದೆ.

ತಿರುವಾರೂರಿನ ಉತ್ತರ ಬೀದಿ ನಿವಾಸಿ, ಸೈಕಲ್ ರಿಪೇರಿ ಅಂಗಡಿ ನಡೆಸುತ್ತಿರುವ ಕುಮಾರ್ (60) ಹಾಗೂ ಮೀರಾ (55) ದಂಪತಿಯ ಪುತ್ರಿ ಶ್ರೀಲೇಖಾ (24) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಪದವೀಧರೆಯಾಗಿದ್ದ ಶ್ರೀಲೇಖಾಗೆ ಪೋಷಕರು ವರನನ್ನು ಹುಡುಕುತ್ತಿದ್ದಾಗ ಮೈಲಾಡುತುರೈ ಮೂಲದ ಯುವಕನೊಬ್ಬನ ಪರಿಚಯವಾಗಿತ್ತು. ಆತ ಲಂಡನ್‌ನಲ್ಲಿ ಉತ್ತಮ ಕೆಲಸದಲ್ಲಿದ್ದಾನೆ ಎಂದು ಯುವಕನ ಕಡೆಯವರು ನಂಬಿಸಿದ್ದರಿಂದ ಮದುವೆ ನಿಶ್ಚಯ ಮಾಡಲಾಗಿತ್ತು.

ಫೋನ್ ಸಂಭಾಷಣೆ – ಬೆಳೆದ ಪ್ರೀತಿ:

ಮದುವೆ ನಿಶ್ಚಯವಾದ ಬಳಿಕ ಶ್ರೀಲೇಖಾ ಮತ್ತು ಯುವಕ ನಿರಂತರವಾಗಿ ಫೋನ್‌ನಲ್ಲಿ ಮಾತನಾಡುತ್ತಾ ಹತ್ತಿರವಾಗಿದ್ದರು. ಆದರೆ ಮದುವೆ ಸಿದ್ಧತೆಗಳು ನಡೆಯುತ್ತಿದ್ದಂತೆಯೇ ಯುವಕನ ಅಸಲಿಯತ್ತು ಹೊರಬಿದ್ದಿದೆ. ಆತ ಲಂಡನ್‌ನಲ್ಲಿ ಇಲ್ಲ, ಬದಲಾಗಿ ಮೈಲಾಡುತುರೈನಲ್ಲಿಯೇ ಕೋಳಿ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾನೆ ಎಂಬ ಸತ್ಯ ಪೋಷಕರಿಗೆ ತಿಳಿದುಬಂದಿದೆ.

ಮದುವೆ ರದ್ದು – ಯುವತಿಯ ಹಠ:

ಮಗಳ ಭವಿಷ್ಯದ ದೃಷ್ಟಿಯಿಂದ ಪೋಷಕರು ತಕ್ಷಣವೇ ಎಚ್ಚೆತ್ತುಕೊಂಡು ಈ ಮದುವೆಯನ್ನು ರದ್ದುಗೊಳಿಸಿ, ಬೇರೆ ವರನ ಹುಡುಕಾಟ ಆರಂಭಿಸಿದ್ದರು. ಆದರೆ ಇದನ್ನು ತೀವ್ರವಾಗಿ ವಿರೋಧಿಸಿದ ಶ್ರೀಲೇಖಾ, “ಆತ ಏನೇ ಕೆಲಸ ಮಾಡುತ್ತಿದ್ದರೂ ಆತನನ್ನೇ ಮದುವೆಯಾಗುತ್ತೇನೆ” ಎಂದು ಪೋಷಕರ ಬಳಿ ಪಟ್ಟು ಹಿಡಿದಿದ್ದಳು. ಇದರಿಂದಾಗಿ ಮನೆಯಲ್ಲಿ ಪ್ರತಿದಿನ ಜಗಳ ನಡೆಯುತ್ತಿತ್ತು.

ದುರಂತ ಅಂತ್ಯ:

ಇದೇ ವಿಚಾರವಾಗಿ ಮನೆಯಲ್ಲಿ ತೀವ್ರ ವಾಗ್ವಾದ ನಡೆದಿದ್ದು, ಇದರಿಂದ ತೀವ್ರ ಮನನೊಂದ ಶ್ರೀಲೇಖಾ ಕೆಳಮಹಡಿಯಲ್ಲಿದ್ದ ಸೈಕಲ್ ರಿಪೇರಿ ಅಂಗಡಿಯಲ್ಲಿದ್ದ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾಳೆ. ಘಟನೆಯಿಂದ ಇಡೀ ತಿರುವಾರೂರು ನಗರವೇ ಶೋಕಸಾಗರದಲ್ಲಿ ಮುಳುಗಿದೆ.

Share

Leave a comment

Leave a Reply

Your email address will not be published. Required fields are marked *

Recent Comments

No comments to show.
Related Articles