Home ಕ್ರೀಡೆ ಪಾಕ್ ಆಟಗಾರರೊಂದಿಗೆ ಸೇರ್ಕೊಂಡು ಫೈಟರ್ ಜೆಟ್ ಅಪಘಾತದ ರೀತಿಯಲ್ಲಿ ಸಂಭ್ರಮಾಚರಣೆ ನಡೆಸಿದ ಪಾಕಿಸ್ತಾನಿ ಅಂಪೈರ್: ಭಾರತದ ಅಂಧರ ಕ್ರಿಕೆಟ್ ಸಂಘ ವಿರೋಧ!
ಕ್ರೀಡೆದಾವಣಗೆರೆನವದೆಹಲಿಬೆಂಗಳೂರು

ಪಾಕ್ ಆಟಗಾರರೊಂದಿಗೆ ಸೇರ್ಕೊಂಡು ಫೈಟರ್ ಜೆಟ್ ಅಪಘಾತದ ರೀತಿಯಲ್ಲಿ ಸಂಭ್ರಮಾಚರಣೆ ನಡೆಸಿದ ಪಾಕಿಸ್ತಾನಿ ಅಂಪೈರ್: ಭಾರತದ ಅಂಧರ ಕ್ರಿಕೆಟ್ ಸಂಘ ವಿರೋಧ!

Share
ಅಂಪೈರ್
Share

ನವದೆಹಲಿ: ಅಂಧರ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದ ವಿವಾದ ಬೆನ್ನಲ್ಲೇ, ಪಾಕಿಸ್ತಾನದ ಆಟಗಾರರೊಂದಿಗೆ ಸೇರಿಕೊಂಡು ಫೈಟರ್ ಜೆಟ್ ಅಪಘಾತದ ರೀತಿಯಲ್ಲಿ ಸಂಭ್ರಮಾಚರಣೆ ನಡೆಸಿದ ಪಾಕಿಸ್ತಾನಿ ಅಂಪೈರ್ ನಡವಳಿಕೆಯನ್ನು ಭಾರತದ ಅಂಧರ ಕ್ರಿಕೆಟ್ ಸಂಘ ತೀವ್ರವಾಗಿ ಪ್ರಶ್ನಿಸಿದೆ.

ವಿಡಿಯೋ ವೀಕ್ಷಿಸಲು ಈ ಲಿಂಕ್ ಕ್ಲಿಕ್ ಮಾಡಿ: 

ಢಾಕಾದಲ್ಲಿ ನಡೆದ ಮಳೆಯಿಂದ ರದ್ದಾದ ಅಂಧರ ಏಷ್ಯಾ ಕಪ್ ಫೈನಲ್‌ನಲ್ಲಿ ಪಾಕಿಸ್ತಾನವನ್ನು ವಿಜೇತರೆಂದು ಘೋಷಿಸಿದ್ದನ್ನು ವಿರೋಧಿಸಿ ಭಾರತ ತಂಡವು ಪ್ರಶಸ್ತಿ ಪ್ರದಾನ ಸಮಾರಂಭವನ್ನು ಬಹಿಷ್ಕರಿಸಿತ್ತು. ಇದೀಗ ಅಂಪೈರ್ ಒಬ್ಬರು ಯಾವುದೇ ಪಕ್ಷಪಾತವಿಲ್ಲದೆ ತಟಸ್ಥವಾಗಿರಬೇಕಾದ ನಿಯಮವನ್ನು ಮೀರಿ ಪಾಕ್ ಆಟಗಾರರ ಜತೆ ಸಂಭ್ರಮಿಸಿರುವುದು ಮತ್ತಷ್ಟು ವಿವಾದಕ್ಕೆ ಕಾರಣವಾಗಿದೆ.

ಅಂಪೈರ್ ತಟಸ್ಥತೆಯ ಪ್ರಶ್ನೆ: ಇಡೀ ಟೂರ್ನಿಯಲ್ಲಿ ಅಧಿಕಾರಿಯಾಗಿದ್ದ ಪಾಕಿಸ್ತಾನಿ ಅಂಪೈರ್, ಪಾಕ್ ಆಟಗಾರರೊಂದಿಗೆ ವಿವಾದಾತ್ಮಕ ಸನ್ನೆಗಳ ಮೂಲಕ ಸಂಭ್ರಮಾಚರಣೆಯಲ್ಲಿ ತೊಡಗಿರುವ ವೀಡಿಯೊವನ್ನು CABI ಖಂಡಿಸಿದ್ದು, ಅಂಪೈರ್‌ಗಳು ಯಾವಾಗಲೂ ತಟಸ್ಥರಾಗಿರಬೇಕು ಎಂದು ಆಗ್ರಹಿಸಿದೆ.

ಫೈನಲ್ ವಿವಾದದ ಹಿನ್ನೆಲೆ: ಮೀಸಲು ದಿನವಿಲ್ಲದ ಕಾರಣ ಫೈನಲ್ ಪಂದ್ಯ ರದ್ದಾದ ಬಳಿಕ ಉಭಯ ದೇಶಗಳನ್ನು ಜಂಟಿ ವಿಜೇತರಾಗಿ ಘೋಷಿಸುವಂತೆ ತಾಂತ್ರಿಕ ಸಮಿತಿ ಶಿಫಾರಸು ಮಾಡಿದ್ದರೂ, ವಿಶ್ವ ಅಂಧರ ಕ್ರಿಕೆಟ್ ಕೌನ್ಸಿಲ್ (WBCC) ಅಧ್ಯಕ್ಷ ಸುಲ್ತಾನ್ ಶಾ ಅದನ್ನು ಮೀರಿ ಪಾಕಿಸ್ತಾನವನ್ನು ವಿಜೇತರೆಂದು ಬಲವಂತವಾಗಿ ಘೋಷಿಸಿದ್ದಾರೆ ಎಂದು ಸಿಎಬಿಐ ಕಾರ್ಯದರ್ಶಿ ಶೈಲೇಂದ್ರ ಆರೋಪಿಸಿದ್ದಾರೆ.

ಭಾರತೀಯ ತಂಡದ ಬಹಿಷ್ಕಾರ: ನೆಟ್ ರನ್ ರೇಟ್ ಆಧರಿಸಿ ವಿಜೇತ ಘೋಷಿಸಿದ್ದನ್ನು ವಿರೋಧಿಸಿ ಭಾರತ ತಂಡದ ಆಟಗಾರರು ಪ್ರಶಸ್ತಿ ಪ್ರದಾನ ಸಮಾರಂಭದಿಂದ ದೂರ ಉಳಿದಿದ್ದು, ಸಮಸ್ಯೆ ಬಗೆಹರಿಯುವವರೆಗೆ ಪಾಕಿಸ್ತಾನದೊಂದಿಗೆ ಭವಿಷ್ಯದ ಪಂದ್ಯಗಳನ್ನು ಆಡುವುದಿಲ್ಲ ಎಚ್ಚರಿಕೆ ನೀಡಿದ್ದಾರೆ.

ವಿಡಿಯೋ ವೀಕ್ಷಿಸಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ:

ಆಟದ ಮೈದಾನದಲ್ಲಿ ಅಥವಾ ಹೊರಗೆ ಕ್ರೀಡಾಸ್ಪೂರ್ತಿಗೆ ಧಕ್ಕೆ ತರುವ ಇಂತಹ ವರ್ತನೆಗಳು ಉಭಯ ದೇಶಗಳ ನಡುವಿನ ಕ್ರಿಕೆಟ್ ಸಂಬಂಧವನ್ನು ಮತ್ತಷ್ಟು ಹದಗೆಡಿಸುತ್ತಿವೆ ಎಂದು ಕ್ರೀಡಾ ವಲಯದಲ್ಲಿ ಚರ್ಚೆಯಾಗುತ್ತಿದೆ.

Share
Related Articles