SUDDIKSHANA KANNADA NEWS/ DAVANAGERE/ DATE:22-02-2025
ದಾವಣಗೆರೆ: ವೃದ್ಧ ಮಹಿಳೆಯ ಸರಗಳ್ಳತನ ಮಾಡಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಕೆಟಿಜೆ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.
ಮೂಲತಃ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಉಚ್ಚಂಗಿದುರ್ಗದ ದಾವಣಗೆರೆ ತಾಲೂಕಿನ ತೋಳಹಹುಣಸೆ ಗ್ರಾಮದಲ್ಲಿ ಪೇಟೆ್ ಕೆಲಸ ಮಾಡುತ್ತಿದ್ದ ಗಜೇಂದ್ರ ಕೆ. (25) ಹಾಗೂ ಕೂಲಿ ಕಾರ್ಮಿಕ ಹನುಮಂತನಾಯ್ಕ (35) ಬಂಧಿತ ಆರೋಪಿಗಳು. ಆರೋಪಿಗಳನ್ನು ಭೂಮಿಕಾ ನಗರದ ಚೆಕ್ ಪೋಸ್ಟ್ ನಲ್ಲಿ ವಶಕ್ಕೆ ಪಡೆದು ಬಂಧಿಸಲಾಗಿದೆ.
ನಗರದ ಜೀವನ್ ಭೀಮಾನಗರದ 2ನೇ ಮುಖ್ಯ ರಸ್ತೆಯಲ್ಲಿ ಬರುತ್ತಿರುವಾಗ ನಾಗರತ್ನ ಜಿ. ಎಸ್. (67 ವರ್ಷ) ಯಾರೋ ಇಬ್ಬರು ಅಸಾಮಿಗಳು ಬೈಕಿನಲ್ಲಿ ಬಂದು ಕೊರಳಲ್ಲಿದ್ದ 35 ಗ್ರಾಂ ಬಂಗಾರದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದರು.
2023ರ ಫೆಬ್ರವರಿ 25ರಂದು ನೀಡಿದ ದೂರಿನ ಮೇರೆಗೆ ಕೆ.ಟಿ.ಜೆ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕೆಟಿಜೆ ನಗರ ಠಾಣೆಯ ಪೊಲೀಸ್ ನಿರೀಕ್ಷಕಸುನೀಲ್ ಕುಮಾರ್ ಹೆಚ್.ಎಸ್. ನೇತೃತ್ವದಲ್ಲಿ ಅಧಿಕಾರಿ ಸಿಬ್ಬಂದಿರವರನ್ನೊಳಗೊಂಡ ತಂಡವು ಆರೋಪಿಗಳಾದ ಕೆ. ಗಜೇಂದ್ರ ಮತ್ತು ಹನುಮಂತನಾಯ್ಕನನ್ನು ಭೂಮಿಕಾ ನಗರ ಚೆಕ್ ಪೋಸ್ಟ್ ನಲ್ಲಿ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ.
ಈ ವೇಳೆ ಆರೋಪಿತರು ಸುಲಿಗೆ ಮಾಡಿಕೊಂಡು ಹೋಗಿದ್ದ ಕೆ.ಟಿಜೆ ನಗರ ಪೊಲೀಸ್ ಠಾಣೆ ವ್ಯಾಪ್ಕಿಯಲ್ಲಿನ 2,50,000 ರೂ ಮೌಲ್ಯದ 34.730 ಗ್ರಾಂ ಬಂಗಾರದ ಸರ ಮತ್ತು ಕೃತ್ಯಕ್ಕೆ ಬಳಸಿದ್ದ ಕಳ್ಳತನ ಮಾಡಿಕೊಂಡು ಬಂದಿದ್ದ 1,00,000 ಬೆಲೆ ಬಾಳುವ ಪಲ್ಸರ್ ಬೈಕ್ ಸೇರಿದಂತೆ ಒಟ್ಟು 3,50,000 ರೂ ಬೆಲೆಯ ಬಂಗಾರದ ಸರ ಮತ್ತು ಪಲ್ಸರ್ ಬೈಕನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಪತ್ತೆ ಕಾರ್ಯದಲ್ಲಿ ಯಶಸ್ವಿಯಾದ ಕೆಟಿಜೆ ನಗರ ಠಾಣೆಯ ಪೊಲೀಸ್ ನಿರೀಕ್ಷಕ ಸುನೀಲ್ ಕುಮಾರ್.ಹೆಚ್.ಎಸ್., ಪಿ.ಎಸ್.ಐ. ಲತಾ ಆರ್ ಹಾಗೂ ಸಿಬ್ಬಂದಿಗಳಾದ ಸುರೇಶ್ ಬಾಬು, ಮಹಮದ್ ರಫಿ, ಗಿರೀಶ್ ಗೌಡ, ಸಿದ್ದಪ್ಪ, ಮಂಜಪ್ಪ, ನಾಗರಾಜ, ಡಿ.ಬಿ. ಗೀತಾ ಮತ್ತು ಸ್ಮಾರ್ಟ್ ಸಿಟಿ ಕಮಾಂಡ್ ಸೆಂಟರ್ ನ ಸಿಬ್ಬಂದಿಯವರಾದ ಮಾರುತಿ ಮತ್ತು ಸೋಮು ಅವರನ್ನು ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾಪ್ರಶಾಂತ್ ಅವರು ಶ್ಲಾಘಿಸಿದ್ದಾರೆ.