SUDDIKSHANA KANNADA NEWS/ DAVANAGERE/ DATE:09-01-2024
ಚಿತ್ರದುರ್ಗ: ಹೆತ್ತ ಕರುಳನ್ನೇ ಕಿವುಚಿ ಹಾಕಿದ್ದ ಕ್ರೂರ ತಾಯಿ ಅಂತೂ ಪೊಲೀಸರ ಬಲೆಗೆ ಬಿದ್ದಿದ್ದಾಳೆ.
ಗೋವಾದ ಅಪಾರ್ಟ್ಮಟ್ ನಲ್ಲಿ ಮಗುವನ್ನು ಕೊಂದಿದ್ದ ತಾಯಿ ಬ್ಯಾಗ್ ನಲ್ಲಿ ಮಗುವಿನ ಶವ ಕರ್ನಾಟಕಕ್ಕೆ ತರುವಾಗ ಪೊಲೀಸ್ ವಶಕ್ಕೆ ಪಡೆಯಲಾಗಿತ್ತು. ಚಿತ್ರದುರ್ಗ ಜಿಲ್ಲೆ, ಹಿರಿಯೂರು ತಾಲೂಕಿನ ಐಮಂಗಲ
ಪೊಲೀಸರಿಂದ ಬಂಧಿಸಲಾಗಿದೆ.
ಸುಚೇತನಾ ಸೇಠ್ ಪೊಲೀಸರಿಗೆ ಸೆರೆ ಸಿಕ್ಕ ಹಂತಕ ತಾಯಿ. ಗೋವಾದ ಅಪಾರ್ಟ್ ಮೆಂಟ್ ನಲ್ಲಿ ಮಗುವನ್ನು ಕೊಂದಿದ್ದ ತಾಯಿ ಬ್ಯಾಗ್ ನಲ್ಲಿ ಮಗುವಿನ ಶವ ಕರ್ನಾಟಕಕ್ಕೆ ತರುವಾಗ ಪೊಲೀಸ್ ವಶಕ್ಕೆ ಪಡೆದಿದ್ದು, ಚಿತ್ರದುರ್ಗ ಜಿಲ್ಲೆ, ಹಿರಿಯೂರು ತಾಲೂಕಿನ ಐಮಂಗಲ ಪೊಲೀಸರು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಉತ್ತರ ಗೋವಾ ಕ್ಯಾಂಡೋಲಿಮ್ ಸರ್ವೀಸ್ ಅಪಾರ್ಟಮೆಂಟ್ ನಲ್ಲಿ ಘಟನೆ ನಡೆದಿದ್ದು, ಬೆಂಗಳೂರಿಗೆ ತೆರಳುತ್ತಿದ್ದ ತಾಯಿ ಸುಚನಾ ಸೇಠಳನ್ನು ಪೊಲೀಸ್ ವಶಕ್ಕೆ ಪಡೆಯಲಾಗಿದೆ.
ಕರ್ನಾಟಕಕ್ಕೆ ಹಿಂತಿರುಗಲು ಟ್ಯಾಕ್ಸಿ ಬುಕ್ ಮಾಡಿದ್ದ ಸುಚನಾ ಸೇಠ್ ಬೆಂಗಳೂರಿನ ಮ್ಯಾನ್ ಸ್ಟಾರ್ಟ್ ಆಫ್ ಸಂಸ್ಥಾಪಕೆ ಹಾಗೂ ಸಿಇಓ ಕೂಡ ಆಗಿದ್ದಳು. ಅಪಾರ್ಟಮೆಂಟ್ ಸ್ವಚ್ಛಗೊಳಿಸುವ ವೇಳೆ ಭದ್ರತಾ ಸಿಬ್ಬಂದಿಯಿಂದ ಘಟನೆ ಬಹಿರಂಗವಾಗಿತ್ತು.
ಮನೆಯಲ್ಲಿ ರಕ್ತದ ಕಲೆ ಇರುವ ಕುರಿತು ಕ್ಯಾಲಂಗೂಟ್ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಕೂಡಲೇ ಎಚ್ಚತ್ತ ಭದ್ರತಾ ಸಿಬ್ಬಂದಿಯಿಂದ ಪೊಲೀಸರಿಗೆ ಮಾಹಿತಿ ಕೊಡಲಾಗಿತ್ತು. ಗೋವಾ ಪೊಲೀಸರಿಂದ ಚಿತ್ರದುರ್ಗದ ಐಮಂಗಲ ಪೊಲೀಸರಿಗೆ ಮಾಹಿತಿ ನೀಡಿದ ಮೇರೆಗೆ ಮಹಿಳೆಯನ್ನು ಬಂಧಿಸಲಾಗಿದೆ. ತಡರಾತ್ರಿ ಆರೋಪಿ ಸುಚನಾ ಸೇಠ್ ರನ್ನು ಗೋವಾ ಪೊಲೀಸರಿಗೆ ಹಸ್ತಾಂತರ ಮಾಡಲಾಗಿದೆ. ಆದ್ರೆ, ಶವಾಗಾರದಲ್ಲಿ ಮಗು ಶವ ಇದ್ದು, ಮರಣೋತ್ತರ ಪರೀಕ್ಷೆ ಇನ್ನೂ ಮುಕ್ತಾಯ ಕಂಡಿಲ್ಲ. ಸಂಬಂಧಿಕರು ಇನ್ನೂ ಬಾರದಿರುವ ಕಾರಣ ಆಗಿಲ್ಲ.ಒಟ್ಟಿನಲ್ಲಿ ತನ್ನ ಮಗುವನ್ನೇ ಕೊಂದಿದ್ದ ಹಂತಕಿಗೆ ತಕ್ಕ ಶಿಕ್ಷೆಯಾಗಬೇಕು. ಗಲ್ಲಿಗೇರಿಸಬೇಕು. ಉನ್ನತ ಹುದ್ದೆಯಲ್ಲಿದ್ದರೂ ಮಗು ಕೊಂದ ಈಕೆ ಬದುಕಿರಬಾರದು ಎಂದು ಜನರು ಆಗ್ರಹಿಸಿದ್ದಾರೆ.