ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

BIG BREAKING: ಮದುವೆ ವಾರ್ಷಿಕೋತ್ಸವ ಮುನ್ನವೇ ಕೊಲೆಗೀಡಾದ ರೇಣುಕಾಸ್ವಾಮಿ: ಪತಿ ನೆನೆದು ಪತ್ನಿ, ಕುಟುಂಬಸ್ಥರ ಕಣ್ಣೀರ ಕೋಡಿ….!

On: June 11, 2024 6:10 PM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:11-06-2024

ದಾವಣಗೆರೆ: ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಗೆಳತಿ ಪವಿತ್ರಾ ಗೌಡರಿಗೆ ಅಶ್ಲೀಲ ಸಂದೇಶ ರವಾನೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಕೊಲೆಗೀಡಾಗಿರುವ ಚಿತ್ರದುರ್ಗದ ರೇಣುಕಾಸ್ವಾಮಿ ಕುಟುಂಬ, ಸಂಬಂಧಿಕರು, ಸ್ನೇಹಿತರು, ನೆರೆಹೊರೆಯವರು ಕಣ್ಣೀರು ಸುರಿಸುತ್ತಿದ್ದಾರೆ. ಇನ್ನು ಆಕೆಯು ಪತಿ ನೆನೆದು ಗಳಗಳ ಅಳುತ್ತಿದ್ದಾರೆ. ಗರ್ಭಿಣಿಯಾಗಿರುವ ಆಕೆಯನ್ನು ಸಂತೈಸಲು ಮುಂದಾದರೂ ಕಣ್ಣೀರು ಸುರಿಸುತ್ತಲೇ ಪತ್ನಿ ನೆನೆದು ಗೋಳಾಡುತ್ತಿರುವ ದೃಶ್ಯ ಕರುಳು ಚುರುಕ್ ಎನಿಸುತ್ತಿದೆ.

ಚಿತ್ರದುರ್ಗದ ನಗರದ ಲಕ್ಷ್ಮೀ ವೆಂಕಟೇಶ್ವರ ಬಡಾವಣೆಯ ನಿವಾಸಿ ಕೆಇಬಿ ನಿವೃತ್ತ ಇಂಜಿನಿಯರ್ ಕಾಶಿನಾಥ್ ಶಿವನಗೌಡ್ರು, ರತ್ನ ಪ್ರಭಾ ದಂಪತಿಯ ಪುತ್ರನಾಗಿರುವ ರೇಣುಕಾಸ್ವಾಮಿ, ಕಳೆದ 1 ವರ್ಷದ ಹಿಂದೆಯಷ್ಟೆ ಸಹನಾ ಎಂಬ ಯುವತಿಯನ್ನು
ವಿವಾಹವಾಗಿದ್ದರು. ರೇಣುಕಾ‌ಸ್ವಾಮಿ ಕಳೆದ 3-4 ವರ್ಷಗಳಿಂದ ನಗರದ ಅಪೋಲೋ ಮೆಡಿಕಲ್ ಶಾಪ್ ನಲ್ಲಿ ಸ್ಟೋರ್ ಕೀಪರ್ ಆಗಿ ಕೆಲಸ ಮಾಡುತ್ತಿದ್ದು, ನಾಲ್ಕೈದು ತಿಂಗಳಿಂದ ಐಯುಡಿಪಿ ಬಡಾವಣೆಯ ಫಾರ್ಮಸಿಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ಹೇಳಲಾಗುತ್ತಿದ್ದು, ಕೆಲಸಕ್ಕೆ ಹೋಗಿದ್ದ ರೇಣುಕಾಸ್ವಾಮಿ ಶನಿವಾರ ಸಂಜೆಯ ನಂತರ ಕಿಡ್ನಾಪ್ ಆಗಿರುವ ಶಂಕೆ ವ್ಯಕ್ತವಾಗಿದೆ.

ರೇಣುಕಾಸ್ವಾಮಿ ಪತ್ನಿ ಐದು ತಿಂಗಳ ಗರ್ಭಿಣಿ:

ಬೆಂಗಳೂರಿನ ಕಾಮಾಕ್ಷಿ ಪಾಳ್ಯ ಠಾಣೆ ವ್ಯಾಪ್ತಿಯಲ್ಲಿ ಕೊಲೆಯಾದ ರೇಣುಕಾಸ್ವಾಮಿ ಕಳೆದ 1 ವರ್ಷದ ಹಿಂದೆಯಷ್ಟೆ ಸಹನಾ ಎಂಬ ಯುವತಿಯನ್ನು ವಿವಾಹವಾಗಿದ್ದರು. ಈಗ 5 ತಿಂಗಳ ಗರ್ಭಿಣಿ ಎಂಬ ಮಾಹಿತಿ ಇದೆ. ಜೂ. 25ರಂರು ವಿವಾಹ ವಾರ್ಷಿಕೋತ್ಸವ ಸಮಾರಂಭ ಆರಿಸಿಕೊಳ್ಳಬೇಕಿತ್ತು. ಆದ್ರೆ, ವಿಧಿಯಾಟವೇ ಬೇರೆ ಆಗಿತ್ತು.

ಕೆಲಸಕ್ಕೆ ಹೋಗಿದ್ದ ಮಗ ಮನೆಗೆ ಹಿಂದಿರುಗಿಲ್ಲ. ಇದು ಕುಟುಂಬಸ್ಥರಲ್ಲಿ ಆತಂಕಕ್ಕೆ ಕಾರಣವಾಗಿತ್ತು. ಚಿತ್ರದುರ್ಗದ ಚಳ್ಳಕೆರೆ ಗೇಟ್ ಬಳಿಯ ಬಾಲಾಜಿ ಬಾರ್ ಹತ್ತಿರ ಬೈಕ್ ಪತ್ತೆಯಾಗಿತ್ತು. ಇದರಿಂದ ಇಡೀ ಕುಟುಂಬ ಆತಂಕಗೊಂಡಿದ್ದರು. ಜೂ.10ರಂದು  ಕಾಮಾಕ್ಷಿ ಪಾಳ್ಯ ವ್ಯಾಪ್ತಿಯಲ್ಲಿ ಮೃತ ದೇಹ ಪತ್ತೆಯಾಗಿದ್ದು, ನಿನ್ನೆ ಮಧ್ಯಾಹ್ನ ಕಾಮಕ್ಷಿಪಾಳ್ಯ ಪೊಲೀಸರು ಪೊಷಕರಿಗೆ ಕರೆ ಮಾಡಿ ವಿಷಯ ತಿಳಿಸಿದ್ದು, ಇಡೀ ಕುಟುಂಬ ದಿಗ್ಭ್ರಂತರಾಗಿದ್ದಾರೆ. ಕೊಲೆ ವಿಚಾರ ತಿಳಿಯುತ್ತಿದ್ದಂತೆ ಸ್ನೇಹಿತರು, ಹಿತೈಷಿಗಳು ಮನೆಯತ್ತ ದೌಡಾಯಿಸುತ್ತಿದ್ದಾರೆ.

ಬೆಂಗಳೂರಿನಲ್ಲಿ ಕೊಲೆಯಾಗಿರುವ ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಚಿತ್ರ ನಟ ದರ್ಶನ್ ಹತ್ತಿರ ಕರೆದುಕೊಂಡು ಹೋಗಿದ್ದ ದರ್ಶನ್ ಅಭಿಮಾನಿ ಸಂಘದ ಜಿಲ್ಲಾಧ್ಯಕ್ಷ ರಾಘವೇಂದ್ರ ಇದೀಗ ಪೊಲೀಸ್ ಬಂಧನದಲ್ಲಿದ್ದಾನೆ. ಬೆಂಗಳೂರಿನ ಕಾಮಾಕ್ಷಿ ಪಾಳ್ಯ ಠಾಣೆ ವ್ಯಾಪ್ತಿಯಲ್ಲಿ ಕೊಲೆಯಾದ ಚಿತ್ರದುರ್ಗದ ರೇಣುಕಾಸ್ವಾಮಿ ನಗರದ ಅಪೋಲೋ ಫಾರ್ಮಸಿಯಲ್ಲಿ ಕೆಲಸ ಮಾಡುತ್ತಿದ್ದು, ಈತನನ್ನು ಕಳೆದ ಶನಿವಾರ ದರ್ಶನ್ ಅಭಿಮಾನಿ ಸಂಘದ ಜಿಲ್ಲಾಧ್ಯಕ್ಷ ರಾಘವೇಂದ್ರ “ಬಾಸ್” ಕರೆಯುತ್ತಿದ್ದಾರೆ ಎಂದು ಹೇಳಿ ಬೆಂಗಳೂರಿಗೆ ಕರೆದು ಕೊಂಡು ಹೋಗಿದ್ದಾನೆ.

ಈ ಸಂಬಂಧ ಶನಿವಾರ ಮಧ್ಯಾಹ್ನ ಮನೆಗೆ ಪೋನ್ ಮೂಲಕ ಕರೆ ಮಾಡಿ, ಹಳೆಯ ಸ್ನೇಹಿತ ಬಂದಿದ್ದು, ಆತನ ಜೊತೆ ಊಟಕ್ಕೆ ಹೋಗುತ್ತೇನೆ. ಆದ್ದರಿಂದ ಮನೆಗೆ ಊಟಕ್ಕೆ ಬರುವುದಿಲ್ಲ ಎಂದು ಹೇಳಿರುವುದಾಗಿ ರೇಣುಕಾಸ್ವಾಮಿ ಪೋಷಕರು
ಮಾಹಿತಿ ನೀಡಿದ್ದಾರೆ.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment