Home ಕ್ರೈಂ ನ್ಯೂಸ್ ಅಮೆರಿಕದಲ್ಲಿ ವಾಕಿಂಗ್ ತೆರಳಿದ್ದ ತೆಲಂಗಾಣ ವಿದ್ಯಾರ್ಥಿನಿ ನಾಪತ್ತೆ: ಮೊಬೈಲ್ ಸ್ವಿಚ್ ಆಫ್, ಆತಂಕದಲ್ಲಿ ಪೋಷಕರು!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಅಮೆರಿಕದಲ್ಲಿ ವಾಕಿಂಗ್ ತೆರಳಿದ್ದ ತೆಲಂಗಾಣ ವಿದ್ಯಾರ್ಥಿನಿ ನಾಪತ್ತೆ: ಮೊಬೈಲ್ ಸ್ವಿಚ್ ಆಫ್, ಆತಂಕದಲ್ಲಿ ಪೋಷಕರು!

Share
ಅಮೆರಿಕ
Share

ಹೈದರಾಬಾದ್ / ಬಾಸ್ಟನ್: ಉನ್ನತ ವ್ಯಾಸಂಗಕ್ಕಾಗಿ ಅಮೆರಿಕದ ಬಾಸ್ಟನ್‌ಗೆ ತೆರಳಿದ್ದ ತೆಲಂಗಾಣದ ನಲ್ಗೊಂಡಾ ಜಿಲ್ಲೆಯ 23 ವರ್ಷದ ವಿದ್ಯಾರ್ಥಿನಿ ಶ್ರೀಜಾ ರೆಡ್ಡಿ ವಾಯುವಿಹಾರಕ್ಕೆಂದು ತೆರಳಿದವರು ವಾಪಸ್ ಬಾರದೆ ನಿಗೂಢವಾಗಿ ನಾಪತ್ತೆಯಾಗಿರುವ ಆತಂಕಕಾರಿ ಘಟನೆ ವರದಿಯಾಗಿದೆ. ನವೆಂಬರ್ 2 ರಂದು ಸಂಜೆ ರೂಮ್‌ನಿಂದ ವಾಕಿಂಗ್‌ಗೆ ತೆರಳಿದ್ದ ಶ್ರೀಜಾ ಅವರ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿದ್ದು, ಇದುವರೆಗೆ ಯಾವುದೇ ಸುಳಿವು ಸಿಕ್ಕಿಲ್ಲ.

ಬಾಸ್ಟನ್ ಪೊಲೀಸ್ ಇಲಾಖೆಯು ನವೆಂಬರ್ 4 ರಂದೇ ಅಧಿಕೃತವಾಗಿ ಮಿಸ್ಸಿಂಗ್ ಅಲರ್ಟ್ ಜಾರಿ ಮಾಡಿದ್ದು, ಸಾರ್ವಜನಿಕರ ಸಹಾಯವನ್ನು ಕೋರಿದೆ. ಶ್ರೀಜಾ ಅವರ ತಂದೆ ಕೊಯ್ಯಾ ಯಾದಗಿರಿ ರೆಡ್ಡಿ ಪ್ರತಿಕ್ರಿಯಿಸಿ, ತಮ್ಮ ಮಗಳು ಒಂದೂವರೆ ವರ್ಷದ ಹಿಂದೆ ಅಮೆರಿಕಕ್ಕೆ ತೆರಳಿದ್ದು, ಇತ್ತೀಚೆಗಷ್ಟೇ ಭಾರತಕ್ಕೆ ಬಂದು ಒಂದು ತಿಂಗಳು ಇದ್ದು ಹೋಗಿದ್ದಳು ಎಂದು ಕಣ್ಣೀರಿಟ್ಟಿದ್ದಾರೆ.

ಕೊನೆಯ ಲೊಕೇಷನ್: ಬೋಸ್ಟನ್‌ನ ಕಾರ್ಸನ್ ಬೀಚ್  ಅಥವಾ ಹಾರ್ಬರ್ ಪಾಯಿಂಟ್  ಪ್ರದೇಶದಲ್ಲಿ ಶ್ರೀಜಾ ಇರಬಹುದು ಎಂದು ಪೊಲೀಸರು ಶಂಕಿಸಿದ್ದು, ಆಕೆಯ ಕೊನೆಯ ಲೊಕೇಷನ್ ರೂಮ್‌ನಿಂದ ಅರ್ಧ ಕಿ.ಮೀ ದೂರದಲ್ಲೇ ಪತ್ತೆಯಾಗಿದೆ.

ಸಚಿವರ ಮಧ್ಯಸ್ಥಿಕೆ: ತೆಲಂಗಾಣ ಸಚಿವ ಕೋಮಟಿರೆಡ್ಡಿ ವೆಂಕಟ್ ರೆಡ್ಡಿ ಅವರು ಬೋಸ್ಟನ್‌ನಲ್ಲಿರುವ ಭಾರತೀಯ ದೂತವಾಸ ಕಚೇರಿ, ವಿದೇಶಾಂಗ ವ್ಯವಘಾರಗಳ ಸಚಿವಾಲಯ (MEA) ಹಾಗೂ ಅಮೆರಿಕದ ತೆಲುಗು ಸಂಘಟನೆಗಳ ಜೊತೆ ಸಂಪರ್ಕ ಸಾಧಿಸಿ ವಿದ್ಯಾರ್ಥಿನಿಯ ಪತ್ತೆಗೆ ನೆರವು ಕೋರಿದ್ದಾರೆ.

ಪೊಲೀಸ್ ಮನವಿ: ಶ್ರೀಜಾ ಅವರ ಬಗ್ಗೆ ಯಾವುದೇ ಮಾಹಿತಿ ದೊರೆತರೆ ತಕ್ಷಣ 911 ಗೆ ಅಥವಾ ಡಿಸ್ಟ್ರಿಕ್ಟ್ ಸಿ-11 (ಡಾರ್ಚೆಸ್ಟರ್) ಡಿಟೆಕ್ಟಿವ್‌ಗಳನ್ನು ಸಂಪರ್ಕಿಸುವಂತೆ ಬಾಸ್ಟನ್ ಪೊಲೀಸರು ಮನವಿ ಮಾಡಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Related Articles